ಅಪ್ರಾಪ್ತೆ ಬಾಲಕಿಯ ದೈಹಿಕ ಸಂಪರ್ಕ ಬೆಳಿಸಿದ ಭೂಪ

0
38
loading...

ಗರ್ಭೀಣಿಯಾದ ಬಳಿಕ ಬಿಟ್ಟು ಪೊಲೀಸ್ ಅತಿಥಿಯಾದ
ಕನ್ನಡಮ್ಮ ಸುದ್ದಿ
ಬೆಳಗಾವಿ:23: ಮದುವೆಯಾಗುವ ಭರವಸೆ ನೀಡಿ ಅಪ್ರಾಪ್ತ ವಯಸ್ಸಿನ ಯುವತಿಯ ಜತೆ ದೈಹಿಕ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾದಾಗ ಬಳಿಕೆ ಆಕೆಯೊಂದಿಗೆ ಊರು ಬಿಟ್ಟ ಪ್ರಿಯಕರ ಸುಮಾರು ಏಳು ತಿಂಗಳ ಕಾಲ ಆಕೆಯನ್ನು ತನ್ನ ದೈಹಿಕ ಕಾಮನೆಗೆ ಬಳಸಿ ಇದೀಗ ಕೈಬಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಿತ್ತೂರಿನ ಬಸರಗೋಡ ಗ್ರಾಮದ ಆಟೋ ಚಾಲಕ ರಾಜೂ ನಾಯ್ಕರ(24) ಎಂಬಾತನಿಗೂ ಅದೇ ಗ್ರಾಮದ 17ರ ಹರೆಯದ ಯುವತಿಗೂ ಸ್ನೇಹಾಂಕುರವಾಗಿದೆ. ಅಪ್ಪನನ್ನು ಕಳೆದುಕೊಂಡು ತನ್ನ ಅಮ್ಮ ಹಾಗೂ ತಮ್ಮನ ಜತೆ ಮನೆಯಲ್ಲಿ ಇದ್ದ ಪಿಯುಸಿ ಕಲಿತಿದ್ದ ಅದೇ ಗ್ರಾಮದ ಯುವತಿಗೆ ರಾಜೂ ಜತೆ ಸಲಿಗೆ ಬೆಳೆದಿದೆ. ತಮ್ಮ ಶಾಲೆಗೆ ಹಾಗೂ ಅಮ್ಮ ಕೂಲಿ ಕೆಲಸಕ್ಕೆ ಹೊರಟು ಹೋದ ನಂತರ ಮನೆಯಲ್ಲಿ ಯಾರೂ ಇಲ್ಲದೆ ಇದ್ದುದನ್ನು ಖಾತ್ರಿ ಪಡಿಸಿಕೊಂಡು ಪ್ರತಿದಿನ ಬರುತ್ತಿದ್ದ ರಾಜೂ ತನ್ನ ಬೆಣ್ಣೆಯ ಮಾತಿನಿಂದ ಅಪ್ರಾಪ್ತ ಬಾಲಕಿಯನ್ನು ಒಲಿಸಿಕೊಂಡಿದ್ದಾನೆ. ನಿಧಾನವಾಗಿ ಆತನ ಮಾತಿನ ಬಲೆಗೆ ಬಿದ್ದ ಯುವತಿ 2016ರ ಜನವರಿಯಲ್ಲಿ ಆತನೊಂದಿಗೆ ಮೊದಲ ಬಾರಿಗೆ ದೈಹಿಕ ಸಂಬಂಧ ನಡೆಸಿದ್ದಾಳೆ.
ಆದರೆ 2016ರಲ್ಲಿ ಇದ್ದಕ್ಕಿದ್ದಂತೆಯೇ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ತಾನೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ರಾಜು ಆಕೆ ಗರ್ಭಿಣಿಯಾಗಿದ್ದನ್ನು ಕೇಳಿ ತೀವ್ರ ಆತಂಕಕ್ಕೆ ಒಳಗಾಗಿದ್ದಾನೆ. ಅವಳನ್ನು ಮರಳಿ ಮನೆಯಲ್ಲಿ ಬಿಟ್ಟರೆ ವಿಷಯ ಎಲ್ಲಾ ಕಡೆ ಹರಡಿ ಅಪ್ರಾಪ್ತ ಯುವತಿಯ ಜತೆ ಲೈಂಗಿಕ ಸಂಬಂಧ ಬೆಳೆಸಿದ ಕಾರಣಕ್ಕೆ ಕಂಬಿ ಎಣಿಸಬೇಕಾದೀತು ಎಂಬ ಹೆದರಿಕೆಯೂ ಬಂದಿದೆ. ಹಾಗಾಗಿಯೇ ನಿಮ್ಮ ಮನೆಗೆ ಹೋಗುವುದು ಬೇಡ. ನಾವಿಬ್ಬರೂ ಪ್ರೇಮಿಗಳು. ನಿಮ್ಮ ಮನೆಯಲ್ಲಿ ಮದ್ವೆಗೆ ಒಪ್ಪದಿದ್ರೆ ಕಷ್ಟ. ಹಾಗಾಗಿ ಎಲ್ಲಾದರೂ ದೂರ ಓಡಿ ಹೋಗಿ ಮದುವೆಯಾಗೋಣ ಎಂದು ಪುಸಲಾಯಿಸಿ ಅವಳನ್ನು ಅಪಹರಿಸಿ ಬೆಳಗಾವಿಗೆ ಕರೆದುಕೊಂಡು ಬಂದಿದ್ದ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಹೇಳುತ್ತಾಳೆ.
ಈ ಮಧ್ಯೆ 2016ರ ಆಗಸ್ಟ್ ತಿಂಗಳಿನಲ್ಲಿ ಯುವತಿ ಪ್ರಾಪ್ತ ವಯಸ್ಕಳಾಗಿದ್ದಾಳೆ. ಆ ವೇಳೆಗಾಗಲೇ ಏಳು ತಿಂಗಳ ಗರ್ಭಿಣಿಯಾಗಿದ್ದ ಕಾರಣ ಇನ್ನು ಯಾವ ಅಡ್ಡಿಯೂ ಇಲ್ಲ. ಬಾ ಮದ್ವೆಯಾಗೋಣ ಎಂದು ಪ್ರಿಯಕರನಿಗೆ ದಂಬಾಲು ಬಿದ್ದಿದ್ದಾಳೆ. ಈ ವೇಳೆ ಮಾತು ತಪ್ಪಿದ ಪ್ರೇಮಿ, ಯಾವುದೇ ಕಾರಣಕ್ಕೂ ನಿನ್ನ ಜತೆ ಮದ್ವೆಯಾಗುವುದಿಲ್ಲ. ಇಷ್ಟವಿದ್ದರೆ ಹೀಗೆ ಇಬ್ರೂ ಇದ್ದು ಬಿಡೋಣ. ಇಲ್ಲವಾದರೆ ನಿನ್ನ ಅಮ್ಮನ ಮನೆಗೆ ಹೋಗು ಎಂದು ಜಗಳ ಕಾಯ್ದಿದ್ದಾನೆ.
ಮೊದಲಿನಿಂದಲೂ ಪ್ರೀತಿಯ ನಾಟಕವಾಡಿ, ಲೈಂಗಿಕ ಸಂಬಂಧ ಬೆಳೆಸಿ ಇದೀಗ ಮದುವೆಯಾಗಲು ಸಾಧ್ಯವಿಲ್ಲ ಎಂದ ಆತನ ಬಗ್ಗೆ ಯುವತಿ ಸಿಟ್ಟಿಗೆ ಎದ್ದಿದ್ದಾಳೆ. ತನ್ನನ್ನು ಅಪಹರಿಸಿ ನಿರಂತರ ಅತ್ಯಾಚಾರ ಎಸಗಿರುವ ಬಗ್ಗೆ ರಾಜೂ ಮೇಲೆ ಕಿತ್ತೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಗರ್ಭಿಯಾಗಿರುವ ಮಗಳಿಗೆ ತನ್ನ ತಾಯಿಯ ಮನೆಯಲ್ಲಿ ಸೂಕ್ತ ಔಷಧೋಪಚಾರವನ್ನು ನೀಡಲಾಗುತ್ತಿದೆ. ಆರೋಪಿ ಚಾಲಕ ರಾಜೂವನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

loading...

LEAVE A REPLY

Please enter your comment!
Please enter your name here