ಇಂದು ಪುರಾಣ ಮಂಗಲೋತ್ಸವ

0
19
loading...

ಗುಳೇದಗುಡ್ಡ 7: ಶ್ರಾವಣ ಮಾಸದ ಅಂಗವಾಗಿ ಸಮೀಪದ ಕೋಟೆಕಲ್ಲ ಗ್ರಾಮದ ಶ್ರೀ ಹೊಳೆ ಹುಚ್ಚೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ವರದಾನೇಶ್ವರಿ ಶ್ರೀ ಗುಡ್ಡಾಪುರ ದಾನಮ್ಮದೇವಿ ಪುರಾಣ ಮಂಗಲ ಕಾರ್ಯಕ್ರಮ ಸೆ. 8ರಂದು ನಡೆಯಲಿದೆ. ಸೆ. 8ರಂದು ಬೆಳಿಗ್ಗೆ ಕತೃಗದ್ದುಗೆಗೆ ರುದ್ರಾಭಿಷೇಕ, ಬಳಿಕ ಪುರಾಣ ಗ್ರಂಥದ ಭವ್ಯ ಮೆರವಣಿಗೆ ಗ್ರಾಮದಲ್ಲಿ ನಡೆಯಲಿದೆ. ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುವುದು.
ಸಂಜೆ 6 ಗಂಟೆಗೆ ನಡೆಯುವ ಪುರಾಣ ಮಂಗೋಲೋತ್ಸವ ಕಾರ್ಯಕ್ರಮದಲ್ಲಿ ಗಂಗಾವತಿಯ ಡಾ. ಕೊಟ್ಟೂರು ಸ್ವಾಮಿಗಳು ಸಾನಿಧ್ಯದಲ್ಲಿ ಮುಳುವಳ್ಳಿಯ ಮುರುಘರಾಜೇಂದ್ರ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ವಹಿಸುವರು. ಕಾರ್ಯಕ್ರಮದಲ್ಲಿ ಶ್ರೀ ಕುಮಾರ ವಿರೂಪಾಕ್ಷ ಸ್ವಾಮಿಗಳು, ಶ್ರೀ ಬೂದಿಶ್ವರ ಸ್ವಾಮಿಗಳು, ಶ್ರೀ ಶಂಕರರಾಜೇಂದ್ರ ಸ್ವಾಮಿಗಳು, ಶ್ರೀ ಕಾಶೀನಾಥ ಸ್ವಾಮಿಗಳು ಸಾನಿಧ್ಯ ವಹಿಸುವರು.
ಸೆ. 9 ರಂದು ಬೆಳಗ್ಗೆ 5:30 ಗಂಟೆಗೆ ಕೋಟೆಕಲ್ಲ ಗ್ರಾಮದಿಂದ ಶಿವಯೋಗ ಮಂದಿರಕ್ಕೆ ಪಾದಯಾತ್ರೆ ನಡೆಯಲಿದ್ದು, ಹುಚ್ಚೇಶ್ವರ ಮಹಾಸ್ವಾಮಿಗಳು, ಅಮರ ಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲ್ಲಿ ಪಾಲ್ಗೊಳ್ಳುವರು. ಕೋಟೆಕಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಗುಂಡಪ್ಪ ಎಸ್ ಕೋಟಿ ಕೋರಿರುತ್ತಾರೆ.

loading...

LEAVE A REPLY

Please enter your comment!
Please enter your name here