ಈ ಊರಿಗೆ ಒಬ್ಬನೇ ಗಣಪ…

0
22
loading...

ಇಲ್ಲಿ ಭಾಷಾ ತಾರತಮ್ಯವಿಲ್ಲ, ಧರ್ಮ ದ್ವೇಷಗಳಿಲ್ಲ

*ಖಾಜಾಮೈನುದ್ದೀನ್ ಪಟೇಲ್
ಬೆಳಗಾವಿ 8: ಇಂದಿನ ದಿನದಲ್ಲಿ ಪ್ರತಿಗ್ರಾಮದಲ್ಲಿ ಹತ್ತಾರು ಗಣಪತಿ ಮೂರ್ತಿ ಪ್ರತಿಸ್ಠಾಪನೆ ಮಾಡುತ್ತಿದ್ದು, ಆದರೆ ಇಲ್ಲಿ ಒಂದು ಗ್ರಾಮ ತದ್ವಿರುದ್ಧವಾಗಿ ಊರಿಗೆ ಒಂದೇ ಗಣಪನ್ನು ಸ್ಥಾಪಿಸಿ ಆದರ್ಶ ಮತ್ತು ಒಗ್ಗಟ್ಟಿನ ಗ್ರಾಮದ ಪಟ್ಟಪಡದಿದೆ.
ಹೌದು, ಅದು ನಿಜ ಬೆಳಗಾವಿ ತಾಲೂಕಿನ ಗೌಂಡವಾಡಿದಲ್ಲಿ ಸಾಮೂಹಿಕವಾಗಿ ಊರಿಗೆ ಒಬ್ಬ ಗಣಪನ್ನು ಸ್ಥಾಪನೆ ಮಾಡಿದ್ದು, ನಾಡಿಗೆ ಇದೊಂದು ಮಾದರಿಯಾಗಿದೆ. ಊರಿನ ಜನರಲ್ಲಿ ಬೇಧಭಾವಿಲ್ಲ. ಕಳೆದ 39 ವರ್ಷಗಳಿಂದ ಈ ಹಬ್ಬದ ಒಗ್ಗಟ್ಟು ಊರ ಪರಂಪರೆಯಾಗಿ ಬೆಳೆದುಬಂದಿದೆ.ಇದಕ್ಕೆ ಮೂಲ ಕಾರಣೀಭೂತರು ಗ್ರಾಮದ ಬಾಬುರಾವ ಕಡೋಲ್ಕರ ಅವರಾಗಿದ್ದಾರೆ. ಈ ಊರು ಸರ್ವಧರ್ಮೀಯರ, ಭಾಷಿಕರ ಒಗ್ಗಟ್ಟಿನ ಮನೆಯಾಗಿದೆ. ಅದಕ್ಕಾಗಿ 3 ಸಾವಿರ ಜನಸಂಖ್ಯೆಯ ಊರಿಗೆ ಗಣಪ ಒಬ್ಬನೇ ಆಗಿದ್ದಾನೆ.
ಇಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ, ಲಿಂಗಾಯತ ಸಮುದಾಯದವರಿದ್ದಾರೆ. ಇವರಲ್ಲಿ ಮರಾಠಿಗರ ಕುಟುಂಬಗಳೆ ಹೆಚ್ಚಾಗಿವೆ. ಎಲ್ಲರೂ ಸೇರಿ ಆ ಗಣಪತಿಯ ಮೂರ್ತಿಯನ್ನು ಸ್ಥಾಪನೆ ಮಾಡುತ್ತಾರೆ. ಪ್ರತಿಯೊಂದು ಮನೆಯವರು ತಮಗೆ ಸಾಧ್ಯವಿದ್ದಷ್ಟು ಹಬ್ಬದ ವಂತಿಗೆ ಕೊಟ್ಟು ಮೂರ್ತಿ ಪ್ರತಿಸ್ಠಾಪಿಸುತ್ತಾರೆ. ಏಕದಂತನಿಗೆ ಬೆಳಿಗ್ಗೆ- ಸಾಯಂಕಾಲದ ಪೂಜೆಯ ಸಂದರ್ಭದಲ್ಲಿ ಎಲ್ಲರೂ ಸೇರಿತ್ತಾರೆ.
ಇಲ್ಲಿಯ ಮತ್ತೊಂದು ವಿಶೇಷವೆಂದರೆ, ಗ್ರಾಮದ ಗಣ ಭಕ್ತರು ಗಣೇಶನನ್ನು ಬರಮಾಡಿಕೊಳ್ಳವ ಸಂದರ್ಭದಲ್ಲಿ ಊರಿನ ತುಂಬ ಮೆರವಣಿಗೆ ಮಾಡುತ್ತಾರೆ. ಈ ಮೆರವಣಿಗೆ ಸಾಂಪ್ರದಾಯಿಕ ವಾದ್ಯಗಳಿಂದ ಮನಕ್ಕೆ ಮುದ ನೀಡುತ್ತದೆ. ಶಬ್ದ ಮಾಲಿನ್ಯಕ್ಕೆ ಅವಕಾಶವಿಲ್ಲ, ಲೇಝೀಮು, ಜಾಂಝ್ ಪಥಕ, ಗಣೇಶನ ಘೋಷಣೆ ಇವಿಷ್ಟೇ ಗ್ರಾಮದ ಹಬ್ಬದ ಮೆರಗು. ಇನ್ನು 11 ದಿನದ ಗ್ರಾಮ ಗಣಪತಿಯ ವಿಸರ್ಜನೆ ಭಕ್ತಿ ಭಾವಗಳಿಂದ ಕೂಡಿರುತ್ತದೆ. ಇದೊಂದು ಗ್ರಾಮಸ್ಥರ ಗಣೇಶ ನಿರ್ಗಮದ ಭಾವನಾತ್ಮಕ ಭಕ್ತಿ ಸಂಬಂಧ ಎಂದರೆ ತಪ್ಪಾಗಲಾರದ್ದು. ಗಣೇಶ ವಿಸರ್ಜನೆ ಯಾವುದೇ ಗಣಘೋಶಣೆ, ವಾದ್ಯ ಮೇಳಗಳಿಲ್ಲದೆ ಭಕ್ತಿಯಿಂದ ನೆರವೇರಿಸಲಾಗುತ್ತದೆ.
ಜಿಲ್ಲೆಯ ಪಟ್ಟಣಗಳು, ನಗರ ಮತ್ತು ಗ್ರಾಮಗಳು ಈ ಆದರ್ಶವನ್ನು ಮತ್ತು ಊರ ಒಗ್ಗಟ್ಟನ್ನು ರೂಢಿಸಿಕೊಂಡರೆ, ಅದು ಒಂದು ನಿರಾತಂಕದ ಸುಂದರ ಗಣೇಶ ಹಬ್ಬವಾದೀತು.
ಗಣೇಶ ವಿಸರ್ಜನೆಯಂದು ಮಹಾಪ್ರಸಾದ ವಿತರಿಸಲಾಗುತ್ತದೆ.
ಸುತ್ತಮುತ್ತಲಿನ ನಾಲ್ಕಾರು ಹಳ್ಳಿಗರು ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಾರೆ. ಒಂದಡೆ ಗಣೇಶನ ನೆಪದಲ್ಲಿ ಊರ ಒಗ್ಗಟ್ಟು, ಇನ್ನೊಂದಡೆ ಸುತ್ತಲಿನ ಹಳ್ಳಿಗಳ ಸ್ನೇಹ ಸಂಪತ್ತು.

***
ಇಲ್ಲಿ ಭಾಷಾ ತಾರತಮ್ಯವಿಲ್ಲ, ಧರ್ಮದೇಷಗಳಿಲ್ಲ. ದೇವರುಗಳ ಬಗ್ಗೆ ತತ್ಸಾರವಿಲ್ಲ. ನಾವು ವಾಸಿಸುವ ಮನೆಗಳು ಬೇರೆ ಬೇರಿ ಆದರು ಊರುಮಾತ್ರ ಒಂದೇ. ನಮ್ಮ ಊರು ರಾಷ್ಟ್ರೀಯ ಭಾವೇಕತೆಯ ಅದು ನಮ್ಮ ಹೆಮ್ಮೆ.
ಸತೀಶ ಪಾಟೀಲ
ಗ್ರಾಮಸ್ಥ

loading...

LEAVE A REPLY

Please enter your comment!
Please enter your name here