ಉರಿ ಸೇನಾ ನೆಲೆ ದಾಳಿಗೆ ಪ್ರತ್ಯುತ್ತರ

0
17
loading...

ಗೋಕಾಕ 29: ಜಮ್ಮು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಕೇಲ್ ಹಾಗೂ ಭೀಮ್ ಬರ್‍ನ 7 ಉಗ್ರರ ಸೇನಾ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿ ನಾಶಪಡಿಸಿ ಇತ್ತೀಚೆಗೆ ಉರಿ ಸೇನಾ ನೆಲೆ ದಾಳಿಗೆ ಪ್ರತ್ಯುತ್ತರ ನೀಡಿದ್ದಕ್ಕಾಗಿ ಇಲ್ಲಿನ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್‍ನ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಗುರುವಾರದಂದು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್‍ನ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಭಾರತೀಯ ಸೈನಿಕರ ಪರ ಜೈಕಾರ ಹಾಕಿ ವಿಜಯೋತ್ಸವ ಆಚರಿಸಿದರು.
ಭಜರಂಗದಳದ ಜಿಲ್ಲಾ ಸಂಚಾಲಕ ಸದಾಶಿವ ಗುದಗಗೋಳ, ತಾಲೂಕಾ ಸಂಚಾಲಕ ಲಕ್ಷ್ಮಣ ಮಿಶಾಳೆ, ವಿಶ್ವ ಹಿಂದೂ ಪರಿಷತ್ ತಾಲೂಕಾ ಕಾರ್ಯದರ್ಶಿ ಕಿರಣ ಮಿರಜಕರ್, ನ್ಯಾಯವಾದಿ ಬಸವರಾಜ ಕಾಪಶಿ, ಪಿಂಟು ಓಸ್ವಾಲ, ಶ್ರೀಕಾಂತ್ ಕದಮ, ಪ್ರವೀಣ ಗೋಸಬಾಳ, ಅಜೀತ ವಾಕುಡೆ, ರಮೇಶ ಬಿರಡಿ, ದಯಾನಂದ ಮಾವರಕರ, ವಿಶ್ವನಾಥ ಕಂಬಾರ ಸೇರಿದಂತೆ ಅನೇಕ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ್ದರು.

loading...

LEAVE A REPLY

Please enter your comment!
Please enter your name here