ಎಲ್ಲ ದಾನಗಳಲ್ಲಿ ನೇತ್ರದಾನ ಅತ್ಯಂತ ಶ್ರೇಷ್ಠ

0
29
loading...

ಬೈಲಹೊಂಗಲ31: ಎಲ್ಲ ದಾನಗಳಲ್ಲಿ ನೇತ್ರದಾನ ಅತ್ಯಂತ ಶ್ರೇಷ್ಠವಾಗಿದೆ ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಅವರು ಬುಧವಾರ ಪಟ್ಟಣದ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ನÉೀತ್ರದಾನ-ಮಹಾದಾನ ಎಂಬ ನೇತ್ರದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಕಾರ್ನಿಯಾ ಅಂಧತ್ವವನ್ನು ಅನುಭವಿಸುತ್ತಿರುವವರ ಸಂಖ್ಯೆ ದಿನದಿಂದ ದನಿಕ್ಕೆ ಏರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಪಟತೊಟ್ಟಿದ್ದು, ಸರ್ಕಾರಿ ಸಂಸ್ಥೆಗಳು, ಅರೇ ಸರ್ಕಾರಿ ಸಂಸ್ಥೆಗಳು ಹಾಗೂ ಅನೇಕ ಸೇವಾ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಮುಂಬರುವ 2020 ಕ್ಕೆ ಭಾರತ ದೇಶದಲ್ಲಿ ಅಂಧತ್ವ ಸಂಪೂರ್ಣ ನಿರ್ಮೂಲನೆಯಾಗಬೇಕೆಂಬ ಕನಸಿಗೆ ನಾವೆಲ್ಲರೂ ಕೈ ಜೋಡಿಸುವದು ಅಗತ್ಯವಾಗಿದೆ. ಪರಿವಾರದ ಸಂಘಟನೆಯಾಗಿರುವ ‘ಸಕ್ಷಮ’ವು ಕಾರ್ನಿಯಾ ಅಂಧತ್ವದಿಂದ ಬಳಲುತ್ತಿರುವವರ ಬಾಳಿನಲ್ಲಿ ಬೆಳಕನ್ನು ನೀಡಲು ನಿರಂತರ ಕಾರ್ಯಪ್ರವೃತ್ತವಾಗಿವೆ. ಮೃತರಾದ ನಂತರ ನಮ್ಮ ಕಣ್ಣುಗಳನನು ದಾನಮಾಡಿ ಕಾರ್ನಿಯಾ ಅಂಧತ್ವದಿಂದ ಬಳಲುತ್ತಿರುವವರಿಗೆ ದೃಷ್ಟಿದಾನ ಮಾಡಿ ನಾವು ಪುನರ್‍ಜನ್ಮ ಪಡೆಯೋಣವೆಂಬ ಸಂಕಲ್ಪದೊಡನೆ ರಾಷ್ಟ್ರಾದಾಂತ್ಯ ಜನಜಾಗೃತಿ ಅಭಿಯಾನವನ್ನು ಕೈಗೊಂಡಿದೆ ಎಂದರಲ್ಲದೆ ಪಕ್ಷದ ಜಿಲ್ಲಾ ಮತ್ತು ಮಂಡಲಗಳಲ್ಲಿ ಜಾಗೃತಿ ಮೂಡಿಸಿ ನೇತ್ರದಾನ ಮಾಡುವಂತೆ ಎಲ್ಲರಿಗೂ ಕರೆ ನೀಡಿದರು.
ವೇದಿಕೆಯ ಮೇಲೆ ಹಿರಿಯ ವೈದ್ಯ ಡಾ. ಎಂ.ಎಸ್ ಹೊತ್ತಗಿಮಠ, ತಾಲೂಕಾ ವೈದ್ಯಾಧಿಕಾರಿÀ ಡಾ. ಸಂಜಯ ಸಿದ್ದಣ್ಣವರ, ಡಾ. ನಿರ್ಮಲಾ ಮಹಾಂತಶೆಟ್ಟಿ, ಮಡಿವಾಳಪ್ಪ ಹೋಟಿ, ಗುರಪಾದ ಕಳ್ಳಿ ವಿರೇಶ ಹೊಳೆಪ್ಪನವರ, ಮಲ್ಲನಗೌಡ ಗೌಡತಿ ಇದ್ದರು.
ಈ ಸಂದರ್ಭದಲ್ಲಿ ಮುರಗೇಶ ಗುಂಡ್ಲೂರ, ತಾಪಂ ಉಪಾಧ್ಯಕ್ಷÀ ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ವಕ್ಕುಂದಮಠ, ನಾಗರಾಜ ಗುಂಡ್ಲೂರ, ವಿಠ್ಠಲ ಅಂದಾಣಿ, ಬಸವರಾಜ ನೇಸರಗಿ, ಜಗದೀಶ ಜಕ್ಕಪ್ಪನವರ, ಪರಶುರಾಮ ರಾಯಬಾಗ, ರಫೀಕ ಬಡೇಗರ, ಬಾಬಣ್ಣ ಸುತಗಟ್ಟಿ, ಉಮೇಶಗೌಡ ಪಾಟೀಲ, ಮಾರಯತಿ ಕೊಂಡೂರ, ಆಸೀಫ ಗೋವೆ, ವಿಜಯ ಪಾಟೀಲ, ಶಿವು ಶಿರಸಂಗಿ, ಆಯ್.ಎಲ್. ಪಾಟೀಲ, ಮೋಹನ ಬಾಳಿ, ಬಿ.ಡಿ ಬಣಶೆಟ್ಟಿ, ಆನಂದ ಮೂಗಿ. ವಿಶಾಲ ಹೊಸೂರ, ಮಹಾಂತೇಶ ಮೂಗಿ, ನೀಲಪ್ಪ ಗುರುಸಿದ್ದಪ್ಪ ಕಲ್ಲೂರ, ಪ್ರಕಾಶ ಶಿವಬಸಪ್ಪ ಯರಡಾಲ, ಮಂಜು ಬಾಂವಿ, ಬಸವಂತ ಜಮನೂರ, ಸಿದ್ದನಗೌಡ ಪಾಟೀಲ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

loading...

LEAVE A REPLY

Please enter your comment!
Please enter your name here