ಐನಾಪೂರ ಪಿ.ಕೆ.ಪಿ.ಎಸ್.ಗೆ 54.65 ಲಕ್ಷ ರೂ ಲಾಭ

0
21
loading...

ಮೋಳೆ;- ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡ ಅಥಣಿ ತಾಲೂಕಿನ ಐನಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸನ್ 2015-16 ನೇ ಸಾಲಿನಲ್ಲಿ 54.65 ಲಕ್ಷ ರೂ ನಿವ್ವಳ ಲಾಭಗಳಿಳಿ ಅಥಣಿ ತಾಲೂಕಿನಲ್ಲಿಯೇ ಇತಿಹಾಸ ನಿರ್ಮಿಸಿದೆ ಎಂದು ಸಂಘದ ಅಧ್ಯಕ್ಷ ಶಿವಗೌಡ ಪಾರಶೆಟ್ಟಿ ತಿಳಿಸಿದರು.
ಕೆ.ಆರ್ ಇ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಐನಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 111 ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನುದ್ದೇಸಿಸಿ ಮಾತನಾಡಿದ ಅವರು ಆಡಳಿತ ಮಂಡಳಿಯವರ ಪರಿಶ್ರಮ, ಬ್ಯಾಂಕ ಸಿಬ್ಬಂದಿಯವರ ಕರ್ತವ್ಯನಿಷ್ಠೆ, ಸಾಲಗಾರರ ಪ್ರಾಮಾಣಿಕತೆಯಿಂದ ಬ್ಯಾಂಕಿನ ಪ್ರಗತಿಯಾಗಲು ಸಾಧ್ಯ ಎಂದರು.

ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲವನ್ನು ಕೃಷಿ ಚಟುವಟಿಕೆಯ ಜೊತೆಗೆ ಗುಡಿ ಕೈಗಾರಿಕೆ ಹಾಗೂ ಹೈನುಗಾರಿಕೆ ಸೇರಿದಂತೆ ಮತ್ತಿತರ ಲಾಭ ತರುವ ಚಟುವಟಿಕೆಗಳಿಗೆ ಸಮರ್ಪಕವಾಗಿ ಬಳಸಿದಾಗ ಆರ್ಥಿಕವಾಗಿ ಸಭಲರಾಗಲು ಸಾಧ್ಯ ಎಂದ ಅವರು ಸಂಘವು 1.30 ಕೋಟಿ ಶೇರ ಬಂಡವಾಳ ಹೊಂದಿದ್ದು, 23.69 ಕೋಟಿ ರೂ ದುಡಿಯುವ ಬಂಡವಾಳವಿದ್ದು, 10.43 ಕೋಟಿ ರೂ. ಠೇವವನ್ನು ಸಂಗ್ರಹಿಸಿದೆ. 9.89 ಕೋಟಿ ಸಾಲ ವಿತರಿಸಲಾಗಿದೆ. ಅಲ್ಲದೆ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹಲವಾರು ಸ್ವ ಸಹಾಯ ಸಂಘಗಳಿಗೆ ಸಾಲವನ್ನು ಸಹ ವಿತರಿಸಲಾಗಿದೆ ಎಂದು ಹೇಳಿದರು. ಪ್ರಸಕ್ತ ವರ್ಷ 54.65 ಲಕ್ಷ ನಿವ್ವಳ ಲಾಭ ಗಳಿಸಿ 15% ಲಾಭಾಂಶವನ್ನು ಪ್ರಕಟಿಸಿದ್ದೇವೆಂದರು.
ಈ ಸಂದರ್ಭದಲ್ಲಿ, ಮುಖ್ಯಕಾರ್ಯನಿರ್ವಾಹಕ ಅಣ್ಣಾಸಾಬ ಜಾಧವ ಸಂಘದ ವಿವರವನ್ನು ಸಭೆಯ ಮುಂದೆ ವಿವರಿಸಿದರು. ಉಪಾಧ್ಯಕ್ಷ ಆದಗೌಡಾ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಉಮೇಶ ಕಾರ್ಚಿ, ವಿನೋದ ಚಲವಾದಿ, ಲಕ್ಷ್ಮೀಬಾಯಿ ರಡ್ಡಿ, ರಾಜೇಂದ್ರ ಪೋತದಾರ, ಸುನೀಲ ಪಾಟೀಲ, ಸುರೇಶ ಘಾಣಿಗೇರ, ಕುಮಾರ ಅಪರಾಜ, ಸೇರಿದಂತೆ ಐನಾಪೂರ,ಕಾತ್ರಾಳ,ಬಣಜವಾಡ ಗ್ರಾಮದ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪ್ರಬಂಧಕ ಎ.ಎ. ಜಾಧವ ವರದಿವಾಚ ವಾಚನ ಮಾಡಿದರು ವಿರೂಪಾಕ್ಷ ಡೂಗನವರ ಸ್ವಾಗತಿಸಿ ನಿರೂಪಿಸಿದರು,
****
ಸದಸ್ಯರ ಸಹಕಾರ, ಆಡಳಿತ ಮಂಡಳಿಯ ಪ್ರೋತ್ಸಾಹ, ಹಾಗೂ ಶಿಬಂದಿಯ ಪ್ರಾಮಾಣಿಕ ಸೇವೆಯಿಂದ ಅಥಣಿ ತಾಲೂಕಿನ ಐನಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 54.65 ಲಕ್ಷ ರೂ ಲಾಭಗಳಿಸಿ ಇತಿಹಾಸ ನಿರ್ಮಿಸಿದೆ.
ಶಿವಗೌಡ ಪಾರಶೆಟ್ಟಿ
ಅಧ್ಯಕ್ಷರು ಪಿಕೆಪಿಎಸ್ ಐನಾಪೂರ

loading...

LEAVE A REPLY

Please enter your comment!
Please enter your name here