ಕಮತನೂರ ತುಂಬಿದ ಕೆರೆಯ ಡಿ.ಸಿ.ಸಿ.ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಇವರಿಂದ ಬಾಗೀನ ಅರ್ಪಣೆ

0
23
loading...

ಸಂಕೇಶ್ವರ 23 : ಈ ಭಾಗದ ರೈತರ ಸರ್ವಾಂಗೀಣ ಅಭಿವೃದ್ಧಿಯನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು ಶಾಸಕ ಉಮೇಶ ಕತ್ತಿ ಅವರು ವಿಶೇಷ ಪ್ರಯತ್ನಪಟ್ಟು ಕೆರೆಯ ನಿರ್ಮಾಣ ಕಾರ್ಯ ಗಟ್ಟಿಮುಟ್ಟಾಗಿ ಮಾಡಿಸಿದ್ದು, ಪರಿಸರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಇಂದು ಕೆರೆಯು ಭರ್ತಿಯಾಗಿ ರೈತರಲ್ಲಿ ಸಂತೋಷದ ಕಾಣುತ್ತಿದೆಯೆಂದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಅಧ್ಯಕ್ಷರು, ಮಾಜಿ ಸಂಸದರಾದ ರಮೇಶ ಕತ್ತಿ ಹೇಳಿದರು.

ಅವರು ಇಲ್ಲಿಗೆ ಸಮೀಪದ ಕಮತನೂರ ಕೆರೆಗೆ ಪೂಜೆ ನೆರವೇರಿಸಿ, ಬಾಗೀನ ಅರ್ಪಿಸಿ ಮಾತನಾಡುತ್ತಿದ್ದರು. ಮುಂದುವರೆದ ಅವರು, ಕಳೆದ 10 ವರ್ಷಗಳ ಹಿಂದೆ ಕಮತನೂರ ಕೆರೆ ಒಡೆದು ಅಪಾರ ಹಾನಿಯನ್ನುಂಟು ಮಾಡಿತ್ತು. ಮತ್ತೆ ಕೆರೆ ಅಭಿವೃದ್ಧಿಗೆ ಗ್ರಾಮಸ್ಥರ ಪುನರ ಬೇಡಿಕೆ ಅನುಗುಣವಾಗಿ ಶಾಸಕರು ಸರಕಾರದಿಂದ 7 ಕೋಟಿ ರೂ. ಮಂಜೂರಾತಿ ದೊರಕಿಸಿ ಕೊಟ್ಟು ಸಹಕರಿಸಿದ್ದಾರೆ. ಸಂಕೇಶ್ವರ, ನೇರಲಿ, ಅಮ್ಮಣಗಿ, ಗೋಟೂರ, ಗವನಾಳ ಸೇರಿದಂತೆ ಅನೇಕ ಗ್ರಾಮಗಳಿಗೆ ಈ ಕೆರೆಯ ನೀರಿನ ಸಂಗ್ರಹದಿಂದ ಪರಿಸರದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆಯೆಂದರು.

ಸಂಗಮ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ, ಈ ಭಾಗದಲ್ಲಿ ಕೆರೆಯ ನಿರ್ಮಾಣ ಮಾಡಬೇಕೆಂಬುದು ದಿ.ಅಪ್ಪಣಗೌಡ ಪಾಟೀಲರ ಕನಸಾಗಿತ್ತು. ಅಂತೆಯೇ ಇಂದು ಅವರ ಕನಸನ್ನು ಶಾಸಕ ಉಮೇಶ ಕತ್ತಿ ಅವರು ನನಸಾಗಿದ್ದಾರೆಂದರು.

ಕಾರ್ಯಕ್ರಮದಲ್ಲಿ ಹಿರಾಶುಗರ ಚೇರಮನ್ ಶಿವನಾಯಿಕ ನಾಯಿಕ, ನಿರ್ದೇಶಕ ಅಪ್ಪಾಸಾಹೇಬ ಶಿರಕೋಳಿ, ಬಿಜೆಪಿ ತಾಲೂಕಾಧ್ಯಕ್ಷ ಪರಗೌಡ ಪಾಟೀಲ, ಸುನೀಲ ಪರ್ವತರಾವ, ದೀಪಕ ಭಿಸೆ, ಕಲ್ಲಣ್ಣಾ ಚೌಗಲಾ, ಬಿ.ಜೆ.ಪಾಟೀಲ, ಸುರೇಶ ಬೋರಗಲ್ಲಿ, ಶಂಕರ ಥರಕಾರ, ಮನೋಹರ, ಚಾಳಣ್ಣವರ, ಶಿವಲಿಂಗ ಪುಟ್ಟಿ, ಸುರೇಶ ಕುಲಕರ್ಣಿ, ತಾತ್ಯಾಸಾಹೇಬ ಜಾಧವ, ಮಲ್ಲಪ್ಪ ಅಂಕಲೆ, ವಿರುಪಾಕ್ಷಿ ಚೌಗಲಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here