ಕಾವೇರಿ ವಿಷಯದಲ್ಲಿ ಕಾಂಗ್ರೆಸ್ ವಿಫಲ: ಬಿಜೆಪಿ ಆಕ್ರೋಶ

0
21
loading...

ಬೆಳಗಾವಿ 9: ನಾಡಿನ ಜೀವನದಿ ಕಾವೇರಿ ನೀರನ್ನು ನೆರೆಯ ತಮಿಳುನಾಡಿಗೆ ಬಿಡಬೇಕೆನ್ನುವ ಸುಪ್ರೀಂ ಕೋರ್ಟ್‍ನ ಆದೇಶವನ್ನು ವಿರೋಧಿಸಿ ಶುಕ್ರವಾರ ನಗರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲಿಸಿತು.
ರಾಜ್ಯದ ಕಾವೇರಿ ಕಣಿವೆ ಭಾಗದ ಜಿಲ್ಲೆಗಳ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ತಮಿಳುನಾಡು ರಾಜ್ಯಕ್ಕೆ ಕಾವೇರಿ ನದಿ ನೀರನ್ನು ಹರಿಸಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಲಾಯಿತು. ನೀರಾವರಿ ಸಚಿವರು ಮತ್ತು ಕಾವೇರಿ ನದಿ ವಿವಾದದ ವ್ಯಾಜ್ಯದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ನ್ಯಾಯವಾದಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮೊದಲಾದವರು ಮಾತನಾಡಿ, ಕಾವೇರಿ ಮತ್ತು ಮಹದಾಯಿ ನದಿ ನೀರಿನ ಹಂಚಿಕೆಯ ವ್ಯಾಜ್ಯಗಳಲ್ಲಿ ಸಂಬಂಧಪಟ್ಟ ನ್ಯಾಯಾಲಗಳಲ್ಲಿ ಸಮರ್ಪಕ ದಾಖಲಾತಿಗಳೊಂದಿಗೆ ರಾಜ್ಯದ ನದಿ ನೀರಿನ ಕೋರಿಕೆಯನ್ನು ಮನದಟ್ಟು ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನ್ಯಾಯಾಲಯಗಳಲ್ಲಿ ಆಗಿರುವ ಹಿನ್ನಡೆಗೆ ಹಾಗೂ ಈ ಮೂಲಕ ಸಂಕಷ್ಟಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಟೀಕಾಪ್ರಹಾರ ನಡೆಸಿದರು.
ನೀರಿನ ವಿಷಯದಲ್ಲಿ ಸರ್ಕಾರದ ನಿಷ್ಕ್ರೀಯ ಮನೋಭಾವನೆ ಹಾಗೂ ಉದಾಸೀನತೆ ಎದ್ದು ಕಾಣುತ್ತದೆ. ಸರ್ಕಾರದ ಕಾರ್ಯವೈಖರಿ ಇದೇ ರೀತಿ ಮುಂದು ವರೆದರೆ ಮುಂಬರುವ ದಿನಗಳಲ್ಲಿ ಈ ಸರ್ಕಾರವನ್ನು ಕಿತ್ತೊಗಿಯಲು ಜನಾಂದೋಲನವೇ ನಡೆಯುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ, ಬಿಜೆಪಿ ನಗರಧ್ಯಕ್ಷ ಅನಿಲ ಬೆನಕೆ, ಶಂಕರಗೌಡ ಪಾಟೀಲ, ರಾಜೀವ ಟೋಪಣ್ಣವರ, ರಾಜು ಚಿಕ್ಕನಗೌಡರ್, ವಿನಾಯಕ ಪಾಟೀಲ, ದೀಪಕ ಜಮಖಂಡಿ, ಲೀನಾ ಟೋಪಣ್ಣವರ, ಕಿರಣ ಜಾಧವ, ಪುಷ್ಪಾ ಹುಬ್ಬಳ್ಳಿ, ಸಂಜೆಯ ಭಂಡಾರಿ, ಶಶಿ ಪಾಟೀಲ, ಮಹೇಶ ಪವಾರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here