ಕೆವಿಜಿ ಬ್ಯಾಂಕ್‍ನಿಂದ ಸಾಲ ಸೌಲಭ್ಯ ನೀಡುತ್ತಿವೆ ಎಂದು ಸುಳ್ಳ ಭರವಸೆ ನೀಡಿ ರೈತರಿಗೆ ಮೋಸ

0
24
loading...

ಮುಂಡರಗಿ : ಕೃಷಿಭಾಗ್ಯ ಯೋಜನೆಯಡಿಯಲ್ಲಿ ರೈತರ ಜಮೀನಿನಲ್ಲಿ ಪಾಲೆಹೌಸ್ (ನೆರಳು ಪರದೆ) ನಿರ್ಮಿಸಿಕೊಳ್ಳಲು ಕೆವಿಜಿ ಬ್ಯಾಂಕ್‍ನಿಂದ ಸಾಲ ಸೌಲಭ್ಯ ನೀಡುತ್ತಿವೆ ಎಂದು ಸುಳ್ಳ ಭರವಸೆ ನೀಡಿ ಈಗ ಸಾಲ ನೀಡಲು ಸಾಧ್ಯವಿಲ್ಲವೆಂದು ರೈತರಿಗೆ ಮೋಸ ಮಾಡಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ರಾಮಣ್ಣ ಇಲ್ಲೂರ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸರ್ಕಾರದಿಂದ ಕೃಷಿಭಾಗ್ಯ ಯೋಜನೆಯಡಿಯಲ್ಲಿ ಪಾಲೆಹೌಸ್ ನಿರ್ಮಾಣಕ್ಕೆ ಬ್ಯಾಂಕ್‍ನಿಂದ 34 ಲಕ್ಷ ರೂ.ಸಾಲ ಸೌಲಭ್ಯ ನೀಡಬೇಕೆಂಬ ಯೋಜನೆ ಇದೆ. ಅದರಂತೆ ರೈತರಾದ ಮರಿಯವ್ವ ನಿಂಗಪ್ಪ ಇಟಗಿ ಹಾಗೂ ಸಂಜೀವಪ್ಪ ಲದ್ದಿ ಅವರ ಜಮೀನಿನಲ್ಲಿ ಕೆವಿಜಿ ಬ್ಯಾಂಕ್‍ನಿಂದ ಸಾಲ ಸೌಲಭ್ಯ ದೊರೆಯುತ್ತದೆ ಎನ್ನುವ ಭರವಸೆ ಮೇರಿಗೆ ಈಗಾಗಲೇ ತಮ್ಮ ಸ್ವಂತ 14 ಲಕ್ಷ ರೂ.ವೆಚ್ಚದಲ್ಲಿ ಪಾಲೆಹೌಸ್ ನಿರ್ಮಾಣಕ್ಕಾಗಿ ಹಣ ಖರ್ಚು ಮಾಡಿದ್ದಾರೆ. ಬ್ಯಾಂಕ್‍ನವರು ಸಾಲ ಸೌಲಭ್ಯ ನೀಡದ ಕಾರಣಕ್ಕೆ ಈಗ ಪಾಲೆಹೌಸ್ ನಿರ್ಮಾಣ ಅರ್ಧಕ್ಕೆ ನಿಂತಿದೆ. ಇದರ ಪೂರ್ಣ ಪ್ರಮಾಣದ ನಿರ್ಮಾಣಕ್ಕೆ ಇನ್ನು ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದರು.
ಮೊದಲಿಗೆ ಸಾಲ ಸೌಲಭ್ಯ ನೀಡುತ್ತವೆ ಎನ್ನುವ ಭರವಸೆ ನೀಡಿದ್ದ ಕೆವಿಜಿ ಬ್ಯಾಂಕ್‍ನವರು ಈಗ ಸಾಲ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾನೇ ತೊಂದರೆಯಾಗಲಿದೆ. ಬ್ಯಾಂಕ್‍ನವರು ಈಗಾಗಲೇ ರೈತರಿಂದ ಸಂಪೂರ್ಣವಾದ ವರದಿ ಪಡೆದುಕೊಂಡಿದ್ದಾರೆ. ಜೊತೆಗೆ ಸಾಲ ಸೌಲಭ್ಯ ನೀಡುವ ಎಲ್ಲ ದಾಖಲಾತಿಗಳನ್ನು ಸಹ ಪಡೆದುಕೊಂಡಿದ್ದಾರೆ. ಕೃಷಿಭಾಗ್ಯ ಯೋಜನೆಯಡಿಯಲ್ಲಿ ನಿರ್ಮಿಸಿಕೊಳ್ಳುವ ಪಾಲೆಹೌಸ್‍ಗೆ ಬ್ಯಾಂಕ್‍ನವರು ಸಾಲ ನೀಡದೇ ಸರ್ಕಾರದ ಯೋಜನೆಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ದಿನಗಳಲ್ಲಿ ಸಾಲ ನೀಡದೇ ಹೋದರೆ ರೈತರೊಂದಿಗೆ ಗದಗ ಕೆವಿಜಿ ಬ್ಯಾಂಕ್ ಆಯುಕ್ತರ ಕಚೇರಿಗೆ ಬೀಗಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ನಂತರ ಕೆಲ ರೈತರು ಸೇರಿ ಪಾಲೆಹೌಸ್ ನಿರ್ಮಿಸಿಕೊಳ್ಳುತ್ತಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ವಿಕ್ಷೀಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಶಿವಾನಂದ ಇಟಗಿ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೀರನಗೌಡ ಪಾಟೀಲ, ರೈತ ಮುಖಂಡರಾದ ಚಂದ್ರಕಾಂತ ಉಳ್ಳಾಗಡ್ಡಿ, ಸಂಜೀವ ಲದ್ದಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here