ಕ್ರೀಡಾಕೂಟಕ್ಕೆ ಚಾಲನೆ

0
28
loading...

ಗೋಕಾಕ 31: ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಗೋಕಾಕ ವಲಯದ ತಾಲೂಕಾ ಮಟ್ಟದ ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸುವ ಮೂಲಕ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಉದ್ಘಾಟಿಸಿದರು.
ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಹಿರೇನಂದಿ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರಖಾನೆ, ಹಾಗೂ ನ್ಯೂ ಇಂಗ್ಲೀಷ ಸ್ಕೂಲ್ ಸಂಯುಕ್ತ ಆಶ್ರಯದ ಕ್ರೀಡಾಕೂಟದಲ್ಲಿ ವಲಯದ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಬಿ. ಬಳಗಾರ ಅವರು ವಿದ್ಯಾರ್ಥಿಗಳ ಬದುಕಿನಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರಲ್ಲದೆ ಗೋಕಾಕ ವಲಯದ ಮಾಲದಿನ್ನಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದನ್ನು ನೆನಪಿಸಿದರು.
ಜಿ.ಪಂ. ಸದಸ್ಯ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ರಾಮಣ್ಣ ಸುಂಬಳಿ, ಗಂಗಾಧರ ಸ್ವಾಮಿಗಳು ಹೆಬ್ಬಾಳ, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಸ್ಥಾಯಿ ಸಮಿತಿ ಚೇರಮನ್ ಡಾ. ಅಬ್ದುಲ್‍ವಹಾಬ ಜಮಾದಾರ, ತಾ.ಪಂ. ಅಧ್ಯಕ್ಷೆ ಶ್ರೀಮತಿ ಸುನಂದಾ ಕರದೇಸಾಯಿ, ತಾ.ಪಂ. ಸದಸ್ಯರಾದ ಸಿದ್ದಪ್ಪ ಕಮತ, ಸಿದ್ದಪ್ಪ ನಾಯಿಕ, ನ್ಯೂ ಇಂಗ್ಲೀಷ ಸ್ಕೂಲಿನ ಕಾರ್ಯದರ್ಶಿ ಈರಪ್ಪಣ್ಣ ಕ್ಯಾಸ್ತಿ, ಮುಖ್ಯೋಧ್ಯಾಪಕ ಎಸ್.ಎಸ್.ಲಗಮಪ್ಪಗೋಳ, ವಲಯ ಅರಣ್ಯಾಧಿಕಾರಿ ಎಮ್.ಕೆ.ಪಾತ್ರೂಟ, ಪಶುಸಂಗೋಪನಾ ಇಲಾಖೆಯ ಡಾ. ಮೋಹನ ಕಮತ, ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಎನ್.ಬಿ. ಹಿರೇಮಠ, ಎ.ಕೆ. ಜಿಂಗಿ, ಶ್ರೀಮತಿ ಎಸ್.ಎಸ್.ನೇಗಳಿ, ಎಸ್.ಎ.ನಾಯಿಕ, ಎಮ್.ಎಲ್. ಹಸರಂಗಿ, ಬಿಆರ್‍ಸಿ ಮಂಜುನಾಥ ಕುಡೋಳ್ಳಿ ಸೇರಿದಂತೆ ಅನೇಕರು ಇದ್ದರು.
ಪ್ರಾರಂಭದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಹಾಕಿ ಮಾಂತ್ರಿಕ ಧ್ಯಾನಚಂದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಎನ್‍ಇಎಸ್ ಶಾಲೆ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಜಯಕುಮಾರ ಸೂಲಿಗಾವಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಆರ್.ಬಿ. ಮಾವಿನಗಿಡದ ಪ್ರತಿಜ್ಞಾವಿಧ ಭೋದಿಸಿದರು. ಬಿ.ಆರ್. ಚಿಪ್ಪಲಕಟ್ಟಿ ನಿರೂಪಿಸಿದರು. ಬಿ.ಎಚ್.ಪಾಟೀಲ ವಂದಿಸಿದರು.

loading...

LEAVE A REPLY

Please enter your comment!
Please enter your name here