ಕ್ರೀಡಾಕೂಟಗಳಲ್ಲಿ ಕಲಕೇರಿ ಎಂ.ಬಿ.ಪಾಟೀಲ ಕಾಲೇಜು ವಿದ್ಯಾರ್ಥಿಗಳ ಸಾಧನೆ

0
28
loading...

ಮುಂಡರಗಿ : ತಾಲೂಕಿನ ಕಲಕೇರಿ ಗ್ರಾಮದ ಶರಣಬಸವೇಶ್ವರ ವಿದ್ಯಾಸಂಸ್ಥೆಯ ಎಂ.ಬಿ.ಪಾಟೀಲ ಪಪೂಕಾಲೇಜಿನ ವಿದ್ಯಾರ್ಥಿಗಳು ಡಂಬಳದಲ್ಲಿ ಜರುಗಿದ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜಿನ ಕ್ರೀಡಾ ಕೂಟಗಳಲ್ಲಿ ಪಾಲ್ಗೊಂಡು ನಾನಾ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ.
ವಾಲಿಬಾಲ್ ಪ್ರಥಮ ವಿಷ್ಣು ಪೂಜಾರ, ಉಮೇಶ ಎಸ್.ಟಿ.ಸುನಿಲ, ಎಲ್.ವಿಷ್ಣು ನಾಯ್ಕ, ಎಂ.ನಾಗರಾಜ, ಉಮೇಶ ನಾಯ್ಕ, ಎಲ್.ದೇವರಾಜ, ಅಶೋಕ ನಾಯಕ, ಹಾಗೂ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಎಸ್.ಟಿ.ನಾಯಕ, ಎಂ.ನಾಗರಾಜ, ಉಮೇಶ ನಾಯಕ, ಬಿ.ವಿನಾಯಕ, ಮಂಜುನಾಥ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಬ್ಬಡ್ಡಿಯಲ್ಲಿ ಕೃಷ್ಣ ರಾಠೋಡ, ಎಲ್.ವಿಷ್ಣು ನಾಯ್ಕ, ಫಕ್ಕೀರಪ್ಪ ತಳವಾರ, ವಸಮತ ದೊಡಮನಿ, ಅನಿಲಕುಮಾರ ಎಲ್, ಅರುಣಕುಮಾರ ಲಮಾಣಿ, ಮಂಜುನಾಥ ರಾಠೋಡ, ಉಮೇಶ ನಗರ, ಸಂತೋಸ ದ್ವಿತಿಯ ಸ್ಥಾನ ಪಡೆದಿದ್ದಾರೆ.
400/400 ರಿಲೇ ಓಟದಲ್ಲಿ ಕೃಷ್ಣ ರಾಠೋಡ, ಅಶೋಕ ರಾಠೋಡ, ಫಕ್ಕೀರಪ್ಪ ತಳವಾರ, ಉಮೇಶ ನಗರ ದ್ವಿತಿಯ ಸ್ಥಾನ ಪಡೆದಿದ್ದಾರೆ.
ಬ್ಯಾಡ್ಮಿಂಟನ್ ಡಬ್ಸ್‍ನಲ್ಲಿ ಪೂಜಾರಿ ನಾಗೇಶ, ಪಿ.ಅಶೋಕ ದ್ವಿತಿಯ ಸ್ಥಾನ ಪಡೆದಿದ್ದಾರೆ.
200 ಮೀ. ಓಟದಲ್ಲಿ ಕೃಷ್ಣ ರಾಠೋಡ, ಪ್ರಥಮ, 400 ಮೀಓ ಅಶೋಕ ರಾಠೋಡ ದ್ವೀತಿಯ, 1500 ಮೀಓ ಲೋಕೇಶ ಲಮಾಣಿ ಪ್ರಥಮ, 3000 ಮೀಓ ಲೋಕಪ್ಪ ಲಮಾಣಿ ಪ್ರಥಮ ಹಾಗೂ 100 ಮೀ.ಅಡೆತಡೆ ಓಟದಲ್ಲಿ ಜಗದೀಶ ನಾಯಕ ಪ್ರಥಮ, ಸರಪಳಿ ಗುಂಡು ಎಸೆತದಲ್ಲಿ ವಿಷ್ಣು ಪೂಜಾರ ದ್ವೀತಿಯ, ಚಕ್ರ ಎಸೆತದಲ್ಲಿ ವಿಷ್ಣು ಪೂಜಾರ ದ್ವಿತಿಯ, ವಿಷ್ಣು ನಾಯಕ ತೃತಿಯ, ನಡಿಗೆ ಸ್ಪರ್ಧೆಯಲ್ಲಿ ಸಹದೇವ ನಾಯ್ಕ ದ್ವೀತಿಯ, ಎತ್ತರ ಜಿಗಿತದಲ್ಲಿ ಉಮೇಶ ನಗರ ತೃತಿಯ, ಗುಂಡು ಎಸೆತದಲ್ಲಿ ಕೃಷ್ಣ ರಾಠೋಡ ತೃತಿಯ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಶಿವಕುಮಾರಗೌಡ ಪಾಟೀಲ, ಪ್ರಾ. ಶೇಡದಾಳ, ಸುಪ್ರಿಡೆಂಟ್ ಎಲ್.ಎಂ.ಗಚ್ಚಿನಮನಿ, ಶೇಖಣ್ಣ ತಳಕಲ್,ಅಳವಂಡಿ, ಗ್ರಾಪಂ ಸದಸ್ಯ ಶಂಕರ ದೇವರಮನಿ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

loading...

LEAVE A REPLY

Please enter your comment!
Please enter your name here