ಕ್ರೀಡೆಯಿಂದ ದೇಹ ಸದೃಢ: ಶಾಸಕ ದೊಡ್ಡಮನಿ

0
32
loading...

ಶಿರಹಟ್ಟಿ : ಕ್ರೀಡೆಯಿಂದ ದೇಹ ಸದೃಢಗೊಳ್ಳುವುದರ ಜೊತೆಗೆ ಮನಸ್ಸು ಸ್ಥಿರವಾಗಿರುತ್ತದೆ. ಪ್ರತಿಯೊಬ್ಬರು ಕ್ರೀಡಾ ಮನೋಭಾವ ಹೊಂದುವ ಮೂಲಕ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎನ್ನುವ ಗುರಿಯತ್ತ ಹೆಜ್ಜೆ ಹಾಕಬೇಕು ಎಂದು ಜಲಸಂಪನ್ಮೂಲ ಇಲಾಖೆ ಸಂಸದೀಯ ಕಾರ್ಯದರ್ಶಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಅವರು ಬುಧವಾರ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಶ್ರೀ ಯೊಗಿ ವೇಮನ್ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಗದಗ, ಶ್ರೀ ಯೊಗಿ ವೇಮನ್ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ ಬೆಳ್ಳಟ್ಟಿ, ಗ್ರಾಮ ಪಂಚಾಯತ ಬೆಳ್ಳಟ್ಟಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ 2016-2017ನೇ ಸಾಲಿನ ತಾಲೂಕಾ ಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು, ಕ್ರೀಡೆಯಲ್ಲಿ ಹೆಚ್ಚಿನ ತರಬೇತಿ ಪಡೆಯುವುದರ ಮೂಲಕ ಯಶಸ್ಸಿನ ಹಾದಿಯತ್ತ ಎಲ್ಲರೂ ಮುನ್ನಡೆದು ಕಾಲೇಜಿಗೆ ಹಾಗೂ ತಾಲೂಕಿಗೆ ಕೀರ್ತಿ ತರುವಂತರಾಗಬೇಕು ಎಂದರು.

ಆರ್.ಆರ್.ಗಡ್ಡದೇವರಮಠ, ಗ್ರಾಪಂ ಸದಸ್ಯರಾದ ಮದನಲಾಲ ಬಾಫಣಾ, ಶಿವನಗೌಡ ಪಾಟೀಲ ಮಾತನಾಡಿದರು.

ಪ.ಪೂ.ಶಿಕ್ಷಣ ಇಲಾಖೆ ಗದಗ ಉಪನಿರ್ದೇಶಕ ಕೆ.ಆರ್.ಚವ್ಹಾಣ ಕ್ರೀಡಾಕೂಟದ ಧ್ವಜಾರೋಹಣ ನೇರವೇರಿಸಿದರು. ಜಿಪಂ ಸದಸ್ಯೆ ರೇಖಾ ಅಳವಂಡಿ, ತಾಪಂ ಸದಸ್ಯೆ ಜಯಲಕ್ಮೀ ಬ್ಯಾಲಹುಣಸಿ ಓಲಂಪಿಕ್ ಜ್ಯೋತಿ ಬೆಳಗಿಸಿ ವಿದ್ಯಾರ್ಥಿಗಳಿಂದ ಓಲಂಪಿಕ್ ಜ್ಯೋತಿ ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಫಕ್ಕೀರವ್ವ ಬಾವಳ್ಳಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎ.ವಯ್.ನವಲಗುಂದ, ವ್ಹಿ.ಆರ್.ಮರಡ್ಡಿ, ಜಗದೀಶ ಗಾಂಜಿ, ಇಮಾಮಸಾಬ ಕರ್ನಾಚಿ, ಗ್ರಾಪಂ ಉಪಾಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಸದಸ್ಯರಾದ ಕೊಟ್ರೇಶ ಸಜ್ಜನರ, ನಾಗರಾಜ ಅಕ್ಕೂರ, ಶಿವಾನಂದ ಶ್ಯಾಗೋಟಿ, ಚಂಪಕ್ಕ ಹಿರೇಮಠ, ನಗರತ್ನಾ ಮಹಾದೇವಪ್ಪನವರ, ಮಂಜುಳಾ ಹುಬ್ಬಳ್ಳಿ, ಶ್ರೀ.ಯೋ.ವೇ.ಶಿ.ಪ್ರ.ಸಂ. ಅಧ್ಯಕ್ಷ ಮೋಹನ ತಿಮ್ಮರಡ್ಡಿ, ಶಾಸಕರ ಆಪ್ತ ಸಹಾಯಕ ಶರಣಪ್ಪ ಕುಬಸದ, ದೈಹಿಕ ಶಿಕ್ಷರಾದ ಬಿ.ವಾಯ್.ಬೇಲೇರಿ, ಆರ್.ಎಸ್.ಹಳ್ಳಕೇರಿ, ಎಲ್.ಡಿ.ಪಟೀಲ, ಎಮ್.ಎಸ್.ಹಿರೇಮಠ, ಎಂ.ಕೆ.ಲಮಾಣಿ, ಹಾಗೂ ಗ್ರಾಮದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಶ್ರೀ ಯೋಗಿ ವೇಮನ್ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯ ಪ್ರಾಶುಂಪಾಲ ಡಿ.ವ್ಹಿ.ಚೌಡಕಿ ಸ್ವಾಗತಿಸಿದರು. ಉಪನ್ಯಾಸಕ ಎಸ್.ಯು.ಮಠಪತಿ ನಿರೂಪಿಸಿದರು. ಎಮ್.ಆರ್.ಒಂಟಿ ವಂದಿಸಿದರು.

loading...

LEAVE A REPLY

Please enter your comment!
Please enter your name here