ಗಾಂಜಾ ದಾಳಿ : ಬಂಧನ

0
27
loading...

ಬೆಳಗಾವಿ : ಮಾರ್ಕೆಟ ಪೊಲೀಸ ಠಾಣಾ ವ್ಯಾಪ್ತಿಯ ಕಸಾಯಿಗಲ್ಲಿಯ ಮುಜಾವರ ಸೈಕಲ್ ಅಂಗಡಿ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಇಲ್ಲಿನ ಜಾವೇದ ಗೌಸ ಮುಲ್ಲಾ ವಯಸ್ಸು(25) ಈತ ಸಣ್ಣ ಸಣ್ಣ ಪಾಕೇಟಗಳಲ್ಲಿ ಗಾಂಜಾ ಮಾರುತಿದ್ದಾಗ ಬೆಳಗಾವಿ ನಗರ ಪೊಲೀಸ್ ಉಪ-ಆಯುಕ್ತ ಅಮರನಾಥ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಸಿಸಿಐಬಿ ಘಟಕದ ಪೊಲೀಸ ಇನ್ಸಪೆಕ್ಟರ್ ಎ. ಎಸ್. ಗೂದಿಗೋಪ್ಪ ಹಾಗೂ ಸಿಬ್ಬಂದಿ ಜನರು ದಾಳಿ ಮಾಡಿ ಮುಲ್ಲಾನನ್ನು ವಶಕ್ಕೆ ಪಡೆದು, 975 ಗ್ರಾಂ ಗಾಂಜಾ ತುಂಬಿದ ಪ್ಲಾಸ್ಟಿಕ ಕ್ಯಾರಿ ಬ್ಯಾಗ ಅಂದಾಜ ಕಿಮ್ಮತ್ತು 9,500 ರೂಪಾಯಿ ಹಾಗು ಅವನ ಪ್ಯಾಂಟ ಕಿಸೆಯಲ್ಲಿದ್ದ ನಗದು ಹಣ 210 ರೂಪಾಯಿಗಳನ್ನು ಜಪ್ತ ಮಾಡಲಾಗಿದೆ. ಈ ಬಗ್ಗೆ ಮಾರ್ಕೆಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here