ಗೋವಾದಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳಿಗೆ

0
28
loading...

ಕರ್ನಾಟಕದಿಂದ ಪ್ರಶ್ನೆ ಪತ್ರಿಕೆ ಕಳುಹಿಸಲಾಗುವುದು: ಸಚಿವ ತನ್ವೀರ
ಬೆಳಗಾವಿ:7 ಗೋವಾದಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ಪ್ರಶ್ನೆ ಪತ್ರಿಕೆಗಳನ್ನು ಕರ್ನಾಟಕದಿಂದ ಕಳುಹಿಸಿ ಅಲ್ಲಿಯೇ ಪರೀಕ್ಷಾ ಕೇಂದ್ರಗಳನ್ನು ತೆರೆದು ಫಲಿತಾಂಶ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ ಸೇಠ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ಇರುವ ಕನ್ನಡ ಮಕ್ಕಳು ಕಾರವಾರದ ಬಳಿಯ ಉಳಗಾ ಗ್ರಾಮದ ಶಾಲೆಯೊಂದರಲ್ಲಿ ಪರೀಕ್ಷೆ ಬರೆಯುತ್ತರುವ ವಿಷಯ ತಿಳಿದು ಗೋವಾ ಕನ್ನಡಿಗ ಮಕ್ಕಳಿಗೆ ಅನಾನುಕೂಲವಾಗದಂತೆ ಗೋವಾದ ಅನುಕೂಲಕರವಾದ ಸ್ಥಳದಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುವುದು. ಈ ಬಗ್ಗೆ ಅಲ್ಲಿನ ಸರಕಾರದೊಂದಿಗೆ ಅ„ಕಾರಿಗಳೊಂದಿಗೆ ಚರ್ಚಿಸಿ ಮಕ್ಕಳಿಗೆ ಅನುಕೂಲ ಮಾಡಿಕೊ ಡಲಾಗುವುದು ಎಂದರು.
ಶೂ ಭಾಗ್ಯ ವಿಚಾರದಲ್ಲಿ ಕಳಪೆ ಮಟ್ಟದ ಶೂಗಳನ್ನು ಖರೀದಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಮುಂದೆ ಅಕ್ರಮ ತಡೆಗಟ್ಟಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಟೆಂಡರ್ ಪಡೆಯುವ ಮುಂದೆ ಬರುವ ಕಂಪನಿಗಳಿಗೆ ಕಡ್ಡಾಯವಾಗಿ ನಿಯಮಗಳನ್ನು ಹಾಕಲಾಗುವುದು. ಒಂದು ವರ್ಷದ ಗ್ಯಾರಂಟಿ ನೀಡುವ ಕುರಿತು ಬರೆಯಿಸಿಕೊಳ್ಳಲಾಗುವುದು. ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ಸಮಿತಿ ರಚಿಸಲಿದ್ದಾರೆ. ಅಪರ ಆಯುಕ್ತರಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಯಮಕಮರಡಿ ಶಾಲೆ ಕುಸಿದು ಇಬ್ಬು ಮೃತಪಟ್ಟ ಮಕ್ಕಳ ಕುಟುಂಬಕ್ಕೆ 4.50 ಲಕ್ಷ ರೂ. ಪರಿಹಾರ ನೀಡಲಾಗಿದೆ. ಜತೆಗೆ ಮುಖ್ಯ ಶಿಕ್ಷಕರು, ಬಿಇಒ, ಸಿಆರ್‍ಪಿಗಳನ್ನು ಅಮಾನತು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿಷಯ ಕುರಿತು ಶಿಕ್ಷಣದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ಯಾವ ರೀತಿ ತರಬೇಕು ಎಂದು ಲಕ್ಷ್ಯ ವಹಿಸಲಾಗುವುದು. ಖಾಸಗಿ ಸಂಸ್ಥೆಗಳು ಶ್ರೀಮಂತರಿಗೆ ಹಾಗೂ ಸರಕಾರಿ ಶಾಲೆಗಳು ಬಡವರಿಗೆ ಎಂಬ ಕಲ್ಪನೆ ಹೋಗಲಾಡಿಸಲು ಸಮಾನತೆ ಕಾಯ್ದುಕೊಳ್ಳು ಶ್ರಮಿಸಲಾಗುವುದು. ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯ ಕೊಡುವುದರ ಬಗ್ಗೆ ಸರಕಾರ ಗಮನ ಹರಿಸಲಿದೆ. ಸಮಾನ ಶಿಕ್ಷಣ ಅನುಷ್ಠಾನಗೊಳಿಸಲು ಸಾಕಷ್ಟು ಒತ್ತಡ ಬರುವುದು ಸಹಜ. ರಾಜ್ಯದಲ್ಲಿ ಜಾತಿ, ಭಾಷೆ, ಪದ್ಧತಿಯಿಂದ ಬೇರ್ಪಡೆ ಆಗುವುದನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಶಾಲೆಯಲ್ಲಿ ಅನ„ಕೃತವಾಗಿ ಗೈರು ಉಳಿದಿರುವ ಶಿಕ್ಷಕರನ್ನು ನನ್ನ ಅವ„ಯಲ್ಲಿ ಈಗಾಗಲೇ 8 ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಸರಕಾರಿ ವ್ಯವಸ್ಥೆಯಲ್ಲಿ ಸರಕಾರಿ ಶಾಲೆಗಳಿಗೆ ಆದ್ಯತೆ ಕೊಡಬೇಕು. ಖಾಸಗಿ ಶಾಲೆಗಳೀಗೆ ಹೋಗುವ ಚಲನವಲನ ಕಡಿಮೆ ಮಾಡಬೇಕು ಎಂದು ಈಗಾಗಗಲೇ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸಚಿವವನಾಗಿ 74 ದಿನಗಳ ಅವ„ಯಕಲ್ಲಿ ಶಿಕ್ಷಣ ಇಲಾಖೆಯಲ್ಲಿ ಬೇಜವಾಬ್ದಾರಿ ವಹಿಸಿದ 48 ಅ„ಕಾರಿಗಳನ್ನು ಅಮಾನತು ಮಾಡಲಾಗಿದೆ. ಆರ್‍ಟಿಇ ಶಿಕ್ಷಣ ಕಾಯ್ದೆ ಉಲ್ಲಂಘಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಎಂಬ ಪ್ರತಿಷ್ಟಿತ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ. ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಬೆಳಗಾವಿ ನಗರದಲ್ಲಿ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್‍ದಿಂದ ವಿದ್ಯಾರ್ಥಿ
ಬಳಲುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಅಂತಹ ವಿದ್ಯಾರ್ಥಿಗಳಿಗೆ ಸರಕಾರದಿಂದ ಸೌಲಭ್ಯ ಒದಗಿಸುವ ಕುರಿತು ಚಿಂತನೆ ನಡೆದಿದೆ ಎಂದರು.

loading...

LEAVE A REPLY

Please enter your comment!
Please enter your name here