ಜೋಡಿ ಕೊಲೆ: ಆರೋಪಿ ಬಂಧನ

0
19
loading...

ಬೀದರ್: ಸೆ:17; ಬೀದರ ನಗರ ಬೆಚ್ಚಿ ಬಿಳಿಸಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನ ಎರಡೇ ದಿನದಲ್ಲಿ ಜಿಲ್ಲಾ ಪೆÇಲೀಸರು ಬಂಧಿಸಿದ್ದಾರೆ.
ಸೆ.14 ರಂದಷ್ಟೇ ನಗರದ ನೆಹರು ಕ್ರೀಡಾಂಗಣ ಪಕ್ಕದ ಮನೆಯಲ್ಲಿ ಸುಮೀತ್ ಮತ್ತು ಶಿವಕುಮಾರ ಇಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ನಂತರ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಸಚ್ಚಿನ್(28) ಬಂಧಿತ ಆರೋಪಿ.
ಪ್ರಕರಣ ಗಂಭೀರವಾಗಿ ತೆಗೆದುಕೊಂಡ ಎಸ್.ಪಿ ಪ್ರಕಾಶ ನಿಕ್ಕಂ ಇಂದು ಅರೋಪಿ ಸಚ್ಚಿನನ್ನ ಬಂಧಿಸಿದ್ದಾರೆ.
ಬಂಧಿತ ಸಚ್ಚಿನ ಹತ್ಯೆ ಮಾಡಿದ್ದ ಇಬ್ಬರೊಂದಿಗೆ ಬೆಳಗಿನ ಜಾವ ಆರು ಗಂಟೆವರೆಗೂ ಕುಡಿದು ಆನಂತರ ಹುಡುಗಿ ಸಲುವಾಗಿ ಜಗಳ ಆಡಿಕೊಂಡಿದ್ದಾರೆ. ಆದ್ರೇ ವಿಕೋಪಕ್ಕೆ ಜಗಳ ಹೋಗಿ ಸಚ್ಚಿನ್ ಮೊದಲು ಸುಮೀತ್ ಗೆ ಹೊಡೆದಿದ್ದಾನೆ. ಆನಂತರ ಅದನ್ನ ಪ್ರಶ್ನಿಸಿದ ಶಿವಕುಮಾರ ಗೆ ಹೊಡೆದು ಗ್ಯಾಸ್ ಬ್ಲಾಸ್ಟ್ ಮಾಡಲು ಪ್ರಯತ್ನಿಸಿದ ಸಚ್ಚಿನ್ ಅದು ಆಗದಿದ್ದಾಗ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಈ ಕುರಿತು ನ್ಯೂಟೌನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

loading...

LEAVE A REPLY

Please enter your comment!
Please enter your name here