ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಅಂಗವಾಗಿ ವಿವಿಧ ಸ್ಪರ್ಧೆಗಳು

0
22
loading...

ಶಿರಸಿ : ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಅಂಗವಾಗಿ ನಡೆದ ವಿವಿಧ ಸ್ಪರ್ಧೆಯಲ್ಲಿ 25 ಕ್ಲಸ್ಟರ್‍ಗಳ ಅಂದಾಜು 2500 ವಿದ್ಯಾರ್ಥಿಗಳು ಪಾಲ್ಗೊಂಡು ಜನ-ಮನ ಸೆಳೆದರು.
ನಗರದ ಮಾರಿಕಾಂಬಾ ಪ್ರೌಢಶಾಲೆ ಹಾಗೂ ಶಾಸಕರ ಮಾದರಿ ಶಾಲೆ ನಂ.2ರಲ್ಲಿ ಹತ್ತಾರು ಸ್ಪರ್ಧೆಗಳು ನಡೆದವು. ಹಿರಿಯ ಹಾಗೂ ಕಿರಿಯ ವಿಭಾಗಗಳ ಛದ್ಮವೇಶ, ಆಶುಭಾಷಣ, ವಿವಿಧ ಭಾಷಾ ಕಂಠಪಾಟ ಸ್ಪರ್ಧೆ, ಕವಾಲಿ, ಕಿರುನಾಟಕ, ನೃತ್ಯ, ಕೋಲಾಟ, ರಸಪ್ರಶ್ನೆ, ಭಾಷಣ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.20 ವೈಯಕ್ತಿಕ ಸ್ಪರ್ಧೆ, 5 ಗುಂಪು ಸ್ಪರ್ಧೆ ಹಿರಿಯರ ವಿಭಾಗದಲ್ಲಿ ಆಯೋಜಿಸಿದ್ದರೆ, ಕಿರಿಯರ ವೈಯಕ್ತಿಕ ವಿಭಾಗದಲ್ಲಿ 20 ಹಾಗೂ 4 ಗುಂಪು ಸ್ಪರ್ಧೆಗಳು ನಡೆದವು. ಒಟ್ಟೂ 49 ವೈವಿಧ್ಯಮಯ ಸ್ಪರ್ಧೆಗಳಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿ ಅದೃಷ್ಟ ಪರೀಕ್ಷಿಸಿದರು.
ಗಮನ ಸೆಳೆದ ಛದ್ಮವೇಷ….
ಹಿರಿಯ ಹಾಗೂ ಕಿರಿಯ ವಿಭಾಗದ ಛದ್ಮವೇಷ ಸ್ಪರ್ಧೆ ವಿಶೇಷವಾಗಿ ಗಮನ ಸೆಳೆಯಿತು. ಕೃಷ್ಣವೇಷ, ಶಿಲಾಬಾಲಿಕೆ, ಕಾಳಿಂಗ ಮರ್ಧನ, ದುರ್ಗೆ ಸೇರಿದಂತೆ ವಿವಿಧ ಪಾತ್ರಗಳಲ್ಲಿ ವಿದ್ಯಾರ್ಥಿಗಳು ಅಮೋಘ ಪ್ರದರ್ಶನ ನೀಡಿದರು. ಶಾಲೆಯ ಶಿಕ್ಷಕರು, ವಿದ್ಯಾರ್ಥಿ ಪಾಲಕರು ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪರಿಕರ ಜೋಡಣೆ ಹಾಗೂ ವಸ್ತ್ರಾಲಂಕಾರಗಳಲ್ಲಿ ಸಹಕರಿಸಿದರು.

loading...

LEAVE A REPLY

Please enter your comment!
Please enter your name here