ತಾಲೂಕಾ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ

0
21
loading...

ಜೋಯಿಡಾ : ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ವಿಧ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು ಎಲ್ಲರೂ ಸ್ಪರ್ಧಾ ಮನೋಭಾವನೆಯಿಂದ ಆಡಿ ಮುಂದಿನ ದಿನಗಳಲ್ಲಿ ತಾಲೂಕಿಗೆÀ, ಜಿಲ್ಲೆಗೆ ಹೆಸರು ಬರುವಂತೆ ಮಾಡಬೇಕೆಂದು ಕುಂಬಾರವಾಡಾ ಗ್ರಾ.ಪಂ ಅಧ್ಯಕ್ಷ ಪುರುಶೋತ್ತಮ ಕಾಮತ ಹೇಳಿದರು.
ಇವರು ತಾಲೂಕಿನ ಕುಂಬಾರವಾಡಾದಲ್ಲಿ ನಡೆದ ತಾಲೂಕಾ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮಲ್ಲಿ ಪ್ರತಿಭೆಗಳಿದ್ದು, ದೈಹಿಕವಾಗಿ ಸಬಲರಿದ್ದು, ಮಾರ್ಗದರ್ಶನದ ಕೊರತೆ ಇದೆ ಎಂದರು. ಈ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಕುಂಬಾರವಾಡಾ ಶಾಲೆಯ ಮುಖ್ಯಾದ್ಯಾಪಕ ಯಶವಂತ ನಾಯ್ಕರವರನ್ನು ಅಭಿನಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್. ಎಲ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಕೊರತೆಯ ನಡುವೆಯೂ ತಾಲೂಕಿನ ಎಲ್ಲ ಪ್ರೌಢಶಾಲಾ ದೈ.ಹಿ. ಶಿಕ್ಷಕರು ಸಹಾಕಾರವನ್ನು ನೀಡಿದ್ದಾರೆ. ಕ್ರೀಡಾಕೂಟ ಯಶಸ್ವಿಯಾಗಲೂ ಕುಂಬಾರವಾಡಾ ಯುವಕ ಸಂಘಗಳು ಹಾಗೂ ನಾಗರಿಕರು ಹೆಚ್ಚಿನ ಶ್ರಮವಹಿಸಿದ್ದು ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದರು. ಜೋಯಿಡಾ ತಾ.ಪಂ ಸದಸ್ಯ ಸುರೇಶ ಬಂಗಾರೆ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ ಸದಸ್ಯ ರಮೇಶ ನಾಯ್ಕ ಕ್ರೀಡಾ ಜ್ಯೋತಿ ಸ್ವೀಕರಿಸಿ ಕ್ರೀಡಾಪಟುಗಳಿಗೆ ಶುಭಕೋರಿದರು.
ವೇದಿಕೆಯಲ್ಲಿ ತಾ.ಪಂ ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಗ್ರಾ.ಪಂ ಸದಸ್ಯರಾದ ದತ್ತಾ ನಾಯ್ಕ, ಡಿಗಂಬರ ದೇಸಾಯಿ, ಮುಖಂಡರಾದ ಮನೋಜ ಅನಸ್ಕರ, ಶಿಕ್ಷಕ ಸಂಘದ ಅಧ್ಯಕ್ಷ ದೀಪಕ ಗೋಕರ್ಣ, ಕ್ಷೇತ್ರ ಸಮನ್ವಯಾಧಿಕಾರಿ ಎ.ಆರ್ ರೆಹಮಾನ, ಯುವ ಸಂಘದ ಅಧ್ಯಕ್ಷ ರೋಷನ ಕಾಮತ ಮುಂತಾದವರು ಉಪಸ್ತಿತರಿದ್ದರು. ಮುಖ್ಯಾದ್ಯಾಪಕ ಯಶವಂತ ನಾಯ್ಕ ಸರ್ವರನ್ನು ಸ್ವಾಗತಿಸಿದರು. ದೈ.ಶಿ ಎಲ್.ಎಮ್ ಪಟಗಾರ ಕ್ರೀಡಾಪ್ರತಿಜ್ಞೆ ಭೋದಿಸಿದರೆ ಸಹ ಶಿಕ್ಷಕ ಶ್ರೀಕಾಂತ ನಾಯ್ಕ ವಂದಿಸಿದರು. ಶಿಕ್ಷಣ ಸಂಯೋಜಕ ಭಾಸ್ಕರ ಗಾಂವಕರ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here