ನರೇಂದ್ರ ಮೋದಿಯವರು ಇವರು ಮಧ್ಯೆ ಪ್ರವೇಶಿಸಿ

0
12
loading...

ಗೋಕಾಕ 28: ಕಾವೇರಿ ನದಿ ನೀರಿನ ಸಮಸ್ಯೆಗೆ ರಾಷ್ಟ್ರಪತಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಇವರು ಮಧ್ಯೆ ಪ್ರವೇಶಿಸಿ ಕರ್ನಾಟಕದ ಜನತೆಗೆ ನ್ಯಾಯ ದೊರಕಿಸಿ ಕೊಡಬೇಕೆಂದು ನಗರದ ಶೆಪರ್ಡ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅಂಚೆ ಮೂಲಕ ಅಂಚೆ ಪತ್ರಗಳನ್ನು ರವಾನಿಸುವ ಮೂಲಕ ವಿನೂತನವಾಗಿ ವಿನಂತಿಸಿದ್ದಾರೆ.
ಬುಧವಾರದಂದು ನಗರದ ಮುಖ್ಯ ಅಂಚೆ ಕಛೇರಿಯ ಆವರಣದಲ್ಲಿ ಸೇರಿದ ವಿದ್ಯಾರ್ಥಿಗಳು, ಕಾವೇರಿ ಇದ್ದರೆ ಕರ್ನಾಟಕ, ಕಾವೇರಿ ನಮ್ಮದು, ನೀರು ನಮ್ಮದು, ಸುಪ್ರೀಂ ಕೋರ್ಟ ತೀರ್ಪು ಕರ್ನಾಟಕ್ಕೆ ಮರಣ ಶಾಸನ, ಪ್ರಾಣ ಕೊಟ್ಟೆವು ಆದರೆ ನೀರು ಕೊಡಲಾರೆವು ಎಂಬ ಬಿತ್ತಿ ಪತ್ರಗಳು ಹಾಗೂ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಅಂಚೆ ಪತ್ರಗಳನ್ನು ರವಾನಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಸಂದೀಪ ಅನಿಗೋಳ, ಶಿಕ್ಷಕರಾದ ಚಂದ್ರಶೇಖರ ತಿರಕನ್ನವರ, ಸಂಗೀತಾ ಬಡಿಗೇರ, ಶಿಲ್ಪಾ ಸಾವಂಜಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

loading...

LEAVE A REPLY

Please enter your comment!
Please enter your name here