ನಾರಾಯಣ ಗುರುಗಳ ಹೆಸರು ಜನರ ಮನಸ್ಸಲ್ಲಿ ಇಂದಿಗೂ ಅಜರಾಮರ: ಹರಿಪ್ರಸಾದ

0
25
loading...

ಮುಂಡಗೋಡ : ದೇಶದಲ್ಲಿ ರಾಜ ಮಹಾರಾಜರು ನಮ್ಮನ್ನಾಳಿ ಹೋಗಿದ್ದಾರೆ. ಆದರೆ ನಾರಾಯಣ ಗುರುಗಳ ಹೆಸರು ಮಾತ್ರ ಇಂದಿಗೂ ಜನರ ಮನಸ್ಸಲ್ಲಿ ಅಜರಾಮರಾಗಿ ಉಳಿದಿದೆ. ಹಿಂದೂ ಧಮದಲ್ಲಿ ಜಾತಿ ವಿಂಗಡಿಸುವ ವ್ಯವಸ್ಥೆಯ ವಿರುದ್ದ ಹೋರಾಡಿದ ಮಹಾನ ವ್ಯಕ್ತಿ ಎಂದರೆ ನಾರಾಯಣ ಗುರು ಗಳು ಎಂದು ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು.
ಶುಕ್ರವಾರ ತಾಲೂಕಿನ ನ್ಯಾಸರ್ಗಿ ಗ್ರಾಮದ ನಾರಾಯಣ ಗುರು ಸಭಾಂಗಣದಲ್ಲಿ ನಾರಾಯಣ ಗುರು ಅವರ 162 ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾಜದ ಒಳಿತಿಗಾಗಿ ಕೆಲಸ ಮಾಡಿದವರನ್ನು ಜನ ಎಂದಿಗೆ ಮರೆಯುವುದಿಲ್ಲ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರಿಂದ ಅನಿಷ್ಟ ಜಾತಿ ಪದ್ದತಿಯನ್ನು ತೊಡೆದುಹಾಕಲು ಸಾದ್ಯ. ದೇಶದಲ್ಲಿ ಕಾನೂನಿಗೇನು ಕೊರತೆ ಇಲ್ಲ. ಆದರೆ ಅದನ್ನು ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಇದೆ ಎಂದರು.
ಸಂಸದ ಅನಂತಕುಮಾರ ಹೆಗಡೆ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಎಲ್ಲ ಕೆಲಸವನ್ನು ಸೇವೆ ಎನ್ನಲಾಗುವುದಿಲ್ಲ. ಹೃದಯ ಹಾಗೂ ಸಮರ್ಪಣಾ ಭಾವನೆಯಿಂದ ಬಂದರೆ ಮಾತ್ರ ಅದು ಸೇವೆ ಎನಿಸಿಕೊಳ್ಳುತ್ತದೆ. ಸೇವೆ ಎಂದರೇನು ಎಂಬುವುದನ್ನು ನಾರಾಯಣ ಗುರುಗಳು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನ ಇಂದಿನ ಪೀಳಿಗೆಗೆ ಅತ್ಯವಶ್ಯವಾಗಿದೆ ಎಂದರು. ಶಾಸಕ ಶಿವರಾಮ ಹೆಬ್ಬಾರ ಹಾಗೂ ನಾರಾಯಣಗುರು ಟ್ರಸ್ಟ್ ಅಧ್ಯಕ್ಷ ಸಿ.ಕೆ.ಅಶೋಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಡಿತ ವೇದಮೂರ್ತಿ ರುದ್ರಮುನಿ ಸ್ವಾಮಿಗಳು ಸಾನಿದ್ಯವಹಿಸಿದ್ದರು.ಶಿರಸಿ ಬಿ.ಆರ್.ಪಿ ಈಶ್ವರ ನಾಯ್ಕ, ತಾ.ಪಂ ಅಧ್ಯಕ್ಷೆ ದರಾಕ್ಷಾಯಿಣಿ ಸುರಗಿಮಠ, ಪ.ಪಂ ಅಧ್ಯಕ್ಷ ಮಹ್ಮದರಪೀಕ ಇನಾಮದಾರ, ಜಿ.ಪಂ ಸದಸ್ಯ ರವಿಗೌಡ ಪಾಟೀಲ, ಎಲ್.ಟಿ.ಪಾಟೀಲ, ಗ್ರಾ.ಪಂ ಅಧ್ಯಕ್ಷೆ ತುಳಜಾಬಾಯಿ ಗವಾಣಿ, ಪಿ.ಎಸ್.ಸಂಗೂರಮಠ, ಕೃಷ್ಣ ಹಿರೇಹಳ್ಳಿ, ಗುಡ್ಡಪ್ಪ ಕಾತೂರ, ಕೆ.ಆರ್.ಬಾಳೇಕಾಯಿ, ಎಚ್.ಎಮ್.ನಾಯ್ಕ, ಉದಯ ನಾಯ್ಕ, ನಾಗೆಶ ನಾಯ್ಕ, ಎ.ಎಚ್.ದೊಡ್ಮನಿ, ಪಿ.ಜಿ.ಪುರುಷನ, ಕುಮಾರ ಕೃಷ್ಣನ, ನಾಗರಾಜ ನಾಯ್ಕ, ಅಶೋಕ ಚಲವಾದಿ ಮುಂತಾದವರು ಉಪಸ್ಥಿತರಿದ್ದರು. ಸಿ.ಕೆ.ಅಶೋಕ ಸ್ವಾಗತಿಸಿದರು. ಸುಜಿತ ಸದಾನಂದ ನಿರೂಪಿಸಿದರು.
ಇದೇ ವೇಳೆಯಲ್ಲಿ ಸುದೀರ್ಗ ಕಾಲದಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಲೋಕದ್ವನಿ ಸಂಪಾದಕ ಪಿ.ಎಸ್.ಸದಾನಂದ ಅವರನ್ನು ಸನ್ಮಾನಿಸಲಾಯಿತು.

loading...

LEAVE A REPLY

Please enter your comment!
Please enter your name here