ನೀರು ಕಂಡು ಗಾಬರಿಯಾದ ಬಲರಾಮ!

0
21
loading...

ಮೈಸೂರು: ಆ:27; ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆ ಬಲರಾಮ ನೀರು ಕಂಡು ಗಾಬರಿಯಾಗಿದ್ದು, ಕೆಲಕಾಲ ಆತಂಕ ಸೃಷ್ಟಿಸಿತು. ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿರುವ ಗಜಪಡೆಯ ತಾಲೀಮು ಇಂದು ಆರಂಭವಾಗಿದ್ದು, ಮೊದಲ ದಿನವೇ ಬಲರಾಮ ಆನೆ ಗಾಬರಿಗೊಂಡು ಓಡಿಹೋದ ಘಟನೆ ನಡೆಯಿತು.
ಈ ಸಂದರ್ಭ ಸಾರ್ವಜನಿಕರು ಭಯದಿಂದ ದಿಕ್ಕಾಪಾಲಾಗಿ ಓಡಿದರು. ಆದರೆ ಸ್ವಲ್ಪ ದೂರ ಓಡಿದ ಆನೆಯನ್ನು ಬೆನ್ನಟ್ಟಿದ ಮಾವುತ ಅದನ್ನು ನಿಯಂತ್ರಿಸಿ ಮತ್ತೆ ಹಿಂದಕ್ಕೆ ಕರೆತಂದಾಗ ತಾಲೀಮು ನೋಡಲು ನೆರೆದಿದ್ದ ಜನ ನಿಟ್ಟುಸಿರು ಬಿಟ್ಟರು. ಅರಮನೆ ಮೈದಾನದಲ್ಲಿ ಆನೆಗಳ ತಾಲೀಮು ಆರಂಭವಾಗಿದೆ.
ಕವಾಡಿ ಬಲರಾಮನಿಗೆ ನೀರು ಕುಡಿಸಲು ಸಂಪ್ ಕರೆದೊಯ್ದಾಗ ನೀರು ಕಂಡ ಕೂಡಲೆ ಬಲರಾಮ ಕೊಂಚ ವಿಚಲಿತನಾಗಿ ಸ್ವಲ್ಪ ದೂರ ಓಡಿಹೋಯಿತು. ಸ್ವಲ್ಪ ಹೊತ್ತಿನ ನಂತರ ತಹಬದಿಗೆ ಬಂದ ಬಲರಾಮನನ್ನು ತಾಲೀಮಿನಲ್ಲಿ ತೊಡಗಿಸಿಕೊಳ್ಳಲಾಯಿತು.
ಆನೆಗಳ ತೂಕ: ನಗರದ ಧನ್ವಂತರಿ ರಸ್ತೆಯಲ್ಲಿರುವ ಶ್ರೀ ಸಾಯಿರಾಮ್ ವೇಬ್ರಿಡ್ಜ್‍ನಲ್ಲಿಂದು ಆರೋಗ್ಯ ಪರಿಶೀಲಿಸಿ ಇಂದು ಅವುಗಳ ತೂಕ ಮಾಡಲಾಯಿತು.
ಈ ಬಾರಿಯ ಗಜಪಡೆಯ ಕ್ಯಾಪ್ಟನ್ ಅರ್ಜುನನ ತೂಕ 5615 ಕೆ.ಜಿ, ಬಲರಾಮ 4920, ಅಭಿಮನ್ಯು 4855, ಗಜೇಂದ್ರ 4620, ವಿಜಯ 2635 ಹಾಗೂ ಕಾವೇರಿ 3,005 ಕೆಜಿ ತೂಕ ಹೊಂದಿವೆ.
ಇದರಲ್ಲಿ ಅರ್ಜುನನು ಅಂಬಾರಿ ಹೊರಲು ಸದೃಢನಾಗಿದ್ದು , ಈಗಾಗಲೇ ಈ ಆನೆಗಳಿಂದ ತಾಲೀಮು ನಡೆಸಲಾಗುತ್ತಿದೆ.
ಕಾಡಿನಿಂದ ನಾಡಿಗೆ ಬಂದಂತಹ ಸಂದರ್ಭದಲ್ಲಿ ಅರಮನೆಗೆ ಕರೆತರಲಾಗಿತ್ತು ಬಳಿಕ ಆನೆಗಳ ಆರೋಗ್ಯವನ್ನು ಪರಿಶೀಲಿಸಿ, ಅವರ ತೂಕ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆನೆಗಳಿಗೆ ಯಾವ ರೀತಿಯ ಪೌಷ್ಠಿಕಾಂಶ ಆಹಾರ ನೀಡುವ ಸಲುವಾಗಿ ಆರೋಗ್ಯ, ಸದೃಢ ಮೈಕಟ್ಟು ಮಾಡಬೇಕಾಗಿರುವುದರಿಂದ ತೂಕ ಮಾಡಲಾಗುತ್ತದೆ.

loading...

LEAVE A REPLY

Please enter your comment!
Please enter your name here