ನ.27 ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

0
35
loading...

ಕುಷ್ಟಗಿ : ತಾಲೂಕಿನ ತಳುವಗೇರಾ ಗ್ರಾಮದಲ್ಲಿ 9ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ 27ರಂದು ನಡೆಸಲು ಗ್ರಾಮದ ಸಾರ್ವಜನಿಕರು ಸರ್ವ ಸಮ್ಮತದಿಂದ ಒಪ್ಪಿಗೆ ನೀಡಿ ಅಭೂತಪೂರ್ವವಾಗಿ ನಡೆಸುವಂತೆ ತೀರ್ಮಾನಿಸಲಾಯಿತು.
ತಳುವಗೇರಾ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮದ ಮುಖಂಡರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಪದಾಧಿಕಾರಿಗಳು ಸಭೆ ಸೇರಿ ಚರ್ಚಿಸಿ 9ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಳುವಗೇರಾದ ಎಲ್ಲಾ ಗ್ರಾಮಸ್ಥರ ಸಹಕಾರದೊಂದಿಗೆ ಯಾವುದೇ ಕುಂದು ಕೊರತೆ ಬಾರದಂತೆ ಯಶಸ್ವಿಯಾಗಿ ನಡೆಸಲು ನಿರ್ಧಾರ ಕೈಗೊಂಡರು. ಸಮ್ಮೇಳನದಲ್ಲಿ ಮುಖ್ಯ ವೇದಿಕೆ, ಊಟ ಉಪಚಾರ ಹಾಗೂ ಪುಸ್ತಕ ಭಂಡಾರ ಮಳಿಗೆಗಾಗಿ ಸ್ಥಳಾವಕಾಶ ಕಲ್ಪಿಸುವುದು ಸೇರಿದಂತೆ ಸಮ್ಮೇಳನದಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸಲು ಯುವ ತಂಡಗಳನ್ನು ರಚಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಒಪ್ಪಿಗೆ ನೀಡಲಾಯಿತು.
ಗವಿಶ್ರೀಗಳ ಸಾನಿಧ್ಯ: ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಕಾರ್ಯಕ್ರಮಕ್ಕೆ ಸಾನಿಧ್ಯ ವಹಿಸಲು ಆಮಂತ್ರಿಸುವಂತೆ ತೀರ್ಮಾನಿಸಲಾಯಿತು. ಅಲ್ಲದೇ ವಿವಿಧ ಜನಪ್ರತಿನಿಧಿಗಳು, ಸ್ಥಳಿಯ ಶಾಸಕರು, ಮಾಜಿ ಶಾಸಕರು, ಮಠಾಧೀಶರು, ಜಿಪಂ, ತಾಪಂ ಸದಸ್ಯರು, ಗಣ್ಯರು, ಇಲಾಖೆಗಳ ಅಧಿಕಾರಿಗಳು, ಕಲಾವಿದರು, ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪ್ರಮುಖರನ್ನು ಸಮ್ಮೇಳನದಲ್ಲಿ ತೊಡಗಿಸಿಕೊಂಡು ಕ್ರೀಯಾಶೀಲತೆಯಿಂದ ಭಾಗವಹಿಸಲು ಆಹ್ವಾನಿಸುವಂತೆ ಸಭೆಯ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ನಟರಾಜ ಸೋನಾರ, ಪ್ರಮುಖರಾದ ವೀರೇಶ ಬಂಗಾರಶೆಟ್ಟರ್, ಎಚ್.ವೈ.ಈಟಿಯವರ, ಮಂಜುನಾಥ ಮಹಾಲಿಂಗಪೂರ, ಎಸ್.ಜಿ.ಕಡೇಮನಿ, ಎಂ.ಬಿ.ನಂದವಾಡಗಿ, ತಳವಗೇರಾ ಗ್ರಾಮದ ಮುಖಂಡರಾದ ಪಂಪನಗೌಡ ಪಾಟೀಲ್, ಶರಣಪ್ಪ ಕಂದಕೂರ, ಶರಣಗೌಡ ನೀಲಗೌಡರ, ಮಲ್ಲಿಕಾರ್ಜುನ ಮೇಟಿ, ಸಿದ್ದನಗೌಡ ಪೊಲೀಸ್‍ಪಾಟೀಲ್, ಸುರೇಶ ಪಟ್ಟೇದ್, ಸಂಗಮೇಶ ಕಂದಕೂರು, ಶರಣಪ್ಪ ಚೌಡಕಿ, ಶರಣಪ್ಪ ಕರಡೆಪ್ಪನವರ, ಪರಶುರಾಮ ಮೇಲಸಕ್ರಿ, ವೀರೇಶ ಹುನಗುಂದ ಇತರರಿದ್ದರು.

loading...

LEAVE A REPLY

Please enter your comment!
Please enter your name here