ಪಕ್ಷ ಸಂಘಟನೆಗಾಗಿ 1-24 ವಾರ್ಡಗಳಲ್ಲಿ ಜೆಡಿಎಸ್ ಪದಾಧಿಕಾರಿ ನೇಮಕ: ಜಮನಾಳ

0
33
loading...

ಧಾರವಾಡ : ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಮನೆ ಮಾಡುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಸ್ಥಿತ್ವ ಕಳೆದು ಹೋಗುತ್ತದೆ ಎಂಬ ಭಯದಿಂದ ಕ್ಷುಲ್ಲಕ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಅಂದ್ರೆ ಅದು ಜನ-ಸಾಮಾನ್ಯರ, ಬಡವರ ದೀನ ದಲಿತ ಪಕ್ಷ. ಕುಮಾರಸ್ವಾಮಿ ಸದಾ ಇಂತಹ ಜನರ ಆಶಾಕಿರಣವಾಗಿದ್ದಾರೆ. ಈ ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡುತ್ತಿರುವುದಕ್ಕೆ ಕಾಂಗ್ರೇಸ್ ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟಿದೆ. ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ರೆ ಜನಸಾಮಾನ್ಯ ಅವರ ಹತ್ತಿರಕ್ಕೆ ಬರುತ್ತಾರೆ ಹೀಗಾಗಿ ಜೆಡಿಎಸ್ ಬಲಗೊಳ್ಳುತ್ತದೆ ಎಂದು ಈ ಭಾಗದ ನಾಯಕರು ತಮ್ಮ ಅಸ್ಥಿತ್ವ ಕೊಳ್ಳುವ ಭೀತಿಯಲ್ಲಿ ಜೆಡಿಎಸ್ ಪಕ್ಷದ ಹಾಗೂ ಕುಮಾರಸ್ವಾಮಿಯವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಧಾರವಾಡ ಶಹರದಲ್ಲಿ 1-24 ವಾರ್ಡಗಳಲ್ಲಿ ಜೆಡಿಎಸ್ ಪದಾಧಿಕಾರಿಗಳನ್ನು ನೇಮಕ ಮಾಡುವ ಹಿನ್ನಲೆಯಲ್ಲಿ ವಾರ್ಡನ ಪ್ರಮುಖ ಹಾಗೂ ಯುವಜನರನ್ನು ಸಂಪರ್ಕಿಸಿ ಪಕ್ಷವನ್ನು ಬಲಪಡಿಸಲಿದ್ದೇವೆ. ಚುನಾವಣೆ ಸಮಯದಲ್ಲಿ ನಮಗೆ ಕಾರ್ಯಕರ್ತರು ಸಿಗಬಲ್ಲರು ಆದರೆ ಪಕ್ಷದ ಕಾರ್ಯ ಚಟುವಟಿಕೆಯನ್ನು ನಿರಂತರವಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಈ ಕೆಲಸ ಮಾಡುತ್ತಿದೆ. ವಾರ್ಡವಾರು ವಿವಿಧ ಘಟಕಗಳನ್ನು ರಚಿಸಿ ಯುವಜನರಿಗೆ, ಮಹಿಳೆಯರಿಗೆ ಹೆಚ್ಚು ಆಧ್ಯತೆ ನೀಡಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮೋಹನ ಅರ್ಕಸಾಲಿ, ಹಸನ ಮೆಣಸಗಿ, ರವಿ ಕುಸುಗಲ್ಲ, ನಾರಾಯಣ ಮೊರಬ, ಕಮಲಾ ಹೊಂಬಳ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here