ಪೂರ್ಣಗೊಂಡ ಹೆಣ್ಣು ಮಕ್ಕಳ ವಸತಿ ನಿಲಯದ ಕಾಮಗಾರಿ

0
20
loading...

ಕನ್ನಡಮ್ಮ ಸುದ್ದಿ- ಯಲ್ಲಾಪುರ : ಪಟ್ಟಣದ ಕಾಳಮ್ಮನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‍ಪೂರ್ವ ಹೆಣ್ಣು ಮಕ್ಕಳ ವಸತಿ ನಿಲಯದ ಮಕ್ಕಳು ಭಯದಿಂದ ಕಾಲ ಕಳೆಯುವಂತಾಗಿದ್ದ ಅರ್ಧಮರ್ಧ ನವೀಕರಣ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು ವಿದ್ಯಾರ್ಥಿನಿಯರು ಮುಜುಗರದಿಂದ ಮುಕ್ತಿ ಹೊಂದಿ ನಿಟ್ಟುಸಿರು ಬಿಡುವಂತಾಗಿದೆ. ಕನ್ನಡಮ್ಮ ಪತ್ರಿಕೆ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ವಿಶೇಷ ವರದಿ ಪ್ರಕಟಿಸಿತ್ತು. ಈ ನವೀಕರಣ ಕಾಮಗಾರಿಯನ್ನು ಸರ್ಕಾರ ಪೆಬ್ರವರಿಯಲ್ಲಿಯೇ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಗಿತ್ತು. ಆದರೆ 5-6 ತಿಂಗಳಾದರೂ ಕಾಮಗಾರಿ ಕುಂಟುತ್ತಾ ಸಾಗಿ,ಹೆಣ್ಣು ಮಕ್ಕಳು ವಸತಿನಿಲಯದಲ್ಲಿಮುಜುಗರದಿಂದ ಇರುವಂತಾಗಿದ್ದನ್ನು ಮನಗಂಡ ಇಲಾಖೆ ಸುಸಜ್ಜಿತವಾದ ಅಡಿಗೆಕೋಣೆ,ಊಟದ ಹಾಲ್, ಹಾಳಾಗಿದ್ದಸಿಸಿಕ್ಯಾಮರಾ ದುರಸ್ಥಿ ಸೇರಿದಂತೆ ಸಂಪೂರ್ಣವಾಗಿ ವಸತಿ ನಿಲಯದ ನವೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

loading...

LEAVE A REPLY

Please enter your comment!
Please enter your name here