ಪೇಟಾತೊಟ್ಟು ಗಣೇಶ ಚೌತಿ ಆಚರಿಸಿದ ಪೋಲಿಸರು

0
15
loading...

ಹಾರೂಗೇರಿ 7: ಪ್ರತಿವರ್ಷ ಗಣೇಶ ಹಬ್ಬ ಬಂತೆಂದರೆ ಸಾಕು, ಪ್ರತಿಯೊಬ್ಬರಲ್ಲಿ ಸಂಭ್ರಮ ಮನೆಮಾಡಿರುತ್ತದೆ, ಈ ವರ್ಷವೂ ಕೂಡಾ ಗಣೇಶ ಚೌತಿ ಹಬ್ಬವನ್ನು ಹಾರೂಗೇರಿ ಪಟ್ಟಣದಲ್ಲಿ ಬಹಳ ಸಂಭ್ರಮದಿಂದ ಸ್ವಾಗತಿಸಿದರು, ಅದರಲ್ಲೂ ನೂತನ ಪೋಲಿಸ ಠಾಣೆಯ ಅಧಿಕಾರಿಗಳು ಸಿಬ್ಬಂದಿಗಳು ಕೆಂಪು ಪೇಟಾತೊಟ್ಟು ವಿಘ್ನ ವಿನಾಶಕ ಗಣಪನನ್ನು ಭವ್ಯ ಮೆರವಣಿಗೆ ಮೂಲಕ ತೆರಳಿ ಠಾಣೆಯಲ್ಲಿ ಪ್ರತಿಷ್ಠಾಪಿಸಿದರು.
ಗಣೇಶ ಹಬ್ಬದ ನಿಮಿತ್ಯ ಹಾರೂಗೇರಿ ಪಟ್ಟಣದಲ್ಲಿ ಮುಂಜಾನೆಯಿಂದಲೇ ಜನರಲ್ಲಿ ಸಂಭ್ರಮ ಮನೆ ಮಾಡಿತ್ತು, ಪಟ್ಟಣದಲ್ಲಿ ಗಣೇಶಮೂರ್ತಿ ಖರೀದಿಸಿ ಪ್ರತಿಷ್ಠಾಪಿಸಲು ಗಣೇಶ ಮೂರ್ತಿ ತಯಾರಕ ವಿಕ್ರಮ ಪತ್ತಾರ ಸಹೋದರರ ಮನೆಯ ಮುಂದೆ ಜನ ಸಾಗರವೇ ನೆರದಿತ್ತು, ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೊಸ ಉಡುಪುಗಳನ್ನು ತೊಟ್ಟು ತೆಲೆಗೆ ಗಣೇಶ ಬಪ್ಪೋ ಮೋರಿಯಾ ಎಂಬ ರಬ್ಬನ ಕಟ್ಟಿ, ಪಟಾಕಿ ಸಿಡಿಸುವ ಮೂಲಕ ತಮ್ಮ ಸ್ಥಳಗಳಿಗೆ ಗಣೇಶಮೂರ್ತಿಯನ್ನು ಭವ್ಯವಾದ ಮೆರವಣಿಗೆ ಮೂಲಕ ಕರೆತಂದು ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕ ಹಾಗೂ ಸಿಹಿ ವಿತರಿಸಿದರು,
ಪಿಎಸ್‍ಐ ಶ್ರೀಶೈಲ ಬ್ಯಾಕೋಡ ಪತ್ರಕರ್ತರ ಜೊತೆ ಮಾತನಾಡಿ ಭಾರತ ದೇಶ ಹಬ್ಬ ಹರಿದಿನಗಳ ತವರೂರು, ಹಬ್ಬಗಳು ಪರಸ್ಪರ ಪ್ರೀತಿ ವಿಶ್ವಾಸ ವೃದ್ಧಿಸಬೇಕು, ಸಾರ್ವಜನಿಕರು ಗಣೇಶಚೌತಿ ಹಬ್ಬವನ್ನು ಕೇವಲ ಆಡಂಬರಕ್ಕಾಗಿ ಆಚರಿಸದೇ ಭಕ್ತಿ,ಭಾವದಿಂದ ಗಣೇಶನನ್ನು ಆರಾಧಿಸಬೇಕು, ಗಣೇಶನ ಮೆರವಣಿಗೆ ಸಮಯದಲ್ಲಿ ಪಟ್ಟಣದಲ್ಲಿ ಸಂಪೂರ್ಣವಾಗಿ ಡಾಲ್ಬಿ ಬಳಕೆ ನಿಷೇದ ಮಾಡಲಾಗಿದೆ, ಸಾರ್ವಜನಿಕರು ಸಹಕರಿಸಬೇಕು, ಇಲ್ಲದಿದ್ದರೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು,
ಮುಂಜಾನೆಯಿಂದಲೂ ಸಂಜೆವರೆಗೆ ಗಣೇಶಮೂರ್ತಿಗಳ ಮೆರವಣಿಗೆಗಳು ಸಾಗಿದವು, ಗಣೇಶಚೌತಿ ನಿಮಿತ್ಯ ಗಲ್ಲಿಗಲ್ಲಿಗಳು ಸುಂದರ ತಾಣಗಳಾಗಿ ಪ್ರಕಾಶಿಸುತ್ತಿವೆ, ಗಣೇಶ ಹಬ್ಬದ ನಿಮಿತ್ಯ ಪಟ್ಟಣದ ಪೋಲಿಸರು ಕೂಡಾ ಮುಂಜಾನೆ ಹೊಸಹೊಸ ಉಡುಪು ತೊಟ್ಟು, ವಿಶೇಷವಾಗಿ ಕೆಂಪು ಬಣ್ಣದ ಪೇಟಾತೊಟ್ಟು ವಾಲಗ ಮೇಳದೊಂದಿಗೆ ಗಣೇಶನ ಮೆರವಣಿಗೆ ನಡೆಸಿ ನಂತರ ತಮ್ಮ ಕರ್ತವ್ಯಗಳಿಗೆ ಹಾಜರಿಗಿದ್ದು ಕೂಡಾ ಗಣೇಶಚೌತಿ ಹಬ್ಬಕ್ಕೆ ವಿಶೇಷ ಮೆರಗು ತಂದಿತು,
ಈ ಸಂದರ್ಭದಲ್ಲಿ ಮಾಹಿತಿಹಕ್ಕು ತಾಲೂಕಾಧ್ಯಕ್ಷ್ಯ ಭೀಮು ಕರ್ಣವಾಡಿ, ಜೈಭೀಮ ಯುವಕ ಸಂಘ ಗಜಾನನ ಉತ್ಸವ ಕಮೀಟಿಯ ಸುರೇಶ ಅರಕೇರಿ, ಚಿದಾನಂದ ಮಾಳಗಿ, ಮಲ್ಲೇಶ ಕಾಂಬಳೆ, ಲಕ್ಷ್ಮಣ ಪರಪ್ಪಗೋಳ, ರಾಹುಲ ಕಾಂಬಳೆ, ಹಣಮಂತ ಕುಳ್ಳೊಳ್ಳಿ, ಸದಾಶಿವ ಅರಕೇರಿ, ತವನಪ್ಪ ಶಿಂಗೆ, ಲಾಲಚಂದ್ರ ನಡೋಣಿ, ಶ್ರೀನಾಥ ಕಾಂಬಳೆ, ಕಾಮು ಶಿಂಗೆ, ಸಿದ್ದಾರೂಡ ಮಾಳಗಿ, ಸಿದ್ದಾರೂಡ ಮಾಳಗಿ, ಕುಮಾರ ದೊಡಮನಿ, ವಿಠ್ಠಲ ಶಿಂಗೆ, ಭರತೇಶ ನಡೋಣಿ, ಪೋಲಿಸ ಸಿಬ್ಬಂದಿಗಳಾದ ಬಿ.ಎಚ್ ಬಿಸಲನಾಯಕ, ವಿಷ್ಟುವರ್ಧನ ಗಾಯಕವಾಡ, ಜಿ,ಎನ್ ಇಂಚಲ, ಮಲ್ಲಿಕಾರ್ಜುನ ಯಡಹಳ್ಳಿ, ಕುಮಾರ ಪವಾರ, ಎಲ್.ಪಿ ಹಂಪಿಹೋಳಿ, ಎಮ್.ಜಿ ದೊಡಮನಿ, ಪ್ರಕಾಶ ಖವಟಕೊಪ್ಪ, ಎಸ್.ಬಿ ಭರಮಒಡೆಯರ, ಎಸ್,ಬಿ ಬೊಸ್ಲೆ, ಆರ್,ಪಿ ಕಾಟೇಕರಿ, ಜಿ,ಎ ಹಾವರೆಡ್ಡಿ ಸೇರಿದಂತೆ ಪಟ್ಟಣದ ಅನೇಕರು ಗಣೇಶ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here