ಭಕ್ತಾಧಿಗಳಿಗೆ ದಾಸೋಹ ಸಮರ್ಪಣೆ

0
32
loading...

ಪಾಲಭಾವಿ:-ಸಮೀಪದ ಕಪ್ಪಲಗುದ್ದಿ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಭರಮಲಿಂಗೇಶ್ವರ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಿತು.
ರವಿವಾರ ದಿ.4ರಂದು ಪರಸ್ಥಳದಿಂದ ಬರುವ ವಾಲಗ ಬರಮಾಡಿಕ್ಕೊಳ್ಳಲಾಯಿತು, ಸೋಮವಾರ ದಿ.5ರಂದು ಬೆಳೆಗ್ಗೆ 6ಗಂಟೆಗೆ ದೇವರ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ನೇರವೆರಿತು,
ಮುಂಜಾನೆ 10ಗಂಟೆಗೆ ಶ್ರೀ ಭರಮಿಂಗೇಶ್ವರ ದೇವರ ಹಾಗೂ ಶ್ರೀ ಬೀರದೇವರ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಾದ ಶ್ರೀ ಸಂಗೊಳ್ಳಿ ರಾಯಣ್ಣ ಸರ್ಕಲ್, ಅಂಬೇಡ್ಕರ ಸರ್ಕಲ್, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಭಗೀರತ ದೇವಸ್ಥಾನ, ನಾಕುದೇವರ ಗುಡಿ, ಅಂಗಡಿಯವರ ಒಣಿ, ಮಾರ್ಗವಾಡಿ ಭವ್ಯ ಮೇರವಣಿಗೆಯು ವಿವಿಧ ಕಲಾಮೇಳದೊಂದಿಗೆ ಸುಮಂಗಲೆಯರಿಂದ ಪೂರ್ಣ ಕುಂಭಮೇಳ, ಆರತಿಯೊಂದಿಗೆ, ಡೋಳ್ಳು ಕುಣಿತ, ಹಲಗಿವಾದನದೊಂದಿಗೆ ಭವ್ಯ ಮೇರವಣಿಗೆ ಜರುಗಿತು.
ಮದ್ಯಾಹ್ನ 12ಗಂಟೆಗೆ ದಾಸೋಹ ಮಂಟಪದಲ್ಲಿ ಅನ್ನ ಸಂತರ್ಪಣೆ ನೇರವೆರಿತು. 12 ಗಂಟೆಯಿಂದ ವಿಜಯಪೂರ ಜಿಲ್ಲೆ ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ಶ್ರೀ ಹಿರಿಡೇಶ್ಚರ ಗಾಯಣ ಸಂಘ , ಹಾಗೂ ವಿಯಪೂರ ತಾಲೂಕಿನ ಅಂಕಲಗಿ ಗ್ರಾಮದ ಶ್ರೀ ಅಮೋಘಸಿದ್ಧೇಶ್ವರ ಗಾಯಣ ಸಂಘ ಇವರಿಂದ ತುರುಸಿನ ಡೋಳ್ಳಿನ ಪದಗಳ ಹಾಡುಗಾರಿಕೆ ಜರುಗಿದವು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಶಿವಪ್ಪ ದಡ್ಡಿಮನಿ, ನಿಂಗಪ್ಪ ನಿಡಗುಂದಿ, ಭರಮಪ್ಪ ಸನದಿ, ಯಮನಪ್ಪ ಬಿಳಿಕುರಿ, ನಾಗಪ್ಪ ಶಿವೂರ, ಬಾಲಪ್ಪ ದಡ್ಡಿಮನಿ, ಗುರು ಅಂಗಡಿ, ಭರಮಪ್ಪ ರಾಜಾಪೂರ, ರಂಗಪ್ಪ ಬಿಳಿಕುರಿ, ಬಾಳಪ್ಪ ಸಕ್ರಪ್ಪಗೋಳ, ನಾಗಪ್ಪ ನಿಡಗುಂದಿ, ಶಂಕರ ಮೇತ್ರಿ, ಭೀಮಸಿ ಮಂಟೂರ, ಭರಮಪ್ಪ ಬಾಗೋಜಿ, ಲಕ್ಕಪ್ಪ ಕುರನಿಂಗ, ಭರಮಪ್ಪ ಮಂಟೂರ, ಶಂಕರ ಐದಮನಿ ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here