ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ:ಮುನವಳ್ಳಿ

0
22
loading...

ಗೋಕಾಕ 25: ಎಲ್ಲ ಮಕ್ಕಳಲ್ಲಿ ತನ್ನದೇ ಆದ ಪ್ರತಿಭೆ ಇದ್ದು ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಕೆ.ಎಲ್.ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ನಗರದ ಕೆ.ಎಲ್.ಇ ಶಾಲಾ ಆವರಣದಲ್ಲಿ ರಾಜೇಶ್ವರಿ ಸಂಗೀತ ವಿಧ್ಯಾಲಯ ಗೋಕಾಕ ಇವರ ಹಮ್ಮಿಕೊಂಡ ನಾಡಿನ ಪ್ರಖ್ಯಾತ ಕಲಾವಿದರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ‘ಸಂಗೀತಾ ಸುಧಾ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮಕ್ಕಳನ್ನು ಹಣಗಳಿಸುವ ಯಂತ್ರಗಳನ್ನು ಮಾಡದೇ ಅವರಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಿ. ವಿದ್ಯಾದಾನವೇ ಶ್ರೇಷ್ಠದಾನವಾಗಿದ್ದು ನಿಸ್ವಾರ್ಥ ಸೇವೆಯಿಂದ ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಕಲಿಸಿ ನಮ್ಮ ದೇಶದ ಸಂಸ್ಕ್ರತಿಯನ್ನು ಬೆಳಸುವ ಸಂಸ್ಥೆಯ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಶಾರದಾ ಶಕ್ತಿ ಪೀಠದ ಶಿವಮಯಿ ಮಾತಾಜಿ ಮಾತನಾಡುತ್ತಾ ಪರಿಶುದ್ದವಾದ ಮನಸ್ಸಿನಲ್ಲಿ ಭಗವಂತ ನೆಲಸಿರುತ್ತಾನೆ ಭಗವಂತನನ್ನು ಹೃದಯಕ್ಕೆ ಕರೆಸಿಕೊಳ್ಳುವ ಶಕ್ತಿ ಸಂಗೀತಕ್ಕೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣ್ಯ ವರ್ತಕ ಎಂ.ಡಿ.ಚುನಮರಿ ವಹಿಸಿದ್ದರು. ವೇದಿಕೆಯ ಮೇಲೆ ಕೆ.ಎಲ್.ಇ ಶಾಲೆಯ ಪ್ರಾಚಾರ್ಯೆ ಅನುಪಾ ಕೌಶಿಕ. ರಾಜರಾಜೇಶ್ವರಿ ಸಂಗೀತ ವಿಧ್ಯಾಲಯದ ಅಧ್ಯಕ್ಷ ಮಂಜುನಾಥ ಹೆಗ್ಗಡೆ ಪ್ರಾಚಾರ್ಯೆ ಚಂದ್ರಕಲಾ ಹೆಗ್ಗಡೆ ಇದ್ದರು.
ಈ ಸಂಗೀತ ಕಾರ್ಯಕ್ರಮದಲ್ಲಿ ಅಂತರಾಷ್ರೀಯ ಹಾಗೂ ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ ಬೆಳಗಾವಿಯ ಸಂಜಯ ದೇಶಪಾಂಡೆ ಸಿತಾರಾ ವಾದನದಲ್ಲಿ ಕ್ಲಿಷ್ಟಕರವಾದರು ಕನ್ನಡ ಚಲನಚಿತ್ರಗೀತೆಗಳನ್ನು ನುಡಿಸಿ ಪ್ರೇಕ್ಷಕರನ್ನು ರಂಜಿಸಿದರು,
ಬೆಳಗಾವಿಯ ಸ್ಕೂಲ್ ಆಫ್ ಮ್ಯೂಸಿಕ್ ಕೆ.ಎಲ್.ಸಿ ಯುನಿವರ್ಸಿಟಿಯ ಪ್ರಾಚಾರ್ಯೆ ಡಾ. ಸ್ನೇಹಾ ರಾಜೂರಿಕರ ಹಿಂದೂಸ್ಥಾನಿ ಗಾಯನದಿಂದ ಅಭಿಮಾನಿಗಳ ಮನಗೆದ್ದರು ಇವರಿಗೆ ಮುಂಬಯಿನ ವಿನಾಯಕ ನಾಯ್ಕ ಹಾಗೂ ಗೋಕಾಕನ ವಿಜಯ ದೊಡ್ಡಣ್ಣವರ ತಬಲಾ ಮತ್ತು ಬೆಳಗಾವಿಯ ಯೋಗೇಶ ರಾಮದಾಸ ಹಾರ್ಮೊನಿಯಂ ಸಾಥ ನೀಡಿದರು.
ಮಾದುರಿ ಕುಲಕರ್ಣಿ ಸ್ವಾಗತಿಸಿದರು ಕಮಲಾ ಕುಲಕರ್ಣಿ ಹಾಗೂ ರಾಜಶ್ರೀ ಹಿರೇಮಠ ನಿರೂಪಿಸಿದರು ವೇದಾ ಸಂಗಮ ವಂದಿಸಿದರು.

loading...

LEAVE A REPLY

Please enter your comment!
Please enter your name here