ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಕೊಲೆ

0
23
loading...

ಬೆಂಗಳೂರು: ಸೆ:11; ಮುಂಜಾನೆ ಐದಾರು ಮಂದಿ ಇದ್ದ ದುಷ್ಕರ್ಮಿಗಳ ಗುಂಪೆÇಂದು ಮನೆಯ ಬಾಗಿಲು ಮುರಿದು ಒಳನುಗ್ಗಿ ರೌಡಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜೆ.ಪಿ.ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನಕಪುರ ಮುಖ್ಯರಸ್ತೆ ವೀವರ್ಸ್ ಕಾಲೋನಿಯಲ್ಲಿ ವಾಸವಾಗಿದ್ದ ಶ್ರೀನಿವಾಸ ಅಲಿಯಾಸ್ ಕುಟ್ಟಿ ಅಲಿಯಾಸ್ ಸ್ಟ್ಯಾಂಡ್ ಕುಟ್ಟಿ(35) ಭೀಕರವಾಗಿ ಕೊಲೆಯಾದ ರೌಡಿ. ಬನಶಂಕರಿ ಪೆÇಲೀಸ್ ಠಾಣೆಯ ರೌಡಿಪಟ್ಟಿಯಲ್ಲಿ ಈತನ ಹೆಸರಿದೆ.
ಕುಟ್ಟಿ ಇತ್ತೀಚೆಗೆ ಬಿಬಿಎಂಪಿ ಸದಸ್ಯರೊಬ್ಬರ ಕಾರು ಚಾಲಕನಾಗಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ.
ನಡೆದಿದ್ದೇನು:
ರಿಯಲ್‍ಎಸ್ಟೇಟ್ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿದ್ದ ಶ್ರೀನಿವಾಸ ಜೆ.ಪಿ.ನಗರದ 1ನೇ ಹಂತದ ವೀವರ್ಸ್ ಕಾಲೋನಿಯ ಉಮಾಮಹೇಶ್ವರಿ ದೇವಸ್ಥಾನ ಬಳಿ ಮನೆಯೊಂದರಲ್ಲಿ ವಾಸವಾಗಿದ್ದ.
ನಿನ್ನೆ ರಾತ್ರಿ 10ಗಂಟೆಗೆ ಮನೆಗೆ ಬಂದು ಮಲಗಿದ್ದಾನೆ. ಸರಿ ಸುಮಾರು ಮುಂಜಾನೆ 2.45ರಲ್ಲಿ ಯಾರೋ ಮನೆ ಬಾಗಿಲು ಮುರಿಯುತ್ತಿರುವ ಶಬ್ಧ ಕೇಳಿ ಬಂದಿದೆ. ಆಗ ಲೈಟ್ ಹಾಕುತ್ತಿದ್ದಂತೆ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳ ಕೈಯಲ್ಲಿದ್ದ ಮಚ್ಚು, ಲಾಂಗುಗಳನ್ನು ನೋಡಿ ಮನೆಯವರು ಬೆಚ್ಚಿಬಿದ್ದಿದ್ದಾರೆ.
ಹಿಂದೆ-ಮುಂದೆ ನೋಡದೆ ಮನೆಯದಲ್ಲಿದ್ದವರನ್ನು ತಳ್ಳಿದ ದುಷ್ಕರ್ಮಿಗಳು ಕುಟ್ಟಿ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಆತನ ಪತ್ನಿ ಬಿಡಿಸಲು ಹೋದಾಗ ಅವರನ್ನು ದೂರ ತಳ್ಳಿದ್ದಾರೆ. ತೀವ್ರ ದಾಳಿಗೆ ಒಳಗಾದ ಕುಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕುಟ್ಟಿಯ ಮನೆಯಲ್ಲಿ ನಡೆಯುತ್ತಿದ್ದ ಗಲಾಟೆ ಕೇಳಿ ಅಕ್ಕಪಕ್ಕದವರು ಹೊರಗೆ ಬರುವಷ್ಟರಲ್ಲಿ ದುಷ್ಕರ್ಮಿಗಳು ವಾಹನವೊಂದರಲ್ಲಿ ಪರಾರಿಯಾಗಿದ್ದಾರೆ.
ಮನೆಯಲೆಲ್ಲಾ ರಕ್ತ ಚೆಲ್ಲಿದ್ದು, ಸ್ಥಳೀಯರು ಇದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೆಂದು ಪೆÇಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಡಿಸಿಪಿ ಶರಣಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಜೆ.ಪಿ.ನಗರ ಪೆÇಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೆಂಪೇಗೌಡ ಆಸ್ಪತ್ರೆಯಲ್ಲಿ ಶವ ಇಡಲಾಗಿದೆ.

loading...

LEAVE A REPLY

Please enter your comment!
Please enter your name here