ಯುವ ಜನಾಂಗ ಭವ್ಯ ಭಾರತದ ಕುಸುಮಗಳು : ಶಿವಾನಂದ ಪಾಟೀಲ

0
34
loading...

ಪಾಲಭಾವಿ: ನಮ್ಮ ಭಾರತವು ಇಂದು ವಿಶ್ವ ಪಟ್ಟಕ್ಕೆ ಏರುತ್ತಿದೆ, ಭಾರತೀಯ ಸಂಸ್ಕøತಿಗೆ ವಿದೇಶಿಯರು ಮಾರುಹೊಗಿದ್ದಾರೆ, ಕಾರಣ ನಮ್ಮ ಆಚಾರ ವಿಚಾರದಿಂದ ಇಂದು ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವದು ವಿಶಾಧನೀಯ, ಯುವ ಪಿಳಿಗೆ ಭವ್ಯ ಭಾರತದ ಕುಸುಮಗಳು, ನಮ್ಮ ಭಾರತ ಹಳ್ಳಿಗಳಿಂದ ಕೂಡಿದ ಸಮೃದ್ಧ ದೇಶ, ಗುರು-ಹಿರಿಯರು, ತಂದೆ-ತಾಯಿ ಹೃದಯ ತುಂಬುವ ನುಡಿಗಳು ಪಟ್ಟಣದಲ್ಲಿ ಇಲ್ಲ, ಹಳ್ಳಿಗಳಲ್ಲಿ ಮಾತ್ರ ಉಳಿದಿದೆ ಎಂದು ಜಿ.ಪಂ.ಸದಸ್ಯ ಶಿವಾನಂದ ಪಾಟೀಲ ಹೇಳಿದರು.
ಸಮೀಪದ ಹಂದಿಗುಂದ ಗ್ರಾಮದ ವಕ್ರತುಂಡ ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ಇವರ ಆಶ್ರಯದಲ್ಲಿ “ವಕ್ರತುಂಡ ನೃತ್ಸೋತ್ಸವ-2016” ಹಾಗೂ ಸಂಸ್ಥೆಯ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಯಬಾಗ ಪಿಎಲ್‍ಡಿ ಬ್ಯಾಂಕ್ ಅದ್ಯಕ್ಷ ಪ್ರತಾಪ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರು ಸಮಾಜ ಮುಖಿಯಾಗಿ ಉತ್ತಮ ಕಾರ್ಯದಲ್ಲಿ ತೋಡಗಬೇಕು, ಯುವ ಶಕ್ತಿ ಒಗ್ಗಟ್ಟನಿಂದ ಕೆಲಸ ಮಾಡಿದರೆ ಯಾವುದು ಕಷ್ಠವಲ್ಲ ಎಂದು ಹೇಳಿದರು.
ಗುರಲಿಂಯ್ಯ ಹಿರೇಮಠ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಸಂಶಿ, ಸಾತಗೌಡ ಪಾಟೀಲ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಶಿವಪ್ಪ ಮಿರ್ಜಿ, ಗ್ರಾ.ಪಂ.ಸದಸ್ಯ ಕಲ್ಲಪ್ಪ ಜೇಲದ, ಶ್ರೀಶೈಲ ಗೋಲಭಾವಿ, ವಕ್ರತುಂಡ ಬ್ಯಾಂಕ ಅಧ್ಯಕ್ಷ ಘೂಳಪ್ಪ ಖಾನಗೌಡ, ಪಿಡಿಒ ಶ್ರೀಕಾಂತ ಯಡ್ರಾವಿ, ಲಕ್ಕಪ್ಪ ಪಾಟೀಲ, ಚಂದ್ರಶೇಖರ ಖಾನಗೌಡ ಅಶೋಕ ಪಾಟೀಲ, ಕುಮಾರ ಜೇಲದ, ಗಜಾನಂದ ಬದ್ರಶೆಟ್ಟಿ, ಶ್ರೀಶೈಲ ಪಾಟೀಲ, ಶಂಕರ ಬೆಳಗಲಿ, ರಮೇಶ ಪಾಟೀಲ, ಶ್ರೀಶೈಲ ಪೂಜೇರಿ, ಮಹಾಲಿಂಗ ಘಂಟಿ, ಶ್ರೀಶೈಲ ಅಂದಾನಿ, ಬಸವವರಾಜ ಗೊಲಭಾವಿ, ಸತೀಶ ಬಂದಿ, ಸುರೇಶ ಬಿ.ಪಾಟೀಲ, ಮಹೇಶ ಕವಟಗೊಪ್ಪ, ಬಾಬುರಾವ ಮುಕಾಸಿ, ವಿಕ್ಕಲ ಕುರಿಬಾಗಿ, ಬಸವಲಿಂಗ ಸವಸುದ್ದಿ, ಅಜ್ಜು ಒಚಿಟಿ ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here