ಯೋಗೇಶ್ವರ್‍ಗೆ ಚಿನ್ನದ ಯೋಗಾ ಯೋಗ 

0
24
loading...

ಹೊಸದಿಲ್ಲಿ,ಸೆ.3: 2012ರ ಲಂಡನ್ ಒಲಿಂಪಿಕ್ಸ್‍ನಲ್ಲಿ ಕಂಚು ಗೆದ್ದಿದ್ದ ಭಾರತದ ಅಗ್ರ ಕುಸ್ತಿಪಟು ಯೋಗೇಶ್ವರ್ ದತ್‍ಗೆ ಚಿನ್ನದ ಯೋಗಾ ಯೋಗ ಕೂಡಿ ಬಂದಿದೆ.
ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದ 60 ಕೆ.ಜಿ. ಕುಸ್ತಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದ ರಷ್ಯಾದ ಕುದುಕೋವ್ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರಿಂದ ಯೋಗೇಶ್ವರ್ ಒಂದು ಸ್ಥಾನ ಬಡ್ತಿ ಪಡೆದು ಬೆಳ್ಳಿ ಪದಕ ಪಡೆದಿದ್ದರು. ಇದೀಗ ಆ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಅಜಾರ್ ಬೈಜಾನ್‍ನ ತೋಘ್ರಲ್ ಅಸ್ಗರೋವ್ ಕೂಡ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಎರಡನೇ ಕುಸ್ತಿಪಟುವಾಗಿದ್ದಾರೆ. ಈ ಕಾರಣಕ್ಕಾಗಿ ಯೋಗೇಶ್ವರ್ ದತ್ ಚಿನ್ನ ತಮ್ಮದಾಗಿಸಿಕೊಳ್ಳುವ ಸನಿಹದಲ್ಲಿದ್ದಾರೆ.
ತೋಘ್ರಲ್ ಅಸ್ಗರೋವ್ 2012ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದ 60 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದು ಮಿಂಚಿದ್ದರು. ಇದೀಗ ವಿಶ್ವ ಕುಸ್ತಿ ಒಕ್ಕೂಟಗಳ ಪ್ರಕಾರ ತೋಘ್ರಲ್ ಉದ್ದೀಪನಾ ಮದ್ದು ಸೇವಿಸುರುವುದು ಖಚಿತವಾಗಿದೆ.

loading...

LEAVE A REPLY

Please enter your comment!
Please enter your name here