ರ್ಯಾಗಿಂಗ್ ಕಿರುಕುಳ: ಯುವತಿ ಆತ್ಮಹತ್ಯೆ

0
26
loading...

ಬೀದರ್: ಸೆ:17; ಬಿ.ಇ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೀದರನ ಗುರುನಾನಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪ್ರಥಮ ಓದುತ್ತಿದ್ದ ಐಶ್ವರ್ಯ (25) ಸಂಜೆ ಹಾಸ್ಟೆಲ್ ನ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ರ್ಯಾಗಿಂಗ್ ಹಿನ್ನೆಲೆ ಮತ್ತು ವಸತಿ ನಿಲಯದ ವಾರ್ಡನ್ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಹಾಸ್ಟೆಲ್ ಪ್ರವೇಶ ಪಡೆದಾಗಿನಿಂದ ಹಿರಿಯ ವಿದ್ಯಾರ್ಥಿಗಳಿಂದ ರ್ಯಾಗಿಂಗ್ ಮಾಡುತ್ತಿದ್ದನ್ನ ತಂದೆಗೆ ಹೇಳಿಕೊಂಡಿದ್ದಳು ಎನ್ನಲಾಗಿದೆ.
ಬಿಜಾಪುರ ಮೂಲದ ಯುವತಿಯಾಗಿದ್ದು ಆದ್ರೇ ತಂದೆ ತಾಯಿ ಬರುವ ಮುನ್ನವೇ ಕಾಲೇಜು ಆಡಳಿತ ಮಂಡಳಿ ಹಾಗೂ ವಸತಿ ನಿಲಯದ ಸಿಬ್ಬಂದಿಗಳು ತರಾತುರಿಯಲ್ಲಿ ಮೃತದೇಹ ಕೆಳಗಿಳಿಸಿ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಿ ಕೇಸ್ ಮುಚ್ಚಿ ಹಾಕಲು ಯತ್ನ ಮಾಡಿದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ನ್ಯೂಟೌನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಸಂಜೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಯುವತಿ ಮೈಮೆಲಿದ್ದ ಒಡವೆಗಳು ಕೂಡ ಕಾಣೆಯಾಗಿವೆ.

loading...

LEAVE A REPLY

Please enter your comment!
Please enter your name here