ವಿ.ಆರ್.ಡಿ.ಎಂ ಟ್ರಸ್ಟ್‍ನಿಂದ ಲಯನ್ಸ್ ಶಾಲೆಗೆ 15 ಡೆಸ್ಕ್‍ಗಳ ದೇಣಿಗೆ

0
16
loading...

ದಾಂಡೇಲಿ : ದಾಂಡೇಲಿಯ ಅಂತರಾಷ್ಟ್ರೀಯ ಲಯನ್ಸ್ ಶಾಲೆಗೆ ಹಳಿಯಾಳದ ವಿಶ್ವನಾಥ ರಾವ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ 15 ನೂತನ ಡೆಸ್ಕ್‍ಗಳನ್ನು ದೇಣಿಗೆಯಾಗಿ ನೀಡಲಾಗಿದೆ. ಶಾಲೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಲಯನ್ಸ್ ಶಾಲೆಯ ಅಧ್ಯಕ್ಷ ಡಾ. ಎನ್.ಜಿ ಬ್ಯಾಕೊಡ್ ಮಾತನಾಡಿ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಸಹಕರಿಸಿದ ಸಚಿವ ಆರ್.ವ್ಹಿ. ದೇಶಪಾಂಡೆಯವರಿಗೆ ವಿ.ಆರ್.ಡಿ.ಎಂ ಟ್ರಸ್ಟ್‍ನ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಒಂದು ಶಾಲೆಯ ಕೀರ್ತಿ ಶಾಲೆಯ ಶಿಕ್ಷಕರ ಪರಣಿತ ಭೋಧನೆಯನ್ನು ಅವಲಂಬಿಸಿರುತ್ತದೆ ಶಿಕ್ಷಕರ ಜೊತೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರವೂ ಅತಿ ಮುಖ್ಯವಾಗಿರುತ್ತದೆ ಎಂದು ಅವರು ನುಡಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಯು.ಎಸ್. ಪಾಟೀಲ, ಉಪಾಧ್ಯಕ್ಷ ಅನಿಲ ದಂಡಗಲ್ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here