ವೃದ್ಧನನ್ನು ಆಸ್ಪತ್ರೆ ಸೇರಿಸಿ ಮಾನವಿಯತೆ ಮೆರೆದ ಸಮಾಜ ಸೇವಕ ಮಾಧವ

0
41
loading...

ಕಾರವಾರ : ಕುಟುಂಬದವರಿಂದ ತುಳಿತಕ್ಕೊಳಗಾದ ಇಳಿ ವಯಸ್ಸಿನ ವೃದ್ಧ ಕಾರವಾರ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಅನಾರೋಗ್ಯದಿಂದ ಬಳಲಿತ್ತಿದ್ದು ಇತನ ಸ್ಥಿತಿ ನೋಡಿ ಸಮಾಜ ಸೇವಕ ಮಾಧವ ನಾಯಕ್ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರದರು.
ನಗರದ ಗಿಂಡಿವಾಡ ನಿವಾಸಿ ಶ್ರೀಕಾಂತ ದತ್ತಾ ನಾಯ್ಕ ಎಮಬುವನು ಕುಟುಂಬದವರಿಂದ ತುಳಿತಕ್ಕೊಳಗಾಗಿ ಅನಾಥ ಸ್ಥಿಯಲ್ಲಿದ್ದ ಈತ ತನ್ನ ಸುಮಾರು ಒಂದು ವರ್ಷದ ಹಿಂದೆ ಮನೆಯಿಂದ ಹೊರ ಹಾಕಿದ್ದರು. ಎನ್ನಲಾಗಿದೆ ಅಂದಿನಿಂದ ಈತ ಆಯಾ ತಾಲೂಕಿನ ಬಸ್ ನಿಲ್ದಾಣದಲ್ಲಿ ಇದ್ದೆ ದಿನ ಕಳೆಯುತ್ತಿದ್ದನಂತೆ ಕಳೆದ 10 ದಿನಗಳಿಂದ ನಗರದ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಕಾಣೀಸುತ್ತಿದ್ದ ಈತನನ್ನು ಇಲ್ಲಿನ ಸಾರಿಗೆ ಸಿಬ್ಬಂದಿಯವರು ವಿಚಾರಿಸಿದ್ದಾರೆ. ಬಳಿಕ ಈತ ಕಾರವಾರದವನ್ನು ಎಂದು ತಿಳಿದು ಸಮಾಜ ಸೇವಕ ಮಾಧವ ನಾಯಕ್‍ವರಿಗೆ ಪೋನ ಮಾಡಿ ವಿಷಯ ತಿಳಿಸಿದ್ದಾರೆ.
ಕೊಡಲೇ ಬಸ್ ನಿಲ್ದಾಣಕ್ಕೆ ದೌಡಾಯಿಸಿ ಬಂದ ನಾಯಕ್ ಈತನ ಕುಟುಂಬದ ಇನ್ನಷ್ಟು ಇತಿಹಾಸವನ್ನು ತಿಳಿದು ಕೊಡಲೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡೊಸಿದ್ದಾರೆ. ದುಡಿಯುತ್ತಿದ್ದ ಸಂದರ್ಭ ಹಾಗೂ ಕೈ ತುಂಬ ಸಂಬಳ ಬರುತ್ತಿದ್ದ ಸಂದರ್ಭದಲ್ಲಿ ಶ್ರೀಕಾಂತನನ್ನು ಮನೆಯಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತದ್ರಂತೆ ಆದರೆ ದುಡಿಯುಲು ನಿಶಕ್ತನಾದಾಗ ಶ್ರೀಕಾಂತನನ್ನು ಮನೆಯಿಂದ ಹೊರಹಾಕಿದ್ದಾರಂತೆ. ಹೀಗೆ ಶ್ರೀಕಾಂತನೇ ಸಾರ್ಮಜಿನಿಕರ ಮುಂದೆ ಅಳಲನ್ನು ತೋಡಿಕೊಂಡಿದ್ದಾನೆ. ಇವಾಗ ಮಾಧವ ನಾಯಕ್ ರ ಮಾನವೀಯತೆಯ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಇ ನಾಗರಿಕರ ಸಹಾಯವಾಣಿಗೆ ನಾಯಕ್ ಅವರು ದೂರು ನೀಡಿದ್ದಾರೆ

loading...

LEAVE A REPLY

Please enter your comment!
Please enter your name here