ಶಾಸಕ ಸೇಠ್ ಭೂಮಿ ಕಬಳಿಸುವ ಹುನ್ನಾರ : ಮುನವಳ್ಳಿ ಆರೋಪ

0
20
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:27 ಸ್ಮಾಟ್‍ಸಿಟಿ ಯೋಜನೆ ಅನುಷ್ಠಾನದಲ್ಲಿ ಸ್ಥಳೀಯ ಶಾಸಕ ಫಿರೋಜ್ ಸೇಠ್ ಭೂಕಬಳಿಕೆ ಮಾಡುವ ಹುನ್ನಾರ ನಡೆಸಿದ್ದು, ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದರು.
ಅವರು ಮಂಗಳವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ನಗರದ ಕೋರ್ಟ್ ಬಳಿಯ 26.32 ಎಕರೆ ಡಮ್ಮಣಗಿ ಡೆವಲಪರ್ಸ್ ಒಡೆತನಕ್ಕೆ ಸೇರಿದ ಜಾಗದಲ್ಲಿ ಶೇ. 20 ರಷ್ಟು ಪಾಲುದಾರಿಕೆ ಹೊಂದಿದ್ದೇನೆ. ಈ ಜಾಗವನ್ನು ಕಬಳಿಸಲು ಶಾಸಕ ಫಿರೋಜ್ ಸೇಠ್ ಹಾಗೂ ಇಬ್ಬರು ಪ್ರಭಾವಿಗಳು ಸಂಚು ನಡೆಸಿದ್ದಾರೆ. ಸ್ವತಃ ಅವರೇ ಈ ಜಾಗವನ್ನು ಹೊಂದುವ ಹುನ್ನಾರ ನಡೆಸಿದ್ದು, ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಾಜಿ ಸಚಿವರೊಬ್ಬರು ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದರು.
ನ್ಯಾಯಾಲಯವೇ ಈ ಜಾಗ ನಮಗೆ ಸೇರಿರುವುದಾಗಿ ತೀರ್ಪು ನೀಡಿದೆ. ಆದರೆ, ಶಾಸಕರು ಪ್ರಭಾವ ಬೀರಲು ಪ್ರಯತ್ನಿಸಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ, ಎಸಿ, ತಹಸೀಲ್ದಾರ ಮೊದಲಾದ ಅಧಿಕಾರಿಗಳು ಜನಪ್ರತಿನಿಧಿಗಳ ಗುಲಾಮರಾಗಿ ವರ್ತಿಸುತ್ತಿದ್ದು, ತಹಸೀಲ್ದಾರರು ಈ ಜಾಗ ಕೃಷಿಭೂಮಿ ಎಂಬ ದಾಖಲೆ ನೀಡಿದ್ದಾರೆ. ಕೆಲ ಅಧಿಕಾರಿಗಳು ನ್ಯಾಯಾಲಯದ ತೀರ್ಪು ಉಲ್ಲಂಘಿಸಿರುವುದರಿಂದ ಜೈಲು ಶಿಕ್ಷೆಯ ರುಚಿ ಅನುಭವಿಸಲಿದ್ದಾರೆ. ಈ ಬಗ್ಗೆ ನನಗೆ ಜೀವ ಬೆದರಿಕೆ ಇದೆ. ಆದರೂ ಹೆದರುವುದಿಲ್ಲ ಎಂದು ತಿಳಿಸಿದರು.ಈ ಜಾಗದಲ್ಲಿ ವಾಣಿಜ್ಯ ಉಪಯೋಗದ ಕೆಲಸಗಳು ನಡೆಯಲಿವೆ. ಕನಿಷ್ಠ ಐದು ಶಾಪಿಂಗ್ ಮಾಲ್, 10 ಅಪಾರ್ಟ್‍ಮೆಂಟ್, ಪಂಚತಾರಾ ಹೊಟೇಲ್, ಮಂದಿರಗಳನ್ನು ನಿರ್ಮಿಸಲಾಗುತ್ತಿದೆ. ಸ್ಮಾರ್ಟ್‍ಸಿಟಿಯಡಿ ನಾವು ಮಾಡುತ್ತಿರುವ ಯೋಜನೆ ನಾಗರಿಕರ ಸೇವೆ ಹಾಗೂ ಉದ್ಯೋಗಕ್ಕೆ ಸಹಕಾರಿಯಾಗಲಿದೆ ಎಂದರು.ಬಾಬುಲಾಲ್ ಬಾಗವಾನ್ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿದ್ದರು.
*******
ಡಿಸೆಂಬರ್ ಮೊದಲ ವಾರದಲ್ಲಿ ನಗರದಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತಿಳಿಸಿದರು.
ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರನ್ನು ಉದ್ಘಾಟನೆಗೆ ಅಹ್ವಾನಿಸಲಾಗುವುದು. ಈ ಸಮಾವವೇಶದ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಕುಂದು-ಕೊರತೆಗಳನ್ನು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

loading...

LEAVE A REPLY

Please enter your comment!
Please enter your name here