ಶಿಕ್ಷಣ ಜಗತ್ತು ಬೆಳಗುವ ಜ್ಞಾನಜ್ಯೋತಿ

0
22
loading...

ಹಾರೂಗೇರಿ: ಸ್ಫರ್ಧಾತ್ಮಕ ಇಂದಿನ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣ ಕಲಿಯುವುದು ಅತ್ಯಗತ್ಯವಾಗಿದೆ, ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ಸಂಜೀವಿನಿ, ಶಿಕ್ಷಣ ಎಂಬುದು ಜಗತ್ತನ್ನು ಬೆಳಗುವ ಜ್ಞಾನಜ್ಯೋತಿ ಇದ್ದಂತೆ, ಎಂದು ಕಾಂಗ್ರೇಸ ಮುಖಂಡ ರಾಜು ಕುರಿ ಹೇಳಿದರು.
ಪಟ್ಟಣದ ಸರಕಾರಿ ಪ್ರಾಥಮಿಕ ಕನ್ನಡಗಂಡು ಹಾಗೂ ಹೆಣ್ಣುಮಕ್ಕಳ ಶಾಲೆ ಮತ್ತು ಸರಕಾರಿ ಫ್ರೌಡಶಾಲೆಯಲ್ಲಿ ಕಾಂಗ್ರೇಸ ಕಾರ್ಯಕರ್ತರು ಹಮ್ಮಿಕೊಂಡಿದ್ದ ಮಾಜಿ ಶಾಸಕ ಎಸ್.ಬಿ ಘಾಟಗೆ ಅವರ 53ನೇ ಜನ್ಮ ದಿನಾಚರಣೆ ನಿಮಿತ್ಯ ವಿದ್ಯಾರ್ಥಿಗಳಿಗೆ ಪೆನ್ನು ಹಾಗೂ ನೋಟಬುಕ್ ಮತ್ತು ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಸಿರೇ ವಿತರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಗುಣಮಟ್ಟದ ಶಿಕ್ಷಣ ಪಡೆಯಲು ಆಡಳಿತಾರೂಡ ಕಾಂಗ್ರೇಸ್ ಸರಕಾರ ಬಿಸಿಯೂಟ, ಸಮವಸ್ತ್ರ ಹಾಗೂ ಶೂ ವಿತರಣೆ ಮತ್ತು ಉಚಿತವಾಗಿ ಸೈಕಲ್ ವಿತರಿಸುವ ಮೂಲಕ ಅನೇಕ ಸೌಲಭ್ಯಗಳನ್ನು ಕಲ್ಫಿಸಿದೆ, ಅದರ ಜೊತೆ ಸಾರ್ವಜನಿಕರು ಕೂಡಾ ಸರಕಾರಿ ಶಾಲೆಯಲ್ಲಿ ಓದುವ ಬಡಮಕ್ಕಳಿಗೆ ತಮ್ಮಿಂದಾಗುವ ಸಹಾಯ ಸಹಕಾರ ನೀಡಬೇಕು, ಆಗ ಮಾತ್ರ ಬಡ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಧ್ಯವೆಂದು ರಾಜು ಕುರಿ ಕರೆ ನೀಡಿದರು.
ಸರಕಾರಿ ಫ್ರೌಡಶಾಲೆಯ ಸಹಶಿಕ್ಷಕ ಜಗದೀಶ ಕುಲಕರ್ಣಿ ಮಾತನಾಡಿ ರಾಜ್ಯ ಸರಕಾರ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ, ಸರಕಾರಿ ಶಾಲೆಯಲ್ಲಿ ಹೆಚ್ಚಾಗಿ ಬಡ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಾರೆ, ಪ್ರತಿಯೊಬ್ಬರು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಬೇಕಾಗುವ ಸಾಮಗ್ರಿಗಳನ್ನು ನೀಡುವ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಫ್ರೌಡಶಾಲೆಯ ಮುಖ್ಯೋಪಾಧ್ಯಾಯಕಿ ಶ್ರೀಮತಿ ಎಸ್.ಬಿ ಮಲ್ಹಾರಿ, ಸಹಶಿಕ್ಷಕರಾದ ಎ.ಬಿ ಅರಕೇರಿ, ಬಿ.ಎ ಮಾಂಜರೆ, ಜೆ.ಎಂ ಮೂಡಶಿ, ಎಸ್,ಎಂ ಹಿಪ್ಪರಗಿ, ಕಾಮು ಶಿಂಗೆ, ಎಂ.ಎಸ್ ಶಿಂಗೆ, ಸರದಾರ ಜಮಾದರ, ಕಾಂಗ್ರೇಸ ಮುಖಂಡರಾದ ನೇಮಿನಾಥ ನಾಗನೂರ, ಹಣಮಂತ ಮನಸೂರೆ, ಶ್ರೀಕಾಂತ ಬಡಿಗೇರ, ಬಾಬು ನಡೋಣಿ, ಅನೀಲ ಕುಳ್ಳೊಳ್ಳಿ, ಮಹೇಶ ಕಾಂಬಳೆ, ಸಂಜು ಮಾಳಗಿ, ಸುಧೀರ ಕಾಂಬಳೆ ಹಾಗೂ ಬಿಸಿಯೂಟ ತಯಾರಕರಾದ ಶ್ರೀದೇವಿ ಹರೋಲಿ, ಮಾಲಾ ಸರಿಕರ, ಭಾರತಿ ಜೋಗನ್ನವರ ಸೇರಿದಂತೆ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಶಿಕ್ಷಕರಾದ ಜಗದೀಶ ಕುಲಕರ್ಣಿ ಸ್ವಾಗತಿಸಿದರು, ಎ.ಬಿ ಅರಕೇರಿ ನಿರೂಪಿಸಿದರು, ಸರದಾರ ಜಮಾದರ ವಂದಿಸಿದರು.

loading...

LEAVE A REPLY

Please enter your comment!
Please enter your name here