ಸಾಲಬಾಧೆಗೆ ಮಹಿಳೆ ಸಾವು

0
16
loading...

ಹುಣಸೂರು: ಸೆ:11; ಸಾಲ ಬಾಧೆಗೆ ಸಿಲುಕಿದ ಮಹಿಳೆಯೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಸುಬ್ರಮಣ್ಯರ ಪತ್ನಿ ಪಲ್ಲವಿ(27)ಆತ್ಮಹತ್ಯೆ ಮಾಡಿಕೊಂಡವರು.
ಮನೆ ನಿರ್ಮಿಸುತ್ತಿದ್ದ ಇವರು ಗ್ರಾಮದ ಹಲವಾರು ಸ್ವಸಹಾಯ ಸಂಘಗಳಲ್ಲಿ ಸುಮಾರು 3 ಲಕ್ಷರೂ ಸಾಲ ಮಾಡಿಕೊಂಡಿದ್ದರು. ಮನೆ ಕಾಮಗಾರಿ ಸಹ ಅರ್ಧಂಬರ್ಧವಾಗಿದ್ದು, ಸಾಲ ಮರುಪಾವತಿಸಲು ತೊಂದರೆಯಾಗಿತ್ತು. ಇದರಿಂದ ಆಕೆಗೆ ಇತರೆ ಸದಸ್ಯರು ನೋವಾಗುವಂತೆ ಮಾತನಾಡಿದ್ದರಿಂದ ಬೇಸತ್ತು, ಶುಕ್ರವಾರ ತಮ್ಮ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶುಕ್ರವಾರ ವಿಷ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡ ಈಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ 108 ಆಂಬುಲೆನ್ಸ್‍ನಲ್ಲಿ ಕರೆದೊಯ್ಯುವಾಗ ಬಂದ್ ಹಿನ್ನೆಲ್ಲೆಯಲ್ಲಿ ತಡೆಯೊಡ್ಡಿದ್ದರು, ತಡವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟರು.
ಈ ಸಂಬಂಧ ಮೃತಳ ತಾಯಿ ಹೊನ್ನೇನಹಳ್ಳಿಯ ಮಣಿಯಮ್ಮ ಗ್ರಾಮಾಂತರ ಪೆÇಲೀಸರಿಗೆ ದೂರು ನೀಡಿದ್ದಾರೆ.

loading...

LEAVE A REPLY

Please enter your comment!
Please enter your name here