ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

0
38
loading...

ದಾಂಡೇಲಿ : ನಗರದ ಸೋರಗಾಂವಿ ಇಂಟರ್ ನ್ಯಾಷನಲ್ ಸಿಬಿಎಸ್‍ಸಿ ಶಾಲೆಯಲ್ಲಿ ನೂತನವಾಗಿ ಆಳವಡಿಸಲಾದ ಡಿಜಿಟಲ್ ಸ್ಮಾರ್ಟ್ ಕ್ಲಾಸಿಗೆ ಶನಿವಾರ ಚಾಲನೆ ನೀಡಲಾಯಿತು.

ನೂತನ ಸ್ಮಾರ್ಟ್ ಕ್ಲಾಸಿಗೆ ಚಾಲನೆ ನೀಡಿ ಮಾತನಾಡಿದ ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆಯವರು ಆಧುನೀಕ ತಂತ್ರಜ್ಞಾನದ ಬಳಕೆ ಇಂದು ಮಕ್ಕಳಿಗೆ ಅತ್ಯವಶ್ಯವಾಗಿದೆ. ನಗರದಲ್ಲಿ ಅತ್ಯುತ್ತಮ ಶೈಕ್ಷಣಿಕ ಸೇವೆ ನೀಡುವುದರ ಮೂಲಕ ಅಲ್ಪ ಅವಧಿಯಲ್ಲೆ ಸೋರಗಾಂವಿ ಶಾಲೆ ಜನಪ್ರೀಯತೆಯನ್ನು ಗಳಿಸಿದೆ ಎಂದು ನೂತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಸಂಸ್ಥೆಯ ಅಧ್ಯಕ್ಷ ಟಿ.ಎಸ್.ಸೋರಗಾಂವಿಯವರು ಶಿಕ್ಷಣ ಸಂಸ್ಥೆ ಬೆಳೆದು ಬಂದ ಹಾದಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿ, ಶಾಲೆಯ ಪ್ರಗತಿಗೆ ನಗರದ ನಾಗರೀಕರು, ಜನಪ್ರತಿನಿಧಿಗಳು ಮತ್ತು ಪಾಲಕರು ತುಂಬುಹೃದಯದ ಸಹಕಾರ ನೀಡುತ್ತಿರುವುದನ್ನು ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ ನಗರ ಸಭೆಯ ಉಪಾಧ್ಯಕ್ಷ ಅಷ್ಪಾಕ ಶೇಖ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಡಿವೆಪ್ಪ ಭದ್ರಕಾಳಿ, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಮಾರುತಿ ನಾಯ್ಕ, ಎಂ.ಆರ್.ನಾಯ್ಕ, ಮಾಜಿ ನಗರ ಸಭೆಯ ಸದಸ್ಯ ಫಿರೋಜ್ ಖಾನ್ ಬಾಳೆಖಾನ್, ಉದ್ಯಮಿ ಎಸ್.ಪ್ರಕಾಶ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಜಹೇದಾ ಶೇಖ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಯಿನಿ ರಜನಾ ಡಿಸೋಜಾ ವಂದಿಸಿದರು.

loading...

LEAVE A REPLY

Please enter your comment!
Please enter your name here