60ನೇ ವರ್ಷದ ಜೀವ ವಿಮಾ ವಾರದ ಆಚರಣೆ

0
27
loading...

ಭಟ್ಕಳ : ಇಲ್ಲಿನ ಜೀವ ವಿಮಾ ಶಾಖೆಯ ವತಿಯಿಂದ 60ನೇ ವರ್ಷದ ಪ್ರಯುಕ್ತ ಜೀವ ವಿಮಾ ವಾರದ ಆಚರಣೆಯ ಅಂಗವಾಗಿ ಭಟ್ಕಳ ತಾಲೂಕಿನಲ್ಲಿ ಸೆಪ್ಟಂಬರ್ ಪ್ರಥಮ ವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಖಾಧಿಕಾರಿ ಸಚಿನ್ ಎಸ್. ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 2ರಂದು ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್‍ನಲ್ಲಿ ಟ್ರೋಫಿ ವಿತರಣೆ, ಮುಂಡಳ್ಳಿ ಹಾಗೂ ಚೌಥನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ವಿದ್ಯಾರ್ಥಿಗಳಿಗೆ ಕಂಪಾಸ್ ಪಟ್ಟಿಗೆ ವಿತರಣೆ, ಸೆ.3ರಂದು ಬಂದರ ರಸ್ತೆಯಲ್ಲಿರುವ ಸ್ನೇಹ ವಿಶೇಷ ಶಾಲೆಗೆ ಭೇಟಿ ಕೊಟ್ಟು ಕುಳಿತು ಕೊಳ್ಳಲು ಅನುಕೂಲವಾಗುವಂತೆ ಪ್ಲಾಸ್ಟಿಕ್ ಕುರ್ಚಿಗಳನ್ನು ನೀಡುವುದು. ವಿಮಾ ಪ್ರತಿನಿಧಿಗಳ ದಿನಾಚರಣೆ, ವಿವಿಧ ಸ್ಪರ್ಧೆ ಎರ್ಪಡಿಸಲಾಗಿದೆ. ಸೆ.4 ಮತ್ತು 5ರಂದು ಭಟ್ಕಳ ಮತ್ತು ಹತ್ತಿರದ ಪ್ರದೇಶದಲ್ಲಿ ವಿಮಾ ಪ್ರತಿನಿಧಿಗಳಿಂದ ಗ್ರಾಹಕರ ಸರ್ವೆ ಕಾರ್ಯ ನಡೆಯುವುದು. ಸೆ.6ರಂದು ಗ್ರಾಹಕರ ಸಮಾವೇಶ ನಡೆಯಲಿದ್ದು ಅಂಜುಮಾನ್ ಕಾಲೇಜಿನ ನಿವೃತ್ತ ಹಿಂದಿ ಪ್ರೊಫೆಸರ್ ನಜೀರ್ ಅಹಮ್ಮದ್ ಉಪಸ್ಥಿತರಿರುವರು ಎಂದೂ ಕುಲಕರ್ಣಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here