ಅಂಗನವಾಡಿ ಮಕ್ಕಳ ವ್ಯಾಸಂಗಕ್ಕೆ ಸುಸಜ್ಜಿತ ಕಟ್ಟಡವಿಲ್ಲ

0
15
loading...

ಗಜೇಂದ್ರಗಡ: ಅಂಗನವಾಡಿ ಮಕ್ಕಳ ವ್ಯಾಸಂಗಕ್ಕೆ ಸುಸಜ್ಜಿತ ಕಟ್ಟಡ ಒದಗಿಸುವ ದೃಷ್ಠಿಯಿಂದ ತಾಲೂಕಿನ ಗಡಿಭಾಗ, ಗುಡ್ಡದಮೇಲಿರುವ ಕುಗ್ರಾಮ ಬೈರಾಪೂರ ತಾಂಡಾದಲ್ಲಿ ಕಳೆದ ಎಳೆಂಟು ವರ್ಷಗಳ ಹಿಂದೆ ನೂತನ ಕಟ್ಟಡ ಪ್ರಾರಂಭಗೊಂಡಿದೆ. ಆದರೆ, ಕಾಮಗಾರಿ ಅರ್ಧಕ್ಕೆ ನಿಂತು ಕಟ್ಟಡ ಅಪೂರ್ಣಗೊಂಡಿದ್ದು, ಇದುವರೆಗೂ ಪೂರ್ಣಗೊಳಿಸಿ ಲೋಕಾರ್ಪಣೆ ಭಾಗ್ಯ ದೊರೆತಿಲ್ಲ. ಇದರಿಂದಾಗಿ ನಿರ್ಮಿಸಿದ ಅರ್ಧ ಕಟ್ಟಡದಲ್ಲಿ ಜಾಲಿಕಂಟಿಗಳು ಬೆಳೆದು ನಿಂತು ಒಡೆದು ಹೊಗುತ್ತಿದೆ.
ಹೌದು, ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಛೇರಿ, ತಾಲೂಕ ಪಂಚಾಯತಿ ಕಛೇರಿ ಅವ್ಯವಸ್ಥೆಗೆ ನಿದರ್ಶನವಾಗಿದೆ. ದಶಕಗಳಿಂದಲೂ ಇಲ್ಲಿನ ಮಕ್ಕಳ ದುರ್ಗಾದೇವಿ ದೇವಸ್ಥಾನದ ಅಡುಗೆ ಕೋಣೆಯಲ್ಲಿಯೇ ವಿದ್ಯಾಭ್ಯಾಸ ನಡೆಯುತ್ತಿದೆ. ಅದೂ ಶಿಥಲಾವ್ಯವಸ್ಥೆಗೆ ಬಂದಿದೆ. ಮೆಲ್ಛಾವಣೆ ಕುಸಿಯುವ ಹಂತ ತಲುಪಿದ್ದು, ಏನಾದರೂ ಬಿದ್ದರೆ ದುರ್ಘಟನೆ ಗ್ಯಾರಂಟಿ. ಹೀಗಿದ್ದರೂ ಕಳೆದ ಹಲವು ವರ್ಷದಿಂದ ಸಾಗುತ್ತಿರುವ ಕಟ್ಟಡ ಕಾಮಗಾರಿ ಯಾವ ಪುರಷಾರ್ಥಕ್ಕೆ..? ಈಗ ಕಲಿಯುತ್ತಿರುವ ಮೆಲ್ಛಾವಣೆ ಕುಸಿದು ಮಕ್ಕಳ ದುರ್ಮಣಗೊಂಡರೆ ಮಾತ್ರ ಇವರು ಕಣ್ಣು ತೆರೆದು ನೋಡುವವರಾ..? ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶಿಶು ಅಭಿವೃದ್ದಿ ವತಿಯಂದ 2007-8 ರಲ್ಲಿ ತಾಲೂಕ ಪಂಚಾಯಿತಿಗೆ 5 ಲಕ್ಷ ಹಣ ಬಂದಿದ್ದು, ಆ ಹಣವನ್ನು ತಾ.ಪಂ. ನೂತನ ಕಟ್ಟಡ ನಿರ್ಮಾಣಕ್ಕೆ ಹಾಗೂ ಶಿಥಲಾವ್ಯವಸ್ಥೆಯಲ್ಲಿರುವ ಕಟ್ಟಡ ದುರಸ್ಥಿಗೆ ಹಣ ವಿನಿಯೋಗ ಮಾಡುತ್ತಿದ್ದರು. ಅದರಂತೆ 2007-08 ರಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 3 ಲಕ್ಷ ಹಣ ಬಿಡುಗಡೆಯಾಗಿದ್ದು, ಆದರೆ ಆ ಹಣದಿಂದ ಅರ್ಧ ಕೆಲಸಮಾಡಿ ಬಿಟ್ಟಿದ್ದಾರೆ. ಸಧ್ಯ ನಮ್ಮ ಇಲಾಖೆಯಿಂದ ಅಪೂರ್ಣ ಕಟ್ಟಡ ನಿರ್ಮಾಣಕ್ಕೆ ಹಣದ ಪ್ರಸ್ತಾವಣೆ ಕೋರಿದ್ದು 4 ಲಕ್ಷ ಹಣ ಹಾಕುವಂತೆ ಹೆಡ್ ಆಫಿಸ್‍ಗೆ ವರದಿ ಕಳುಹಿಸಿದೆ. ಬಂದ ತಕ್ಷಣ ಕೆಲಸ ಪ್ರಾರಂಭಗೊಳ್ಳುವುದು ಎನ್ನುತ್ತಾರೆ ರೋಣ ಸಿಡಿಪಿಓ.
2007-08 ರಲ್ಲಿ ಐವತ್ತು ಸಾವಿರ, 2008-09 ರಲ್ಲಿ ಐವತ್ತು ಸಾವಿರ, 2009-10 ರಲ್ಲಿ ಐವತ್ತು ಸಾವರಿ ಅಂಗನವಾಡಿಗೆ ತಾಲೂಕ ಪಂಚಾಯಿತಿಯಿಂದ ಹಣ ನೀಡಿದ್ದೇವೆ. ತದನಂತರದಲ್ಲಿ ಅಥವಾ ಅದಕ್ಕೂ ಮೊದಲು ಕಟ್ಟಡ ನಿರ್ಮಾಣಕ್ಕೆ ಹಣ ಮಂಜುರಾದ ಬಗ್ಗೆ ಮಾಹಿತಿ ಇಲ್ಲ. ನಾನು ಹೊಸದಾಗಿ ಬಂದವನು ಎನ್ನತ್ತಾರೆ ತಾ.ಪಂ ಇಓ ಎಸ್. ಚಳಗೇರಿ.
ಒಟ್ಟಾರೆ, ಅಪೂರ್ಣಗೊಂಡ ಕಟ್ಟಡ ಸುತ್ತ ಜಾಲಿ ಕಂಟಿಗಳು ಬೆಳೆದು ನಿಂತಿದ್ದು, ಕಟ್ಟಡ ಮುಂಬಾಗದಲ್ಲೇ ಸಾರ್ವಜನಿಕರು ಜಾನುವಾರು, ಮೂರ್ತ ವಿರ್ಸಜನೆ ಮಾಡುವದರಿಂದ ಕಟ್ಟಡ ದನದ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ. ಲಕ್ಷಾಂತರ ರೂ ವೆಚ್ಚ ಮಾಡಿರುವ ಈ ಕಟ್ಟಡಕ್ಕೆ ಗುತ್ತಿಗೆದಾರರು ಹಣ ಗುಳುಂ ಮಾಡಿದ್ದಾರೆ ಎಂಬ ಆರೋಪಗಳು ಇದೆ. ಮಕ್ಕಳ ಅಕ್ಷರ ಜ್ಞಾನ ಹೆಚ್ಚಿಸಲು ಪೂರಕ ವಾತಾವರಣ ಕಲ್ಪಿಸಬೇಕಾದ ಕಟ್ಟಡ ದನದ ಕೊಟ್ಟಿಗೆಯಾಗಿ ಮಾರ್ಪಟ್ಟಿದ್ದು ಕಟ್ಟಿರುವಂತ ಕಟ್ಟಡ ನೆಲಸಮವಾಗುವ ಮುನ್ನ ಪುನಃ ನಿರ್ಮಿಸಿ ಉದ್ಘಾಟಿಸಬೇಕು ಎಂದು ಆಗ್ರಹಿಸುತ್ತಾರೆ ಗ್ರಾಮಸ್ಥರಾದ ಉಮೇಶ ಮಾಳೋತ್ತರ, ಕುಮಾರ ರಾಠೋಡ, ಕಳಕಪ್ಪ ರಾಠೋಡ, ನಾಣಪ್ಪ ರಾಠೋಡ, ಠಕ್ರಪ್ಪ ರಾಠೋಡ, ಕುಮಾರ ಜಾಠೋತ್ತರ, ಶಿವಕುಮಾರ ಅಜ್ಮೀರ, ದೇವಕ್ಕ ರಾಠೋಡ, ಕಮಲವ್ವ ಮಾಳೊತ್ತರ ಇತರರು.

loading...

LEAVE A REPLY

Please enter your comment!
Please enter your name here