ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ

0
20
loading...

ಕನ್ನಡಮ್ಮ ಸುದ್ದಿ-ಕಾಗವಾಡ:
ಶಿರಗುಪ್ಪಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಗುರುವಾರ ಜರುಗಿತು. ಸಂಘದ ಕಾರ್ಯಾಲಯದಲ್ಲಿ ಜರುಗಿದ ಚುನಾವಣೆಯಲ್ಲಿ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ ಎ.ಆರ್‌.ಪಾಟೀಲ, ಉಪಾಧ್ಯಕ್ಷ ನೇಮಣ್ಣ ಭೋಲೆ, ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾ ಅಧಿಕಾರಿಯಾಗಿ ಬೆಳಗಾವಿ ಸಹಕಾರ ಸಂಘಗಳ ಉಪನಿಬಂಧಕರ ಕಾರ್ಯಾಲಯದ ಅಧಿಕಾರಿ ಮಂಜುನಾಥ ಪಾಟೀಲ ಆಗಮಿಸಿದ್ದರು. ಪ್ರಸ್ತುತ ಅಧ್ಯಕ್ಷರಾದ ಅಭಯಕುಮಾರ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಆಡಳಿತ ಮಂಡಳಿಯ ಸದಸ್ಯರಾದ ಬಿ.ಎ.ಚೌಗುಲೆ, ಎಸ್‌.ಎಸ್‌. ಹೈಬತ್ತಿ, ಆರ್‌.ಎಸ್‌.ಪಾಟೀಲ, ಎ.ಎಸ್‌.ಕನವಾಡೆ, ಎ.ಪಿ. ಶಿರಗಾಂವೆ, ಅಲ್ಕಾ ಕಾತ್ರಾಳೆ, ವಿಮಲ ಮೋನೆ, ಗ್ರಾ.ಪಂ ಅಧ್ಯಕ್ಷ ಮಹಮ್ಮದ ಗೌಂಡಿ, ಕಾಡಗೌಡ ಪಾಟೀಲ, ಎಂ.ಕೆ.ಪಾಟೀಲ, ಶಿವಾನಂದ ಪಾಟೀಲ, ಬಮ್ಮಣ್ಣ ಚೌಗುಲೆ, ಮಹಾವೀರ ಕಾತ್ರಾಳೆ, ಅಶೋಕ ಕಾತ್ರಾಳೆ, ಸಂಘದ ವ್ಯವಸ್ಥಾಪಕ ಎಸ್‌,ಎಸ್‌,ಮಾಂಗೂರ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here