ಅನಧಿಕೃತ ಕಟ್ಟಡಗಳ ನೆಲಸಮ

0
23
loading...

ಅಥಣಿ:ಸ್ಥಳಿಯ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕ್ಷೇರ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಹಲ್ಯಾಳ ವೃತ್ತದ ವರೆಗಿನ ಹಳೆಯ ಚರಂಡಿ ಮೇಲಿದ್ದ ಅನಧಿಕೃತ ಕಟ್ಟಗಳನ್ನು ತೆರವುಗೊಳಿಸುವ ಕಾರ್ಯವು ಬುಧವಾರದಂದು ಇಲ್ಲಿಯ ಪುರಸಭೆ ಮುಖ್ಯಾಧಿಕಾರಿ ಕವಲಾಪೂರ ನೇತೃತ್ವದಲ್ಲಿ ಜರುಗಿತು.

ಜೆಸಿಬಿಯಿಂದ ಒಳಚರಂಡಿ ಮೇಲೆ ನಿರ್ಮಿಸಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಅಲ್ಲದೆ ಅಲ್ಲಿ ಅತಿಕ್ರಮಣಗೊಂಡ ಜಾಗವನ್ನು ಮತ್ತೇ ಪುರಸಭೆ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ಸಮಯದಲ್ಲಿ ಕೆಲವರು ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಮೇಲೆ ಕಲ್ಲು ತೂರಾಟ ನಡೆಸಿ ಹಲ್ಲಗೆ ಯತ್ನಸಿದಾಗ ಪೊಲೀಸ್‌ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ಈ ಸಮಯದಲ್ಲಿ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ ಅವರು ಮಾತನಾಡಿ, ಪುರಸಭೆಯ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರಿಂದ ಚರಂಡಿ ನಿರ್ಮಾಣಕ್ಕೆ ಅಡತಡೆ ಉಂಟಾಗಿದೆ. ಈಗ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭಗೊಳ್ಳಲಿರುವುದು ಹಾಗಾಗಿ ಸ್ವಪ್ರೇರಣೆಯಿಂದ ಅತಿಕ್ರಮಿಸಿರುವ ಜಾಗವನ್ನು ತೆರವುಗೊಳಿಸಿ ಸಹಕರಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು.

ಪುರಸಭೆಯ ವಿ.ಎಸ್‌. ಹುದ್ದಾರ, ಆರ್‌.ಸಿ ಚೌಗಲಾ ಮತ್ತು ಸುಮಾರು 30 ಜನ ಪೌರ ಕಾರ್ಮಿಕ ಸಿಬ್ಬಂದಿ ವರ್ಗ ಪಾಲ್ಗೊಂಡು ಕಾರ್ಯಾಚರಣೆ ನಡೆಸಿತು.

loading...

LEAVE A REPLY

Please enter your comment!
Please enter your name here