ಆಧುನಿಕ ಸಮಾಜದಲ್ಲಿ ನಾವೆಲ್ಲರೂ ವಿಕ್ಷಿಪ್ತ ಸ್ಥತಿಯಲ್ಲಿದ್ದೇವೆ: ಚವ್ಹಾಣ

0
37
loading...

ಗಜೇಂದ್ರಗಡ: ಆಧುನಿಕ ಸಮಾಜದಲ್ಲಿ ನಾವೆಲ್ಲರೂ ವಿಕ್ಷಿಪ್ತ, ವಿಚಿತ್ರ ಸ್ಥಿತಿಯಲ್ಲಿದ್ದೇವೆ. ಸಮಾಜಕ್ಕಾಗಿ ಶ್ರಮಿಸಿದ ತ್ಯಾಗಮಯಿಗಳನ್ನು ಸ್ಮರಿಸುವ ಬದಲು ಸ್ವಾರ್ಥಿಗಳಾಗುತ್ತಿರುವುದು ಖೇದಕರ ಸಂಗತಿ ಎಂದು ಉಪನ್ಯಾಸಕ ಆರ್.ಕೆ ಚವ್ಹಾಣ ಹೇಳಿದರು.
ಪಟ್ಟಣದ ಮೈಸೂರು ಮಠದಲ್ಲಿ ಕಸಾಪ ತಾಲೂಕಾ ಘಟಕ ಹಾಗೂ ನಗರ ಘಟಕ ವತಿಯಿಂದ ಜರುಗಿದ ವಾರದ ಸಾಹಿತ್ಯ ಗೋಷ್ಠಿಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಜಿಗುಪ್ಸೆ, ನಿರಾಶಾದಾಯಕ ಭಾವನೆಯೇ ಎಲ್ಲೇಡೆ ತುಂಬಿದೆ. ಯುವಕರಲ್ಲಿ ಈ ಭಾವನೆ ಹೋಗಲಾಡಿಸಬೇಕಿದೆ. ಕನಸಿನೊಂದಿಗೆ ಸಾಹಸ, ಪರಿಶ್ರಮ, ಶ್ರದ್ಧೆ ಬೆರೆತರೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಲು ಸಾಧ್ಯ. ಮೌಲ್ಯ ವಿಲ್ಲದ ಜೀವನ ಕಳಶವಿಲ್ಲದ ದೇಗುಲವಿದ್ದಂತೆ. ಮೌಲ್ಯಗಳು ನಿಜ ಜೀವನಕ್ಕೆ ಕಳಶಪ್ರಾಯ ಆಗಿರುತ್ತದೆ. ಸಾಮಾಜಿಕ ಮೌಲ್ಯಗಳು ಸಂಪ್ರದಾಯದ ತಾಯಿ ಬೇರು ಇದ್ದಂತೆ ಎಂದರು.
ಉಪನ್ಯಾಸಕ ಬಿ.ವ್ಹಿ ಮುನವಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಕಳಕಳಿ ಇಲ್ಲದ ಮನುಷ್ಯ ಇದ್ದು ಸತ್ತಂತೆ. ಬಸವಣ್ಣ, ಅಕ್ಕಮಹಾದೇವಿ, ಸರ್ವಜ್ಞರಂತಹ ಮಹಾನ್ ನಾಯಕರ ವಾಣಿಗಳನ್ನು ಜೀವನದಲ್ಲಿ ಕೆಲಸ ಸಮಯವಾದರೂ ಆಲಿಸಿದಾಗ ಮೌಲ್ಯಗಳಿಂದ ಸಮೃದ್ಧ ಸಮಾಜ ಹಾಗೂ ಸುಸಂಸ್ಕøತ ಜನಾಂಗವನ್ನು ನಿರ್ಮಿಸಲು ಸಾಧ್ಯ ಎಂದ ಅವರು ವಚನ ಸಾಹಿತ್ಯವು ಕನ್ನಡ ಭಾಷೆಯ ಮೆರಗು ಹೆಚ್ಚಿಸಿದೆ. ವಚನಗಳು ಜನಪರ ಕಳಕಳಿಯನ್ನು ಹೊಂದಿವೆ. ಎಂದರು.
ಇದೇ ಸಂದರ್ಭದಲ್ಲಿ ಉಸ್ಮಾನ್‍ಘನಿ ಹಿರೇಹಾಳ ಸ್ವರಚಿತ ಕವನ ವಾಚಿಸಿದರು. ಜಿ.ಎಸ್. ವಡ್ಡರ, ಎಸ್.ಎಸ್. ಜಿಗಳೂರ, ಬಿ.ಎಸ್. ಬಸನಗೌಡರ, ಎಸ್.ಎನ್ ಬಡಿಗೇರ, ಎಸ್.ವಿ ಕಲ್ಲಿಗನೂರ, ಹುಚ್ಚಪ್ಪ ಹಾವೇರಿ, ಜಗದೀಶ ದುದ್ಗಿ, ದಾವಲಸಾಬ ತಾಳಿಕೋಟಿ, ಪಿ.ಎನ್ ದಿವಾಣದ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here