ಇಂದು ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಸಭೆ

0
20
loading...

ಕನ್ನಡಮ್ಮ ಸುದ್ದಿ-ಪಾಲಭಾವಿ
ಜಾತ್ಯಾತೀತ ಜನತಾ ದಳ ಪಕ್ಷವನ್ನು ಬಲಪಡಿಸಿವ ನಿಮಿತ್ಯ ರಾಜ್ಯ ಜೆಡಿಎಸ್‌ ಪಕ್ಷದ ಡಾ.ಬಿ.ಎನ್‌.ಸೂರಪಾಲಿ ಅವರು ದಿ.19ರಂದು ಬೆಳಗಾವಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆಂದು ಜಡಿಎಸ್‌ ಪಕ್ಷದ ಎಸ್ಸಿ ಘಟಕದ ರಾಜ್ಯಧ್ಯಕ್ಷರಾದ ರಾಜೇಂದ್ರ ಐಹೊಳೆ ಸುದ್ದಿಗಾರರಿಗೆ ತಿಳಿಸಿದರು. ಅವರು ಖಣದಾಳ ಗ್ರಾಮದ ಶ್ರೀ ಹುಲಕಾಂತೇಶ್ವರ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಚಿಕ್ಕೊಡಿ ಜಿಲ್ಲೆಯ ನಿಪ್ಪಾಣಿಯಲ್ಲಿ 12ಕ್ಕೆ, ರಾಯಬಾಗ ಪಟ್ಟಣದಲ್ಲಿ 1ಗಂಟೆಗೆ, ಕುಡಚಿ ಪಟ್ಟಣದ ಬಸ್‌ ನಿಲ್ದಾಣ ಹತ್ತಿರ ಶಿವಶಕ್ತಿ ಹೋಟೆಲದಲ್ಲಿ 1.30ಕ್ಕೆ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುವರು, 3 ಗಂಟೆಗೆ ಅಥಣಿ ಪಟ್ಟಣದಲ್ಲಿ, 4.30ಕ್ಕೆ ಕಾಗವಾಡ ಮತಕ್ಷೇತ್ರದ ಕೆಂಪವಾಡ ಸಕ್ಕರೆ ಕಾರ್ಖಾನೆಯ ಪ್ರಾಂಗಣದಲ್ಲಿ ಪಕ್ಷದ ಹಿರಿಯರು, ಕಾರ್ಯಕರ್ತರೊಂದಿಗೆ ಸಭೆ ನಡೆಸುವರು. ಈ ಸಂದರ್ಭದಲ್ಲಿ:-ಜೆಡಿಎಸ್‌ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಶ್ರೀಮಂತ ಪಾಟೀಲ, ಪಕ್ಷದ ಜಿಲ್ಲಾಧ್ಯಕ್ಷ ಉತ್ತಮ ಪಾಟೀಲ, ಪಕ್ಷದ ಚಿಕ್ಕೋಡಿ ವಿಭಾಗ ಚುಣಾವನಾಧಿಕಾರಿ ತಾನಾಜಿ ಕಾಟಕರ ಮುಂತಾದವರು ಆಗಮಿಸಲಿದ್ದಾರೆಂದು ತಿಳಿಸಿದರು.

loading...

LEAVE A REPLY

Please enter your comment!
Please enter your name here