ಎಸ್.ಎಮ್.ಭೂಮರಡ್ಡಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಮಾರ್ಟಕ್ಲಾಸ್ ಉದ್ಘಾಟನೆ

0
30
loading...

ಗಜೇಂದ್ರಗಡ: ಆಧುನಿಕ ಜಗತ್ತಿನ ತಾಂತ್ರಿಕತೆ ಮತ್ತು ವಿಜ್ಞಾನದ ಜೊತೆಗೆ ಸಾಗಿ ಜೀವನವನು ಸಾರ್ಥಕತೆ ಮಾಡಿಕೊಳ್ಳಬೇಕು. ಹೊಸಹೊಸ ತಣತ್ರಜ್ಞಾನಾಧಾರಿತ ಶಿಕ್ಷಣ ಅವಶ್ಯ ಆದ್ದರಿಂದ ವಿದ್ಯಾರ್ಥಿಗಳಿಗೆ ಜ್ಞಾನವೇ ಶಕ್ತಿಯಾಗಬೇಕು ಎಂದು ಗ.ವಿ.ವ.ಸಂಘದ ಅಧ್ಯಕ್ಷರಾದ ಡಾ.ಸಿ.ಸಿ.ಶಿವಪ್ಪಗೌಡರ ಅಭಿಪ್ರಾಯ ಪಟ್ಟರು.
ಪಟ್ಟಣದ ಎಸ್.ಎಮ್.ಭೂಮರಡ್ಡಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಮಾರ್ಟಕ್ಲಾಸ್ ಉದ್ಘಾಟಿಸಿ ಅವರು ಮಾತನಾಡಿದರು. ಗ.ವಿ.ವ.ಸಂಘದ ಸದಸ್ಯ ಹಾಗೂ ಖ್ಯಾತ ವೈದ್ಯ ಡಾ. ಬಿ.ವಿ.ಕಂಬಳ್ಯಾಳ ಮಾತನಾಡಿ ಬದುಕಿನ ಕತ್ತಲೆ ಕಳೆಯುವಲ್ಲಿ ಜ್ಞಾನದ ಜ್ಯೋತಿ ಅವಶ್ಯ ವಿದ್ಯಾರ್ಥಿಗಳೆಂದರೆ ದೇವರಿಗೆ ಸಮಾನ ಈ ಜಗತ್ತಿನ ಶಕ್ತಿಯೇ ಜ್ಞಾನ ಆದುದ್ದರಿಂದ ಜ್ಞಾನಾರ್ಜನೆಯೇ ವಿದ್ಯಾರ್ಥಿಗಳ ಕರ್ತವ್ಯವಾಗ ಬೇಕು ಎಂದರು.
ಈ ಸಂಧರ್ಭದಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯ ವ್ಹಿ.ಬಿ.ಮರದ ಸ್ವಾಗತಿಸಿದರು, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜೆ.ಜಿ ಕುದರಿ ವಂದಿಸಿದರು, ಉಪನ್ಯಾಸಕ ಗೋಪಿನಾಥ ರಾಯಬಾಗಿ ಹಾಗೂ ಆನಂದ ಜೂಚನಿ ಪ್ರದರ್ಶನ ತರಗತಿ ನಡೆಸಿಕೊಟ್ಟರು. ಎಸ್.ಕೆ.ಕಟ್ಟಿಮನಿ ಕಾರ್ಯಕ್ರಮ ನೀರೂಪಿಸಿದರು.

loading...

LEAVE A REPLY

Please enter your comment!
Please enter your name here