ಎ.ಡಿ.ಎಂ.ಗಳಿಗೆ ಸೂಕ್ತ ಬಂದೋಬಸ್ತಿ ಕಲ್ಪಿಸಬೇಕು

0
29
loading...

ಕನ್ನಡಮ್ಮ ಸುದ್ದಿ- ಮುಂಡರಗಿ : ಸತತ ಐದು ದಿನ ಬ್ಯಾಂಕ್‍ಗಳು ರಜೆ ಇರುವುದರಿಂದ ಬ್ಯಾಂಕ್ ಮತ್ತು ಎ.ಡಿ.ಎಂ.ಗಳಿಗೆ ಸೂಕ್ತ ಬಂದೋಬಸ್ತಿ ಕಲ್ಪಿಸಬೇಕು. ಸೆಕ್ಯೋರಿಟಿ ಗಾಡ್ಸ್‍ಗಳು 24 ತಾಸು ಕಾರ್ಯನಿರ್ವಹಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಮಂಜುನಾಥ ನಡುವಿಮನಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಬ್ಯಾಂಕ್ ವ್ಯವಸ್ಥಾಪಕರಿಗೆ ಮುಂಜಾಗೃತ ಕ್ರಮವಾಗಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಶನಿವಾರದಿಂದ ಬುಧವಾರ ವರೆಗೆ ಸರಣಿ ಸರ್ಕಾರಿ ರಜೆ ಇರುವುದರಿಂದ ಹೆಚ್ಚಾಗಿ ಕಳ್ಳತನ ನಡೆಯುವ ಸಂಭವ ಇರುತ್ತದೆ. ಇಂತಹ ಘಟನೆಗಳು ಹಲವಾರು ಕಡೆ ಈಗಾಗಲೇ ಆಗಿವೆ. ಆದ್ದರಿಂದ ಎಲ್ಲ ಬ್ಯಾಂಕ್ ವ್ಯವಸ್ಥಾಪಕರು ತಮ್ಮ ಬ್ಯಾಂಕ್‍ಗಳಲ್ಲಿ ಮುಂಜಾಗೃತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಎಟಿಎಂಗಳಿಗೆ ನಿರಂತರವಾಗಿ ಸೆಕ್ಯೋರಿಟಿ ಗಾಡ್ಸ್ ನೇಮಿಸಬೇಕು. ಪೊಲೀಸ್ ಇಲಾಖೆಯು ಬ್ಯಾಂಕ್, ಎಟಿಎಂ ಹಾಗೂ ಪಟ್ಟಣದ ಎಲ್ಲ ಮನೆಗಳ ಬಗೆಗೆ ಕಾಳಜಿ ಹೊಂದಲಿದೆ ಎಂದು ತಿಳಿಸಿದರು.
ಹಾಗೇ ಸರಣಿ ರಜೆ ಜೊತೆಗೆ ಅಕ್ಟೋಬರ್ ತಿಂಗಳಲ್ಲಿ 15 ದಿನಗಳ ಕಾಲ ಶಾಲಾ-ಕಾಲೇಜ್‍ಗಳು ರಜೆ ಇರುವುದರಿಂದ ಶಿಕ್ಷಕರುಗಳು ರಜೆ ಹಿನ್ನೆಲೆಯಲ್ಲಿ ಬೇರೊಂದು ಊರಿಗೆ ಹೋಗುವಂತ ಸಂದರ್ಭ ಇರುತ್ತದೆ. ಅಂತಹ ವೇಳೆ ಪೊಲೀಸ್ ಇಲಾಖೆ ಅಥವಾ ಸುತ್ತ-ಮುತ್ತಲಿನ ಮನೆಯವರಿಗೆ ತಿಳಿಸಿ ಹೋಗಬೇಕು. ಹಾಗೇ ಮನೆಯಲ್ಲಿ ಬಂಗಾರ, ಹಣ ಇಡಬಾರದು. ಈ ಕುರಿತಾದ ನೋಟಿಸ್ ಪ್ರತಿಯನ್ನು ಪಟ್ಟಣದ ಪ್ರತಿ ಮನೆ-ಮನೆಗೂ ಮುಟ್ಟಿಸುವಂತ ಕೆಲಸವನ್ನು ಪೊಲೀಸ್ ಇಲಾಖೆಯಿಂದ ಮಾಡಲಾಗುತ್ತದೆ ಎಂದರು.
ಪಟ್ಟಣದಲ್ಲಿ ಬೈಕ್‍ನಲ್ಲಿ ಮೂರು ಜನ ಕುಳಿತು ಸವಾರಿ ಮಾಡುತ್ತಾರೆ. ಅಂತವರ ಮೇಲೆ ದಂಡ ವಿಧಿಸಲಾಗುತ್ತದೆ. ಬೈಕ್ ಲೇಸೆನ್ಸ್, ಪಾಸಿಂಗ್, ಇನ್ಸೂರೇನ್ಸ್, ಹೆಲಿಮೇಟ್‍ನ್ನು ಬೈಕ್ ಸವಾರ ಕಡ್ಡಾಯವಾಗಿ ಹೊಂದಿದರಬೇಕು. ಇಲ್ಲದಿದ್ದರೇ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಎಸ್.ಬಿ.ಎಂ ಬ್ಯಾಂಕ್ ವ್ಯವಸ್ಥಾಪಕ ಅಭಿಷೇಕ, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಯಲ್ಲೇಶ ಸಿ, ಎಕ್ಸ್‍ಸ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ ಆರ್, ಕೋಟಕಾ ಬ್ಯಾಂಕ್‍ನ ಪಾಂಡುರಂಗ, ಎಸ್.ಬಿ.ಐ.ನ ರಾಜು ಸಬಿಕೇರಿ, ಕೆ.ಸಿ.ಸಿ.ಬ್ಯಾಂಕ್‍ನ ಪಿ.ಎಸ್.ನಾಯಕ, ಕೆವಿಜಿಬ್ಯಾಂಕ್ ವ್ಯವಸ್ಥಾಪಕ, ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here