ಐದು ದಿನದ ಪ್ರಕೃತಿ ಶಿಬಿರ ಯಶಸ್ವಿಯಾಗಿ ಪೂರ್ಣ

0
20
loading...

ಕನ್ನಡ್ಮಮ ಸುದ್ದಿ-ಕಾರವಾರ : ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ವಿಜ್ಞಾನ ಕೇಂದ್ರದಿಂದ ಆಯೋಜಿಸಲಾಗಿದ್ದ ಐದು ದಿನದ ಪ್ರಕೃತಿ ಶಿಬಿರ ಗುರುವಾರ ಯಶಸ್ವಿಯಾಗಿ ಪೂರ್ಣಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೋಬೆಷನರ್ ಐ.ಎ.ಎಸ್ ಅಧಿಕಾರಿ ಬಿ. ಫೌಝೀಯಾ ತರಾನುಮ ಮಾತನಾಡಿ, ವಿದ್ಯಾರ್ಥಿಗಳು ಪ್ರಕೃತಿ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ. ನಮ್ಮ ಜೀವನಕ್ಕೆ ಅತಿ ಅವಶ್ಯವಾಗಿರುವ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ತಿಳಿದ ವಿಷಯವನ್ನು ಇತರರಿಗೆ ತಿಳಿಸಿ ಜಾಗೃತಿಗೊಳಿಸಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ವಿ.ಎನ್ ನಾಯಕ, ಅ.16 ರಂದು ಪ್ರಾರಂಭವಾದ ಶಿಬಿರದಲ್ಲಿ ಜಿಲ್ಲೆಯ 32 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ದೇವಬಾಗ ಜಂಗಲ್ ಲಾಡ್ಜ್ ರಿಸಾರ್ಟ್ ಭೇಟಿ, ಕಾರವಾರ ಬಂದರಿಗೆ ಭೇಟಿ, ಕದ್ರಾ ಡ್ಯಾಂ, ಕದ್ರಾ ನಕ್ಷತ್ರವನ, ಅಣಶಿ ಹುಲಿ ಮೀಸಲು ಪ್ರದೇಶ, ಜಾಂಬಾ ಪಶ್ವಿಮ ಘಟ್ಟ ಮುಂತಾದ ನೈಸರ್ಗಿಕ ಪ್ರದೇಶಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅಲ್ಲಿ ಆ ಪ್ರದೇಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಅದಲ್ಲದೆ ವಿವಿಧ ವೈಜ್ಞಾನಿಕ ಚಟುವಟಿಕೆಗಳಾದ ಯೋಗ, ವಾಯುವಿಹಾರ, ಕ್ಲೇ ಮಾಡೆಲಿಂಗ್, ಸಾಮಾನ್ಯ ಜ್ಞಾನ ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಯಿತು ಎಂದರು.
ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸುಗಂಧಾ ಕುರಿ ಅಧ್ಯಕ್ಷತೆ ವಹಿಸಿದ್ದರು. ಸಹಾಯ ಪರಿಸರ ಅಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಪಂಚಾಯತಿ ಸದಸ್ಯ ಅನಿಲ ನಾಯ್ಕ ಆಗಮಿಸಿದ್ದರು.
ಶಿಬಿರಾರ್ಥಿಗಳು 5 ದಿನಗಳ ಬಗ್ಗೆ ನಡೆದ ಕಾರ್ಯಕ್ರಮಗಳ ವರದಿ ಹಾಗೂ ಅನಿಸಿಕೆಗಳನ್ನು ಹೇಳಿಕೊಂಡರು. ಶಿಬಿರಾರ್ಥಿ ತೇಜಸ್ವಿನಿ ತೊಡುರು ಸ್ವಾಗತಿಸಿದರು. ಪಿ.ಎನ್.ಇ. ಹೈಸ್ಕೂಲ್ ಚೆಂಡಿಯಾದ ಮುಖ್ಯಾಧ್ಯಾಪಕ ರಾಜೇಂದ್ರನ್ ನಾಯಕ್ ವಂದಿಸಿದರು. ಶಿಬಿರಾರ್ಥಿ ಪವಿತ್ರಾ ಪರೇರಾ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here