ಕಪ್ಪತಗುಡ್ಡ ಸಂರಕ್ಷಿತ ಪ್ರದೇಶ ಎಂದು ಘೋಷಿಸವಂತೆ ಒತ್ತಾಯ

0
50
loading...

ಕನ್ನಡಮ್ಮ ಸುದ್ದಿ-ಶಿರಸಿ : ಗದಗ ಜಿಲ್ಲೆಯ ಕಪ್ಪತಗುಡ್ಡ ಸಂರಕ್ಷಿತ ಪ್ರದೇಶ ಆದೇಶವನ್ನು ಸರ್ಕಾರ ರದ್ದು ಮಾಡಿದ್ದು ಆಘಾತಕಾರಿ ಆಗಿದೆ. ಸರ್ಕಾರ ಗಣಿ ಉದ್ಯಮಿಗಳ ಲಾಬಿಗೆ ಸಿಲುಕಿ ಕಪ್ಪತಗುಡ್ಡವನ್ನು ಬಲಿ ಕೊಡಬಾರದು. ಪುನಃ ವನ್ಯಜೀವಿ ಮಂಡಳಿ ಸಭೆ ಕರೆದು ಕಪ್ಪತಗುಡ್ಡ ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು ಎಂದು ವೃಕ್ಷಲಕ್ಷ ಆಂದೋಲನದ ಪ್ರಮುಖರು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರನ್ನು ಒತ್ತಾಯ ಮಾಡಿದೆ.
ಶಿರಸಿಗೆ ಅವರು ಆಗಮಿಸಿದ ವೇಳೆ ವೃಕ್ಷಲಕ್ಷ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರ ತಂಡ ಭೇಟಿ ಮಾಡಿ ಚರ್ಚಿಸಿತು. 2014-2015ರಲ್ಲಿ ಗದಗ ಜಿಲ್ಲೆ ಜನತೆ ವ್ಯಾಪಕ ಚಳುವಳಿ ನಡೆಸಿದ ನಂತರ ಸರ್ಕಾರ 2015ರ ಡಿಸೆಂಬರ್ ನಲ್ಲಿ 17,872 ಹೇಕ್ಟರ್ ಅರಣ್ಯ ಪ್ರದೇಶವನ್ನು ಕಪ್ಪತಗುಡ್ಡ ಸಂರಕ್ಷಿತ ಪ್ರದೇಶ ಎಂದು ಆದೇಶ ಪ್ರಕಟಿಸಿತ್ತು. ಇದೀಗ 2ತಿಂಗಳ ಹಿಂದೆ ಏಕಾಎಕಿ ಈ ಆದೇಶವನ್ನು ಸರ್ಕಾರ ರದ್ದು ಮಾಡಿತ್ತು ಎಂಬುದನ್ನು ಇಲ್ಲಿ ನೆನಪಿಸಲಾಯಿತು. ಕಪ್ಪತಗುಡ್ಡವು ಮಲೆನಾಡಿನ ಪಶ್ಚಿಮ ಘಟ್ಟ. ಜೌಷಧೀಸಸ್ಯಗಳ ಆಗರ. 2009ರಿಂದ ಈವರೆಗೆ ಸತತ ಪ್ರಯತ್ನ ನಡೆಸಿ ಕಪ್ಪತಗುಡ್ಡಕ್ಕೆ ರಕ್ಷಣಾ ಕವಚ ತೊಡಿಸಲಾಗಿತ್ತು. 19-12-2015 ರ ಆದೇಶ ರದ್ದಾಗಿದರಿಂದ ಈ ಪ್ರದೇಶದಲ್ಲಿ ಅರಣ್ಯನಾಶ, ಅತಿಕ್ರಮಣ ಹೆಚ್ಚಾಗಲಿದೆ. ಇಲ್ಲಿ ಹುಟ್ಟಿ ಹರಿಯುವ, ಹಳ್ಳ, ನೀರುಣಿಸುವ ಕೆರೆಗಳು ಬತ್ತಿ ಹೋಗಲಿವೆ. ಅಮೂಲ್ಯ ಜಲಾನಯನವನ್ನು ನಾಶಮಾಡಲು ಗದಗ ಜಿಲ್ಲೆಯ ಜನತೆ ಅವಕಾಶ ನೀಡಬಾರದು. ಭಾರೀ ಗಣಿ ಗಾರಿಕೆಗೆ ಸರ್ಕಾರ ಅವಕಾಶ ನೀಡಬಾರದು ಎಂದು ಆಗ್ರಹಿಸಲಾಯಿತು.
ಕಪ್ಪತಗುಡ್ಡ ಪರಿಸರ ಸೂಕ್ಷ್ಮ ಪ್ರದೇಶ, ಜಲಮೂಲ, ಪಾರಿಸಾರಿಕ ಮಹತ್ವ, ಗದಗ ಜಿಲ್ಲೆಯ ಆಹಾರ ಸುರಕ್ಷತೆಗೆ ಬೆನ್ನೆಲಬು ಎಂದು ಡಿಸೆಂಬರ್ 2015ರ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ಆದೇಶದಿಂದ ಇಲ್ಲಿನ ಜನರ ಕೃಷಿ, ಜನಜೀವನಕ್ಕೆ ಆತಂಕ ಇಲ್ಲ. ಒಕ್ಕಲೆಬ್ಬಿಸುವಿಕೆ ಪ್ರಶ್ನೆ ಇಲ್ಲ. ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ಜನಪ್ರತಿನಿಧಿಗಳು, ಮಠಾಧೀಶರು, ರೈತ ಸಂಘಟನೆಗಳು ಕಪ್ಪತಗುಡ್ಡ ಗಣಿಗಾರಿಕೆಗೆ ಆಹುತಿ ಆಗುವದನ್ನು ತಪ್ಪಿಸಲು ಪುನಃ ಗಟ್ಟಿ ಧ್ವನಿ ಎತ್ತಬೇಕು ಎಂದು ವಿನಂತಿಸಲಾಯಿತು.
ಈ ವೇಳೆ ಪ್ರತಿಕ್ರಿಯಿಸಿದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಕೆ. ಪಾಟೀಲ ಅವರು ಕಪ್ಪತಗುಡ್ಡ ನಾಶವಾಗಲು ಅವಕಾಶ ನೀಡುವದಿಲ್ಲ. ಕಾಯಿದೆ ತೊಡಕಿನಿಂದ ಈ ಆದೇಶ ರದ್ದು ಮಾಡಲಾಗಿದೆ. ಪುನಃ ಸ್ಥಾನಿಕ ಜನರ ಅಭಿಪ್ರಾಯಪಡೆದು ಕಪ್ಪತಗುಡ್ಡ ಸಂರಕ್ಷಣೆಗೆ ಮುಂದಾಗುತ್ತೇವೆ ಎಂದು ತಿಳಿಸಿದರು.

loading...

LEAVE A REPLY

Please enter your comment!
Please enter your name here