ಕಾಗ್ರೇಸ್ ಪಕ್ಷ ಯಾರನ್ನು ವಿರೋಧಿಸುವುದಿಲ್ಲ: ಭೀಮಣ್ಣ ನಾಯ್ಕ

0
27
loading...

ಕನ್ನಡಮ್ಮ ಸುದ್ದಿ-ಶಿರಸಿ : ವಿರೋಧಿಸುವ ಭರಾಟೆಯಲ್ಲಿ ಕಾಂಗ್ರೆಸ್ ಕಡೆಗೆ ಅಸಂವಿಧಾನಿಕ ಪದ ಬಳಕೆ ಮಾಡುವದು ಬಿಜೆಪಿ ಪ್ರಮುಖರ ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬಿಜೆಪಿಗರ ಇಂತಹ ನಡೆ ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.
ಜಿಲ್ಲಾ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿದ ಅವರು, ಯಲ್ಲಾಪುರದಲ್ಲಿ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಾಂತವೀರ ಗೌಡ ಅಧ್ಯಕ್ಷತೆಯಲ್ಲಿ ನಡೆದ ರೈತ ಮೋರ್ಚಾ ಸಮಾವೇಶದಲ್ಲಿ ಕೆಲ ಬಿಜೆಪಿ ಪ್ರಮುಖರು ಕಾಂಗ್ರೆಸ್ ಮೇಲೆ ಅನವಶ್ಯಕವಾಗಿ ಕೆಟ್ಟ ಪದಗಳ ಬಳಕೆ ಮಾಡಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಟೀಕೆ ಸಹಜ. ಆದರೆ ಆಪಾದನೆ ವೇಳೆ ಪದಗಳ ಮೇಲೆ ಹಿಡಿತವಿಲ್ಲದೇ ಬಳಸುವದು ಸರಿಯಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿಲ್ಲ. ರೈತರನ್ನು ನಿರ್ಲಕ್ಷಿಸಿಸುತ್ತಿದೆ. ಕೇವಲ ಶಂಕು ಸ್ಥಾಪನೆ ಮಾಡುವುದು ಜಿಲ್ಲಾ ಸಚಿವರು ಕೆಲಸವಾಗಿದೆ ಎಂದು ಬಿಜೆಪಿಗರು ಹೇಳಿದ್ದಾರೆ. ಜೊತೆಗೆ ಕಾಂಗ್ರೆಸ್‍ನ ಶ್ರಾದ್ಧ ಮಾಡುವದಾಗಿ ಹಾಗೂ ಪಿಂಡ ಬಿಡುವದಾಗಿ ಅವಹೇಳನ ಮಾಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿದ್ದು ಇಂತಹ ಹೇಳಿಕೆ ನೀಡುವುದು ಖಂಡನೀಯ. ವಿರೋಧಿಸುವ ಭರದಲ್ಲಿ ಅತ್ಯಂತ ಹೀನಾಯವಾಗಿ ವರ್ತಿಸಿರುವುದು ಸರಿಯಲ್ಲ ಎಂದರು.
ದೇಶಪಾಂಡೆಯಿಂದ ಜಿಲ್ಲೆಯ ಅಭಿವೃದ್ಧಿ…
ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಎರಡು ಸಚಿವರಿದ್ದರೂ ಮೆಡಿಕಲ್ ಕಾಲೇಜು ತರುವ ವಿಷಯದಲ್ಲಿ ಕಾಲಹರಣ ಮಾಡಿದರು. ಆದರೆ ಕಾಂಗ್ರೆಸ್ ಸರಕಾರ ಬಂದ ನಂತರ ದೇಶಪಾಂಡೆ ಜಿಲ್ಲೆಗೆ ಈ ಕಾಲೇಜು ತಂದರು. ಅದೇ ರೀತಿ ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ನೂರಾರು ಕೋಟಿ ರೂ. ಬಂದವು. ಹೀಗಿರುವಾಗ ದೇಶಪಾಂಡೆ ಏನು ಮಾಡಿದ್ದಾರೆ ಎನ್ನುವವರು ಇದನ್ನು ಅರಿಯಬೇಕು ಎಂದರು.
ಬಿಜೆಪಿಯಲ್ಲಿಯೂ ಸಾಕಷ್ಟು ಕೊಳಕಿದೆ. ಮುಖ್ಯಮಂತ್ರಿಗಳಿಂದ ಹಿಡಿದು ಹಲವು ಸಚಿವರು ಜೈಲು ನೋಡಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ ಇಂತಹ ಒಂದು ಉದಾಹರಣೆ ಸಿಗುವುದಿಲ್ಲ ಎಂದ ಅವರು, ಜಿಲ್ಲೆಗೆ 100 ಕೋಟಿ ಕೊಡುವುದಾಗಿ ಬಿ.ಎಸ್.ಯಡ್ಯೂರಪ್ಪ ಹೇಳಿಕೆ ನೀಡಿದ್ದರ ಬಗ್ಗೆ ಬಿಜೆಪಿಗರು ಏಕೆ ಮಾತನಾಡುತ್ತಿಲ್ಲ? ಬೇಲೀಕೇರಿ ಅದಿರು ನಾಪತ್ತೆಯ ವೇಳೆ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾ ಸಚಿವರಿದ್ದರು. ಅದರ ಬಗ್ಗೆ ಬಿಜೆಪಿಗರು ಮೌನ ಯಾಕೆ? ಎಂದು ಪ್ರಶ್ನಿಸಿದ ಅವರು, ತಮ್ಮೊಳಗೇ ಹುಳುಕಿಟ್ಟುಕೊಂಡು ಸುಮ್ಮನೆ ಕಾಂಗ್ರೆಸ್ ಕಡೆ ಬೊಟ್ಟು ಮಾಡುವುದು ಹಾಸ್ಯಾಸ್ಪದ. ಭ್ರಷ್ಟಾಚಾರದ ಕೂಪವಾಗಿರುವ ಬಿಜೆಪಿಯ ಹಿನ್ನೆಲೆ ಕೆದಕಿದರೆ ಯಾರಿಗೆ ಶ್ರಾದ್ಧ ಮಾಡುವುದು ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಈ ವೇಳೆ ಪ್ರಮುಖರಾದ ಪ್ರಮೋದ ಹೆಗಡೆ, ಅರುಣಾ ವೇರ್ಣೆಕರ್, ಎಸ್.ಕೆ.ಭಾಗವತ ಇದ್ದರು.

loading...

LEAVE A REPLY

Please enter your comment!
Please enter your name here