ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ಳಿಹಬ್ಬ ಆಚರಿಸಲು ಸಜ್ಜು

0
25
loading...

ಕನ್ನಡಮ್ಮ ಸುದ್ದಿ-ಭಟ್ಕಳ : ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ 2017ನೇ ಇಸವಿಯನ್ನು ಬೆಳ್ಳಿಹಬ್ಬದ ವರ್ಷವನ್ನಾಗಿ ಆಚರಿಸಲು ತೀರ್ಮಾನಿಸಿದ್ದು ಈ ಕುರಿತು ವಿಶೇಷ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೂ ಕೂಡಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
1993ನೇ ಇಸವಿ ಜನವರಿಯಲ್ಲಿ ಉದ್ಘಾಟನೆಯಾದ ಸಂಘ 24 ವರ್ಷಗಳನ್ನು ಯಶಸ್ವೀಯಾಗಿ ಪೂರೈಸಿ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಬೆಳ್ಳಿಹಬ್ಬದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡು ನಂತರ ಇಡೀ ವರ್ಷದ ಪ್ರತಿ ತಿಂಗಳೂ ಒಂದೊಂದು ಕಾರ್ಯಕ್ರಮದಂತೆ 12 ಕಾರ್ಯಕ್ರಮಗಳನ್ನು ನಡೆಸಿ 2018ರ ಜನವರಿಯಲ್ಲಿ ಮುಕ್ತಾಯ ಸಮಾರಂಭವನ್ನು ಹಮ್ಮಿಕೊಳ್ಳಲೂ ತೀರ್ಮಾನಿಸಲಾಯಿತು.
ಬೆಳ್ಳಿ ಹಬ್ಬ ಆಚರಣೆಯ ಹಾಗೂ ವಿವಿಧ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ಸಮಾಜದ ವಿವಿಧ ಸ್ಥರದ ಗಣ್ಯರನ್ನು ಸೇರಿಸಿಕೊಂಡು ವಿವಿಧ ಸಮಿತಿಗಳನ್ನು ರಚಿಸಿ ಅರ್ಥಪೂರ್ಣ ಆಚರಣೆಯನ್ನು ಮಾಡಲು ತೀರ್ಮಾನಿಸಿದ್ದು, ಸಂಘದ ವತಿಯಿಂದ ತಾಲೂಕಿನ ಗ್ರಾಮವೊಂದನ್ನು ದತ್ತು ತೆಗೆದುಕೊಂಡು ಬೆಳ್ಳಿಹಬ್ಬದ ಸವಿನೆನಪಿಗಾಗಿ ಗ್ರಾಮದಲ್ಲಿ ಅಗತ್ಯದ ಮೂಲ ಭೂತ ಸೌಕರ್ಯ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ವಿಧದದಲ್ಲಿಯೂ ಕೂಡಾ ನೆರವು ನೀಡಲು ಚಿಂತಿಸಲಾಗಿದೆ ಎಂದೂ ತಿಳಿಸಲಾಗಿದೆ.
ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಸಂಘದ ವತಿಯಿಂದ ಉತ್ತಮ ದರ್ಜೆಯ ಸ್ಮರಣ ಸಂಚಿಕೆಯೊಂದನ್ನು ಕೂಡಾ ಹೊರ ತರಲು ನಿರ್ಧರಿಸಲಾಗಿದ್ದು ಸ್ಮರಣ ಸಂಚಿಕೆಯಲ್ಲಿ ವಿವಿಧ ರೀತಿಯ ಲೇಖನಗಳು, ಭಟ್ಕಳ ತಾಲೂಕಿಗೆ ಸಂಬಂಧ ಪಟ್ಟಂತೆ ಚಿತ್ರಗಳು, ಜನ ಜೀವನ ಇತ್ಯಾದಿಗಳ ಕುರಿತು ವಿವರಣೆಗಳನ್ನೊಳಗೊಂಡಿದ್ದು ಕನ್ನಡ ಹಾಗೂ ಉರ್ದು ವಿಭಾಗವನ್ನು ಹೊಂದಿರುತ್ತದೆ.
ಬೆಳ್ಳಿ ಹಬ್ಬದ ಪ್ರಯುಕ್ತ ಹಿರಿಯ ಪತ್ರಕರ್ತರು ಸೇರಿದಂತೆ ಸಮಾಜದ 25 ಜನರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದ್ದು, ಪತ್ರಕರ್ತರಿಗಾಗಿ ಸಮಾಜದ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಲೂ ಕೂಡಾ ಚಿಂತನೆ ನಡೆಸಲಾಗಿದೆ. ಬೆಳ್ಳಿಹಬ್ಬದ ವರ್ಷದಿಂದಲೇ ದತ್ತಿ ನಿಧಿ ಪ್ರಶಸ್ತಿ ನೀಡಲು ಆರಂಭಿಸಲೂ ಕೂಡಾ ಚಿಂತನೆ ನಡೆಸಲಾಗಿದೆ ಎಂದೂ ತಿಸಲಾಗಿದೆ. ಇದೇ ಬರುವ 2017ರ ಜನವರಿಯಲ್ಲಿ ಬೆಳ್ಳಿ ಹಬ್ಬ ಸಮಾರಂಭದ ಉದ್ಘಾಟನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿದ್ದು ಅಂದೇ ಉತ್ತಮ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಭಟ್ಕಳದ ಜನತೆಗೆ ಸಾಂಸ್ಕøತಿಕ ಸಿಂಚನ ನೀಡುವ ಕುರಿತು ನಿರ್ಧರಿಸಲಾಗಿದೆ.
ಸಭೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕನ್ನಡ ಜನಾಂತರಂಗ/ಕರಾವಳಿ ಅಲೆ ವರದಿಗಾರ ರಾಘವೇಂದ್ರ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ವಿಜಯ ಕರ್ನಾಟಕ ವರದಿಗಾರ ಭಾಸ್ಕರ ನಾಯ್ಕ, ಹಿರಿಯ ಉಪಾಧ್ಯಕ್ಷ ವಾರ್ತಾಭಾರತಿ ಹಾಗೂ ಸಾಹಿಲ್ ಆನ್‍ಲೈನ್ ವರದಿಗಾರ ಎಂ. ಆರ್. ಮಾನ್ವಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ನಕ್ಷ-ಇ-ನವಾಯತ್ ವರದಿಗಾರ ಫಯ್ಯಾಜ್ ಮುಲ್ಲಾ, ಭಾವನಾ ಟಿ.ವಿ.ಯ ಸಂಪಾದಕ ಭವಾನಿಶಂಕರ ನಾಯ್ಕ, ಫಿಕ್ರೊಖಬರ್ ಆನ್‍ಲೈನ್ ಸಂಪಾದಕ ಅನ್ಸಾರ್ ಅಝೀಜ್ ನದ್ವಿ, ಈಟಿವಿ ಉರ್ದು ವರದಿಗಾರ ಸೈಯದ್ ಅಹಮ್ಮದ್ ಸಾಲಿಕ್, ನೂತನ ಟಿವಿ ಹಾಗೂ ಜನಮಾಧ್ಯಮ ವರದಿಗಾರ ಪ್ರಸನ್ನ ಭಟ್ಟ, ವಿ4 ಟಿ.ವಿ. ಚಾನೆಲ್ ವರದಿಗಾರ ರಾಘವೇಂದ್ರ ಮಲ್ಯ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here