ಕಾಲುವೆ ಮುಖಾಂತರ ಕೆರೆಗಳಿಗೆ ನೀರು

0
16
loading...

ನರಗುಂದ: ಕುಡಿಯುವ ನೀರಿನ ಭವಣೆ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು ಮತ್ತು ಸಕಾಲಿಕ ಮಳೆಯಾಗದೇ ಮುಂಗಾರಿನ ಜೊತೆಗೆ ಹಿಂಗಾರು ಕೈಗೊಡುವ ಲಕ್ಷಣಗಳು ಗೋಚರಿಸಿದ್ದರಿಂದ ಹಾಗೂ ಕುಡಿಯುವ ನೀರಿನ ಕೆರೆಗಳಿಗೆ ನೀರಿನ ಲಭ್ಯತೆ ಪ್ರತಿ ವರ್ಷದಂತೆ ಈ ಭಾರಿಯೂ ಕಾಲುವೆ ಮುಖಾಂತರ ಹರಿಸಲು ಅ. 21 ರಂದು ಬೆಳಗಾಂವಿ ನೀರಾವರಿ ವೃತ್ತದ ಅಧಿಕಾರಿಗಳು ಕಾಲುವೆಗೆ ನೀರು ಹರಿಸಿದ್ದಾರೆ. 10 ದಿನಗಳವಗೆಗೆ ಕಾಲವೆಗೆ ನೀರು ಹರಿಯಲಿರುವುದರಿಂದ ಈ ಅವಧಿಯಲ್ಲಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಭರ್ತಿಗೊಳಿಸಬೇಕಿದೆ. ಕಾಲವೆಗೆ ನೀರು ಹರಿಬಿಟ್ಟ ಸಂದರ್ಭದಲ್ಲಿ ಬೇಸಾಯಕ್ಕೆ ಜಮೀನುಗಳಿಗೆ ಉಪಯೋಗ ಮಾಡುವುದನ್ನು ತಡೆಗಟ್ಟಲು ಬೆಳಗಾವಿ ನೀರಾವರಿ ವೃತ್ ಅಧಿಕಾರಿಗಳು ಕುಡಿಯುವ ಕೆರೆಗೆ ನೀರು ಮಾತ್ರ ಕಾಲವೆಯ ಮುಖಾಂತರ ಹರಿಸಲಾಗಿದೆ. ಆದರೆ ಇದನ್ನು ಜಮೀನುಗಳಿಗೆ ಪಂಪ್‍ಸೆಟ್ ಹೆಚ್ಚಿ ಅಕ್ರಮವಾಗಿ ನೀರು ಪಡೆಯವುದು ಸರಿಯಲ್ಲ. ಇಂತಹ ಅಕ್ರಮಗಳು ಕಂಡು ಬಂದಲ್ಲಿ ಅಂತಹ ರೈತರ ಪಂಪ್‍ಸೆಟ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಇದರ ಜೊತೆಗೆ 144 ನೇ ಕಲಂ ಜಾರಿಗೊಳಿಸಿರುವುದರಿಂದ ಈ ಕಾನೂನು ಪಾಲಿಸಿ ರೈತರು ಕೆರೆಗಳಿಗೆ ನೀರು ಭರ್ತಿಗೊಳಿಸಲು ಸಹಕಾರ ನೀಡಭೇಕೆಂದು ಕೋರಿದ್ದರಿಂದ ಶಾಸಕ ಬಿ,.ಆರ್. ಯಾವಗಲ್ ರವಿವಾರ ಮಲಪ್ರಭೆ ಕಾಲುವೆಗಳನ್ನು ಪರಿಶೀಲಿಸಿ ಅನೇಕ ಅಕ್ರಮ ಪಂಪ್‍ಸೆಟ್‍ಗಳನ್ನು ತೆಗೆಸಲು ರೈತರ ಜೊತೆಗೆ ಮಾತುಕತೆ ನಡೆಸಿದರಲ್ಲದೇ, ಕೆರೆಗಳಿಗೆ ನೀರು ಭರ್ತಿಗೊಳಿಸಲು ಸಹಕಾರ ನೀಡಿ ಎಂದು ತಿಳಿಸಿದರು.
ಕುಡಿಯುವ ನೀರಿನ ಲಭ್ಯತೆ ಇರದ್ದರಿಂದ ತೊಂದರೆ ಅನುಭವಿಸುತ್ತಿರುವ ನರಗುಂದ ತಾಲೂಕಿನಲ್ಲಿ ಕಳೆದ ಜನೇವರಿಯಲ್ಲಿ ಕೆರೆಗಳಿಗೆ ನೀರು ಭರ್ತಿಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಮೊದಲು ಪಟ್ಟಣ ಪ್ರದೇಶದ ನರಗುಂದ ಕರೆಗೆ ನೀರು ಹರಿಸಲು ಜನವೇರಿಯಲ್ಲಿ ನೀರಾವರಿ ಅಧಿಕಾರಿಗಳು ಮಲಪ್ರಭೆ ಕಾಲುವೆಯಿಂದ ನೀರು ಹರಿಸಿದ್ದ ಸಂದರ್ಭದಲ್ಲಿ ನೀರು ಹರಿದು ಬರಲಿಲ್ಲ. ಆಗಲೂ ಮುಂಗಾರಿಗಾಗಿ ಮೇಲ್ಬಾಗದ ರೈತರು ನೀರು ಪಡೆದರು. ಆಗ ತಕ್ಷಣ ಕಾಲುವೆಗೆ ನೀರು ಹರಿಸುವುದನ್ನು ಅಧಿಕಾರಿಳು ಬಂದ್ ಮಾಡಿದ್ದರು. ನಂತರ ಜುಲೈ ಎರಡನೇ ವಾರದಲ್ಲಿ ಪುನಹ ನರಗುಂದ ಕೆರೆ ನೀರು ಭರ್ತಿಮಾಡಲು ಕಾಲವೆಗೆ ನೀರು ಬಿಟ್ಟ ಸಂದರ್ಭದಲ್ಲಿ ರೈತರು ಬಳಸಿಕೊಳ್ಳುವುದನ್ನು ಮುಂದುವರೆಸಿದ್ದರಿಂದ ಆಗಲೂ ಕಾಲುವೆಯ ನೀರು ತಟಸ್ಥಗೊಳಿಸಲಾಯಿತು. ನಂತರ ಅ.21 ರಂದು ಕಾಲವೆ ಮುಖಾಂತರ ನೀರು ಹರಿಸಲಾಗಿದೆ. 10 ದಿನಗಳವೆರೆಗೆ ನೀರು ಹರಿದುಬರಬೇಕಿದೆ. ಆದರೆ ತಾಲೂಕಿನಲ್ಲಿ 42 ಕರೆಗಳಿಗೆ ಕಾಲುವೆ ಮುಖಾಂತರ ಹರಿಬಿಟ್ಟ ನೀರು 10 ದಿನದೊಳಗೆ ಭüರ್ತಿಮಾಡಬೇಕಿದೆ. ಆದರೆ ಜಮೀನುಗಳಿಗೆ ನೀರು ಹರಿಸುವವರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಈ ಅವಧಿಯೊಳಗೆ ನೀರು ಕೆರೆಗಳಿಗೆ ಹರಿದು ಬರುವ ಯಾವುದೇ ನಂಬಿಕೆ ಇಲ್ಲ.
ಅಧಿಕಾರಿಗಳ ಮೇಲೆ ಕೋಪ: ನರಗುಂದ ಶಾಖಾ ಕಾಲುವೆಗೆ ನೀರು ಹರಿಬಿಟ್ಟಿದ್ದರಿಂದ ಕಾಲುವೆ ಪರೀಕ್ಷೆಗಾಗಿ ರವಿವಾರ ತೆರಳಿದ್ದ ಶಾಸಕರು ಅಧಿಕಾರಿಗಳ ಬಳಿ ಮಾತನಾಡಿ, ಕಾಲುವೆಗಳನ್ನು ಸರಿಯಾಗಿಡಲು ಕಲಿತುಕೊಳ್ಳಿ ಕಂಠಿಗಳು ಬೆಳೆದಿರುವುದು ಕಾಣುವುದಿಲ್ಲವೇ ಎಂದು ರೇಗಿದರಲ್ಲದೇ, ನೀರು ಹರಿಬಿಟ್ಟಿರುವುದು ನಮಗೆ ಗೊತ್ತೇ ಇರಲಿಲ್ಲವೆಂದು ನೀರಾವರಿ ಅಧಿಕಾರಿಗಳು ತಿಳಿಸಿದ್ದರಿಂದ ಶಾಸಕರು ಮತ್ತಷ್ಟು ಸಿಡಿಮಿಡಿಗೊಂಡರು. ಕಾಲವೆ ಮೇಲ್ಬಾಗದಲ್ಲಿ ಅನೇಕ ರೈತರು ಪಂಪ್‍ಸೆಟ್ ಹಚ್ಚಿ ನೀರು ಪಡೆದುಕೊಳ್ಳುತಿದ್ದರು. ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇವೆನ್ನೆಲ್ಲ ಗಮನಿಸಿ ಧರ್ಪದಿಂದ ಪಂಪ್‍ಶೆಟ್‍ಗೆ ಹಚ್ಚಿದ್ದ ಪೈಪ್‍ಲೈನಗಳನ್ನು ಕಿಳಿಸುತಿದ್ದರೆ ಹೊರತು ಒಬ್ಬ ರೈತರ ಮೇಲೆಯೂ ಕ್ರಕೈಗೊಳ್ಳದಿರುವುದು ಕಂಡು ಬಂತು. ಅಕ್ರಮ ಪಂಪ್‍ಶೆಟ್ ಹಚ್ಚಿ ನೀರು ಪಡೆದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿವುದು ಮಾತ್ರ ಕಾಣುವಂತಿತ್ತು.
ನಂತರ ನರಗುಂದ ತಾಪಂದಲ್ಲಿ ಶಾಸಕ ಬಿ.ಆರ್. ಯಾವಗಲ್ ಸುದ್ದಿಗಾರರ ಜೊತೆ ಮಾತನಾಡಿ, ತಾಲೂಕಿನಲ್ಲಿ 42 ಕೆರೆಗಳಿಗೆ ಕುಡಿಯುವ ನೀರನ ಲಭ್ಯತೆ ಅಗತ್ಯವಾಗಿ ಬೇಕಾಗಿದೆ. ಈ ವರ್ಷದ ಜನೇವರಿಯಲ್ಲಿ ನೀರನ್ನು ಕೆರೆಗಳಿಗೆ ಭರ್ತಿಮಾಡಲು ಕಾಲುವೆ ಮುಖಾಂತರ ಹರಿಸಿದ್ದರೂ ಕೂಡಾ ರೈತರು ಜಮೀನುಗಳಿಗೆ ಹರಿಸಿದ್ದರಿಂದ ಆದಾಗಲೇ ಕಾಲವೆ ನೀರು ತಟಸ್ಥಗೊಳಿಸಲಾಯಿತು. ಈಗಲೂ ಹಾಗಾಗಬಾರದೆಂದು ದೃಷ್ಟಿಯಿಂದ ಕಾಲುವೆ ಬಿಟ್ಟಿ ನೀರಿನ ಲಭ್ಯತೆ ಪರಿಶೀಲನೆ ರವಿವಾರ ನಡೆಸಲಾಯಿತು. ನೀರಿನ ಲಭ್ಯತೆ ಹೆಚ್ಚಿನ ಪ್ರಮಾಣದಲ್ಲಿ ನೀಡಲು ಸಹ ಈಗಾಗಲೇ ಸಂಭಧಿಸಿದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಜೊತೆ ನೀರಾವರಿ ವೃತ್ ಅಧಿಕಾರಿಗಳ ಜೊತೆ ಮಾತನಾಡಲಾಗಿದೆ. ಪರಿಸ್ಥಿತಿ ಅರಿವು ನಮಗೆ ಇದ್ದು ಕಾಲಾಂತರದಲ್ಲಿ ಎಲ್ಲವೂ ಸರಿದೂಗಲಿದೆ ಎಂದು ತಿಳಿಸಿದರು.
ನರಗುಂದ ಶಾಖಾ ಕಾಲುವೆಗೆ ಸಧ್ಯದಲ್ಲಿ 300 ಕ್ಯೂಸೆಕ್ಸ್ ನೀರು ಹರಿಸಲಾಗಿದೆ. ನವಲಗುಂದ ಭಾಗದ ಕೆರೆಗಳಿಗೆ ನೀರು ಹರಿಸಲು ಎಂಆರ್‍ಬಿಸಿಯಿಂದ 800 ಕ್ಯೂಸೆಕ್ಸ್ ನೀರು ಹರಿಸಲಾಗಿದೆ. ನರಗುಂದ ಶಾಖಾ ಕಾಲುವೆಗೆ ಇನ್ನೂ ಹೆಚ್ಚಿನ 200 ಕ್ಯೂಸೆಕ್ಸ್ ನೀರಿನ ಅಗತ್ಯವಿದ್ದು ಸಧ್ಯದಲ್ಲಿ ನೀರು ಕಾಲುವೆಗೆ ಹರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಕಳೆದ ವರ್ಷ ನವಿಲು ತೀರ್ಥ ಆಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಇದೇ 10 ತಿಂಗಳಿನಲ್ಲಿ 2055 ಅಡಿಯಿದ್ದ ಸಂದರ್ಭದಲ್ಲಿ ಕೆರೆಗಳಿಗೆ ಆಗ ನೀರು ಹರಿಸಲಾಗಿತ್ತು. ಈ ಭಾರಿ ಇದೇ ವರ್ಷ 10 ತಿಂಗಳಿನಲ್ಲಿ 2059 ಅಡಿ ನೀರಿದ್ದು ಆದಷ್ಟು ಸರಿಯಾಗಿ ಕೆರೆಗಳಿಗೆ ನೀರು ಬರುವಂತೆ ನೋಡಿಕೊಳ್ಳಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಲಾಗಿದೆ ಎಂದು ತಿಳಿಸಿ ಅಧಿಕಾರಿಗಳು ಜವಾಬ್ದಾರಿ ಸ್ಥಾನದಲ್ಲಿ ಕೆರೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರಲ್ಲದೇ, ಜಮೀನುಗಳಿಗೆ ನೀರು ಹರಿಸಲು ಸಹ ಕ್ರಮಕೈಗೊಳ್ಳಲಾಗುವುದು. 10 ದಿನಗಳ ನಂತರ ಈ ಕ್ರಮ ಜಾರಿಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವ್ಹಿ.ಎನ್. ಕೊಳ್ಳಿಯವರ, ಎಸ್.ಡಿ. ಕೊಳ್ಳಿಯವರ, ರಾಜು ಕಲಾಲ, ತಾಪಂ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ಮಲಪ್ರಭೆ ಘಟಪ್ರಭೆ ನೀರು ನಿರ್ವಹಣಾ ಮಂಡಳಿ ಅಧ್ಯಕ್ಷ ಸಹದೇವಗೌಡ ಪಾಟೀಲ, ಗುರುಪಾದಪ್ಪ ಕುರಹಟ್ಟಿ, ಎಂ.ಎಂ. ಮುಳ್ಳೂರ. ವಿಠಲ ಶಿಂಧೆ. ಎಫ್.ವೈ. ದೊಡಮನಿ, ಇಸಾಕ್ ಮಸೂತಿಮನಿ, ದ್ಯಾಮಣ್ಣ ಸವದತ್ತಿ, ದ್ಯಾಮಣ್ಣ ಕಾಡಪ್ಪನವರ, ಎಂ.ಬಿ. ಅರಹುಣಸಿ, ಹಾಗೂ ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ, ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಯಕ ಅಭಿಯಂತರ ಬಿ.ಕೆ. ಕುದರಿ, ಸಹಾಯಕ ಅಭಿಯಂತರ ಸುದಾಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here