ಕಿತ್ತೂರ ರಾಣಿ ಚನ್ನಮ್ಮ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕ ಘೋಷಿಸುವಂತೆ ಆಗ್ರಹಿಸಿ ಮನವಿ

0
19
loading...

ಕನ್ನಡಮ್ಮ ಸುದ್ದಿ ಬೈಲಹೊಂಗಲ
ಪಟ್ಟಣದಲ್ಲಿರುವ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ, ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರ ರಾಣಿ ಚನ್ನಮ್ಮಳ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವಂತೆ ಆಗ್ರಹಿಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಸಮಿತಿ ಪದಾಧಿಕಾರಿಗಳು ಮಂಗಳವಾರ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಸೋಮಶೇಖರ ಬೋರಕನವರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಪಟ್ಟಣದಲ್ಲಿರುವ ಕಿತ್ತೂರು ಚನ್ನಮ್ಮಾಜಿಯವರÀ ಸಮಾಧಿ ಸ್ಥಳ ಸಮಗ್ರ ಅಭಿವೃದ್ದಿಯಿಂದ ಮರಿಚಿಕೆಯಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ವೀರರ ಸ್ಮರಣೆ ಮಾಡುವದು ಅತ್ಯವಶ್ಯವಾಗಿದೆ. ಎಂದರು.
ಇತಿಹಾಸ ಪುಟ ಸೇರಿರುವ ಇಂತಹ ಮಹಾನ ವ್ಯಕ್ತಿಗಳ ಹೋರಾಟ, ಶೂರತನದ ಕುರಿತು ಇಂದಿನ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಸರ್ಕಾರ ಕಿತ್ತೂರು ಚನ್ನಮ್ಮಾಜಿಯ ಸಮಾಧಿ ಸ್ಥಳವನ್ನು ಅಭಿವೃದ್ದಿ ಪಡಿಸಿ ಅದನ್ನು ರಾಷ್ಟ್ರೀಯ ಸ್ಮಾರಕ ಘೋಷಿಸಬೇಕು. ಅಕ್ಟೋಬರ 23 ರಂದು ಕಿತ್ತೂರು ಉತ್ಸವದಕ್ಕಿಂತ ಮೊದಲೇ ದಿ. ಅ 21 ರಂದು ರಾಷ್ಟ್ರೀಯ ಸ್ಮಾರಕವಾಗಿ ಘೊಷಿಸಬೇಕು. ಇಲ್ಲವಾದಲ್ಲಿ ವೀರರಾಣಿಯ ಸಮಾಧಿ ಸ್ಥಳದ ಮುಂಭಾಗದಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಿತೇಶ ಪಾಟೀಲ, ಆನಂದ ಮೂಗಿ, ರಫೀಕ ಬಡೇಘರ, ಸುಭಾಷ ಮೆಕ್ಕೇದ, ರವಿ ತುರಮರಿ, ಯಲ್ಲಪ್ಪ ಬಡ್ಲಿ, ವಿಶಾಲ ಹೊಸೂರ, ಫಕೀರಗೌಡ ಸಿದ್ದನಗೌಡರ, ಮಹಾಂತೇಶ ಬೋರಕನವರ, ನೀಲಮನಿ, ಬಾಗೇವಾಡಿ, ನಿಂಗಪ್ಪ ಕುರಿ, ಮಂಜು ಅಮ್ಮಿನಭಾವಿ ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here